ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರು ನಮ್ಮ ಕನ್ನಡ ನಾಡಿನ ಮಣ್ಣಿನ ಸಂಸ್ಕøತಿಯಿಂದ ಬಂದವರಾಗಿದ್ದಾರೆ. ವಿಶ್ವ ಪ್ರೇಮ, ವಿಶ್ವಬಾಂಧವ್ಯ, ವಿಶ್ವ ಶಾಂತತ್ವವನ್ನು ಬೆಳೆಸಿ, ವಚನ ಸಾಹಿತ್ಯವನ್ನು ವಿಶ್ವಮಾನ್ಯ ಸಾಹಿತ್ಯವನ್ನಾಗಿ ಮಾಡಿದ್ದಾರೆ. ವಚನಗಳು ಪ್ರತಿಯೊಬ್ಬರೂ ಸಮಾಜದಲ್ಲಿ ನೈತಿಕವಾಗಿ ಹೇಗೆ ಬದುಕಬೇಕು ಎಬ ಮಾರ್ಗದರ್ಶನ ಮಾಡುವ ದಾರಿ ದೀಪಗಳಾಗಿವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಾಡೋಜ ಗೌರವ ಪ್ರಶಸ್ತಿ ಪಡೆದ ಹಿನ್ನೆಲೆ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ವಚನಕಾರರು ವಚನ ಸಾಹಿತ್ಯವನ್ನು ಕನ್ನಡದಲ್ಲಿ ರಚಿಸುವ ಕಾರಣಕ್ಕಾಗಿ ಕನ್ನಡ ಭಾಷೆ ಇಂದಿಗೂ ಜೀವಂತವಿದೆ. ಮುಂದೆಯೂ ಜೀವಂತವಾಗಿರುತ್ತದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿಶ್ವದಲ್ಲಿಯೇ ನಮ್ಮ ಕನ್ನಡ ಭಾಷೆ, ಸಂಸ್ಕøತಿ ಮತ್ತು ಪರಂಪರೆಗೆ ಅಗ್ರ ಸ್ಥಾನವಿದೆ. ಹೀಗಾಗಿ ಈ ಭಾಷೆಯ ಉಳಿವಿಗಾಗಿ ಕಲ್ಯಾಣ ಭಾಗದ ಕನ್ನಡದ ಮಠವೆಂದೇ ಪ್ರಸಿದ್ಧಿ ಪಡೆದ ಭಾಲ್ಕಿ ಮಠ ಬಹು ದೊಡ್ಡ ಕೊಡುಗೆ ನೀಡಿದೆ ಎಂದ ಅವರು, ಬಸವಣ್ಣನವರ ತತ್ವ, ವಿಚಾರ, ಸಿದ್ಧಾಂತಗಳು ಇಮದು ಚಾಚು ತಪ್ಪದೇ ಪಾಲಿಸುತ್ತಾ ಬರುತ್ತಿರುವವರು ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಗೌರವ ಪ್ರಶಸ್ತಿ ಪುರಸ್ಕøತ ಡಾ. ಬಸವಲಿಮಗ ಪಟ್ಟದ್ದೇವರು ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ವಿಜ್ಞಾನಿ ಪ್ರೊ. ಬಿ ಎ ಪಾಟೀಲ ಮಹಾಗಾಂವ, ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್, ಪ್ರಮುಖರಾದ ಎಸ್ ಎಸ್ ಹಿರೇಮಠ, ಪ್ರೊ ಎಸ್ ಎಲ್ ಪಾಟೀಲ, ಶಂಕರಗೌಡ ಪಾಟೀಲ, ಗುರುಬಸಪ್ಪ ಸಜ್ಜನಶೆಟ್ಟಿ, ಬಾಬುರಾವ ಪಾಟೀಲ ಚಿತ್ತಕೋಟಾ, ಡಾ.ಬಾಬುರಾವ ಶೇರಿಕಾರ, ರೇವಣಸಿದ್ದಪ್ಪ ಜೀವಣಗಿ, ನಾಗಪ್ಪ ಎಂ ಸಜ್ಜನ, ಬಿ ಎಂ ಪಾಟೀಲ ಕಲ್ಲೂರ, ಮಂಜುನಾಥ ಕಂಬಾಳಿಮಠ, ಶಿವಕುಮಾರ ಸಿ.ಹೆಚ್., ಮಾಣಿಕ್ ನಾಗಗುಂಡ, ವಿನೋದಕುಮಾರ ಜೇನವೇರಿ, ಚಂದ್ರಶೇಖರ ಮ್ಯಾಳಗಿ, ಪದ್ಮಾವತಿ ನಾಯಕ್, ನವಲಿಂಗ್ ಪಾಟೀಲ, ಸಂದೀಪ ಭರಣಿ, ಜಗದೀಶ ಮರಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಮಲ್ಲಿಕಾರ್ಜುನ ಕೋಟೆ, ಗುರುಸ್ವಾಮಿ ಸಂಕಿನಮಠ, ಸಿದ್ಧಲಿಂಗ ಮಡಿವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.