ಸುರಪುರ: ನಗರದ ಎಪಿಎಂಸಿಯಲ್ಲಿ ನೆರೆ ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ಗಂಜಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೂರ್ಮರಾವ್ ಭೇಟಿ ನೀಡಿದರು.
ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ತಾಲೂಕಿನ ಹಾವಿನಾಳ ಮುಷ್ಠಳ್ಳಿ ಮತ್ತು ಶೆಳ್ಳಿಗಿ ಗ್ರಾಮದ ನೆರೆ ಸಂತ್ರಸ್ತರಿಗೆ ಗಂಜಿ ಕೇಂದ್ರದಲ್ಲಿ ಎನ್. ಡಿ.ಆರ್.ಎಫ್ ವತಿಯಿಂದ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷದೋಪಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ನೆರೆ ಸಂತ್ರಸ್ತರು ಮನವಿ ಮಾಡುತ್ತಾ ಸುಮಾರು ಹತ್ತು ದಿನಗಳಿಂದ ನಾವು ಗಂಜಿ ಕೇಂದ್ರದಲ್ಲಿ ನಮ್ಮ ಮನೆ ಜಮೀನುಗಳ ಪರಿಸ್ಥಿತಿ ಹೇಗಿದೆ ಎಂದು ಗೊತ್ತಿಲ್ಲ ಈಗ ನೀರು ಕಮ್ಮಿ ಆಗಿದ್ದರಿಂದ ನಮ್ಮ ಮನೆಗಳಿಗೆ ನಾವು ತೆರಳುವುದಾಗಿ ಮನವಿ ಮಾಡಿದರು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ:ಆರ್. ವಿ.ನಾಯಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಲಾಲ್ ಸಾಬ್, ಗ್ರಾಮಲೆಕ್ಕಾಧಿಕಾರಿ ಪ್ರದೀಪ್ ನಾಲ್ವಡೆ ಸೇರಿದಂತೆ ಎಂದಿ ಆರ್ಯ ಯೋಧರು ಮತ್ತತರೆ ಅಧಿಕಾರಿಗಳಿದ್ದರು.