ಕಲಬುರಗಿ; ಪ್ರಶಾಂತ ನಗರ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ರಾಮ ಸೇವಾ ಪರಿಷತ್ ವತಿಯಿಂದ 10 ದಿವಸಗಳಿಂದ ನಡೆದ ಧಾರ್ಮಿಕ ಶಿಬಿರದ ಮಂಗಳ ಶುಕ್ರವಾರ ನೆರವೇರಿತು. ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಆದೇಶದಂತೆ ಪ್ರತಿ ವರ್ಷವೂ ನಡೆಯುತ್ತಿದ್ದು ಈ ಶಿಬಿರದಲ್ಲಿ ಮಕ್ಕಳಿಗೆ, ಹಾಗೂ ದೊಡ್ಡವರಿಗೂ ಸಂದ್ಯಾವಂಧನೆ, ದೇವರ ಪೂಜಾ ಪದ್ದತಿ, ಬ್ರಹ್ಮಯಜ್ಞ, ಸ್ತೋತ್ರ ಕಲಿಕಾ ಶಿಬಿರ ನಡೆಯಿತು.
ಪಂ ಭಾರತೀಶಾಚಾರ್ಯ, ಹಾಗೂ ವಲ್ಲಭಾಚಾರ್ಯ ಪಾಠ ಹೇಳಿದರು. ಆಯೋಜಕರು ಹಾಗೂ ಪರಿಷತ್ ಅಧ್ಯಕ್ಷರಾದ ಗುಂಡಾಚಾರ್ಯ ನರಿಬೊಳ ಮಾತನಾಡುತ್ತ ನಮ್ಮ ಸನಾತನ ಸಂಸ್ಕøತಿ ಬೆಳೆಯಲು ವೇಧ ಉಪನಿಷತ್ತು ಬಹಳ ಮುಖ್ಯವಾಗಿದ್ದು. ಚಿಕ್ಕ ಮಕ್ಕಳ್ಳಿದ್ದಾಗಲೇ ಸಂದ್ಯಾವಂಧನೆ, ಭಗವದ್ಗೀತೆ, ವೇಧ, ಉಪನಿಷತ್ತು, ಪುರಾಣಗಳ ಬಗ್ಗೆ ಪಾಠ ಹೇಳಬೇಕು ಅಂದಾಗ ಮಾತ್ರ ಸಂಸ್ಕಾರ ಬೆಳೆಯಲು ಸಾದ್ಯ, ಎಂದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಂ ಗೋಪಾಚಾರ್ಯ ಅಕಮಂಚಿ, ರಾಮಾಚಾರ್ಯ ಘಂಟಿ, ಕೃಷ್ಣಾ ಜಿ ಕುಲಕರ್ಣಿ, ರವಿ ಲಾತೂರಕರ್, ಅವಿನಾಶ ಕುಲಕರ್ಣಿ, ರಾಘವೇಂದ್ರ ನಿಲುರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.