ಸುರಪುರ: ರಾಮ ಮಂದಿರದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ

0
5

ಸುರಪುರ: ನಗರದ ಶ್ರೀರಾಮ ಮಂದಿರದಲ್ಲಿ ಆದಿಗುರು ಶಂಕರಚಾರ್ಯರ ಜಯಂತಿಯನ್ನು ಆಚರಿಸಲಾಯಿತು.ಆರಂಭದಲ್ಲಿ ಶಂಕರಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.

ಈ ಸಂದರ್ಭದಲ್ಲಿ ವಿಪ್ರ ಸಮಾಜದ ಹಿರಿಯರಾದ ಕೃಷ್ಣಭಟ್ ಜೋಷಿ ಮಾತನಾಡಿ, ಸನಾತನ ಧರ್ಮವು ಅನ್ಯ ಧರ್ಮಗಳ ಪ್ರಾಬಲ್ಯದಿಂದ ದುರ್ಬಲವಾಗುತ್ತಿದ್ದ ಕಾಲದ್ಲಿ ಸನಾತನ ಧರ್ಮವನ್ನು ಪುನರುಜ್ಜೀವನ ಮಾಡಲು ಅವತರಿಸಿದದವರೇ ಆದಿ ಶಂಕರಾಚಾರ್ಯರು.

Contact Your\'s Advertisement; 9902492681

ಜಗತ್ತಿಗೆ ವೇದಗಳ ಸಾರವನ್ನು ಶಂಕರಾಚಾರ್ಯರು ಪ್ರತಿಪಾದಿಸಿದವರು ವಿದ್ಯೆಗೆ ಹೆಚ್ಚಿನ ಒತ್ತು ನೀಡಿದ ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ಸನಾತನ ಧರ್ಮವನ್ನು ಮರು ಪ್ರತಿಷ್ಠಾಪಿಸಿದರು ಎಂದು ಹೇಳಿದರು ಭಾರತ ದೇಶದ ನಾಲ್ಕು ದಿಕ್ಕುಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಜ್ಞಾನ ಮಾರ್ಗವನ್ನು ವಿಶ್ಲೇಷಿಸುವ ಅದ್ವೈತ ಮಾರ್ಗವನ್ನು ಪ್ರತಿಪಾದಿಸಿ ನಾಲ್ಕು ಮಠಗಳನ್ನು ಸ್ಥಾಪಿಸಿ ತಮ್ಮ ಶಿಷ್ಯರನ್ನು ಮಠಾಧಿಪತಿಗಳನ್ನಾಗಿ ಮಾಡಿದರು, ಜೀವನ ಸಾರ್ಥಕತೆಗೆ ಮುಕ್ತಿ ಸಾಧನೆಗೆ ಅನುಕೂಲವಾಗುವಂತೆ ದೇವತಾ ಸ್ತುತಿಗಳನ್ನು ಹಾಗೂ ಸ್ತೋತ್ರಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ವಿಪ್ರ ಸಮುದಾಯದ ಪ್ರಮುಖರಾದ ದೇವದಾಸ್ ಭಟ್, ಕೇದಾರನಾಥ ಶಾಸ್ತ್ರಿ, ರಾಮಭಟ್ ರಾಜಜೋಶಿ, ಕಲ್ಲಂಭಟ್ ರಾಜಜೋಶಿ, ಸುಧಾಕರ್ ಜೋಶಿ, ಭೀಮಭಟ್ ಜೋಶಿ, ಶ್ರೀಹರಿರಾವ್ ಆದೋನಿ, ನರಸಿಂಹಾಚಾರ್ ಜೋಶಿ ಮಂಗಳೂರು, ಶ್ರೀಕರ ಜೋಶಿ, ದತ್ತಾತ್ರೇಯ ಜಾಗೀರದಾರ, ಶೇಷಭಟ್ ಶಾಸ್ತ್ರಿ, ಗಣೇಶ್ ಜಾಗೀರದಾರ, ನಾಗರಾಜ ಹಾಲಗಿರಿ, ಕೃಷ್ಣ ಬಳಗನೂರ, ಉಮಾಶಂಕರ ದೀಕ್ಷಿತ್, ರಮೇಶ ಕುಲ್ಕರ್ಣಿ, ರಾಘವೇಂದ್ರ ಕುಲ್ಕರ್ಣಿ ಗೆದ್ದಲಮರಿ, ಅಣ್ಣಯ್ಯ ಶಾಸ್ತ್ರಿ, ಓಂಕಾರ್ ಭಟ್, ನವೀನ ಕೃಷ್ಣ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here