ಕಲಬುರಗಿ; ಮತದಾನ ಮತ್ತು ಮತ ಎಣಿಕೆ ದಿನ ಮದ್ಯ ಮಾರಾಟ ನಿಷೇಧ

0
7

ಕಲಬುರಗಿ; ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ 2023ರ ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಮದ್ಯಪಾನ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಯಶವಂತ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ.

2023ರ ಮೇ 10ರಂದು ನಡೆಯುವ ಮತದಾನದ ಪ್ರಯುಕ್ತ (ಮತದಾನವು ಮುಕ್ತಾಯವಾಗುವ 48 ಗಂಟೆಗಳ ಅವಧಿಯೊಳಗಿನ ದಿನಗಳು) ಅಂದರೆ 2023ರ ಮೇ 8 ರ ಸಂಜೆ 6 ಗಂಟೆಯಿಂದ ಮೇ 10 ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮೇ 13 ರಂದು ನಡೆಯುವ ಮತ ಎಣಿಕೆ ಪ್ರಯುಕ್ತ ಮೇ 13 ರ ಬೆಳಗಿನ 6  ಗಂಟೆಯಿಂದ ಮೇ 14ರ ಬೆಳಗಿನ 6 ಗಂಟೆಯವರೆಗೆ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತಹ ಎಲ್ಲಾ ತರಹದ ಮದ್ಯ ಮಾರಾಟ, ಶೇಖರಣೆ, ಮದ್ಯಪಾನವನ್ನು ನಿಷೇಧಿಸಲಾಗಿದ್ದು, ಇದಲ್ಲದೇ ಬಾರ್‍ಗಳು, ಕ್ಲಬ್‍ಗಳು, ಮತ್ತು ಬಾರ್ ರೆಸ್ಟೋರೆಂಟ್ ಹಾಗೂ ಮದ್ಯದ ಡೀಪೋ (ಕೆ.ಎಸ್.ಬಿ.ಸಿ.ಎಲ್.) ಗಳನ್ನು ಮುಚ್ಚುವುದರೊಂದಿಗೆ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ “ಶುಷ್ಕ” (ಆಡಿಥಿ ಆಚಿಥಿs) ದಿನಗಳೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 135 (ಸಿ) ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳು ಸಾಮಾನ್ಯ ಷರತ್ತುಗಳು)  ನಿಯಮಗಳು 1967ರ ನಿಯಮ-10 (ಬಿ) ರನ್ವಯ ಈ ಆದೇಶ ಹೊರಡಿಸಲಾಗಿದೆ.

ಈ ಆದೇಶದಲ್ಲಿನ ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1951ರ ಕಲಂ 135ಸಿ (2) ಮತ್ತು (3) ರನ್ವಯ ಶಿಕ್ಷೆಗೆ ಒಳಪಡಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here