ಎಂ.ಎನ್ ದೇಸಾಯಿ ಕಾಲೇಜುವತಿಯಿಂದ ಮತದಾನ ಜಾಗೃತಿ ಜಾಥಾ

0
20

ಕಲಬುರಗಿ: ಎಂ.ಎನ್ ದೇಸಾಯಿ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ಮಹಾವಿದ್ಯಾಲಯದ ಶಿಕ್ಷಕ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನಗರದಲ್ಲಿ “ಮತದಾನ ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಎಂ. ಎನ್ ದೇಸಾಯಿ ಕಾಲೇಜಿನಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಮತದಾನ ಜಾಗೃತಿ ಕುರಿತು ಮುಖ್ಯ ರಸ್ತೆಯುದ್ದಕ್ಕೂ ಸಂಚರಿಸಿ ಮತದಾನ ಜಾಗೃತಿ ಮತ್ತು ಕಡ್ಡಾಯವಾಗಿ ಮತದಾನ ಮಾಡಿ ಎಂಬ ಘೋಷಣೆಗಳೊಂದಿಗೆ ಜಾಥಾ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ನಾಲ್ಕುಚಕ್ರ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿ ಭಾರತದ ಸಂವಿಧಾನ ಹೆಣ್ಣು ಗಂಡು, ಬಡವ ಶ್ರೀಮಂತರೆನ್ನದೆ ಸರ್ವರಿಗೂ ಒಂದೇ ಮತಾದಿಕಾರ ನೀಡಿದೆ. ಮತದಾನ ಪವಿತ್ರವಾದದ್ದು ಅದನ್ನು ಆಸೆ ಆಮಿಷಗಳಿಗೆ ಬಲಿಯಾಗಿ ನಿಮ್ಮ ಮತಾದಿಕಾರದ ಮೌಲ್ಯ ಕಡಿಮೆ ಯಾಗದಂತೆ ನೋಡಿಕೊಳ್ಳಿ ಎಂದು ತಿಳಿ ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪರ್ತಕರ್ತ ಭಿಮಾಶಂಕರ ಫೆರೋಜಬಾದ ಮಾತನಾಡಿ, ಯುವ ಸಮೂಹದ ಭಾಗವಹಿಸುವಿಕೆ ಪ್ರಜಾಪ್ರಭುತ್ವಕ್ಕೆ ವರದಾನ ಎಂದು ಹೇಳಿ ಕಡ್ಡಾಯವಾಗಿ ಮೇ 10 ರಂದು ತಮ್ಮ ಅಮೂಲ್ಯವಾದ ಮತವನ್ನು ತಪ್ಪದೇ ಚಲಾಯಿಸುವಂತೆ ಮನ ಮುಟ್ಟುವಂತೆ ತಿಳಿಯಪಡಿಸಿದರು ನಮ್ಮ ಮತ ನಮ್ಮ ಹಕ್ಕು ತಪ್ಪದೇ ಮತದಾನ ಮಾಡಿ ಎಂದು, ಭವ್ಯ ಭಾರತ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಸಂದಿಪ ದೇಸಾಯಿ ಮಾತನಾಡಿ, ಕಡ್ಡಾಯವಾಗಿ ಮತ ಚಲಾಯಿಸುವಂತೆ ಅರಿವು ಮೂಡಿಸಿ ಮತ್ತು ಮತದಾರರ ಪ್ರತಿಜ್ಞಾ ವಿಧಿ ಭೋದಿಸಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಕಾರ್ಯದರ್ಶಿ ಜಗನ್ನಾಥ್ ನಾಗೂರ್, ರಾಷ್ಟ್ರೀಯ ಕರಾಟೆ ಪಟು ವೈಶಾಲಿ ನಾಟೀಕರ್, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ವ್ಹಿ ಎಂ ಹಿರೇಮಠ್, ನಾಗರಾಜ್ ಪಟ್ಟನಕರ್, ಅನ್ನಪೂರ್ಣಾ ರೆಡ್ಡಿ, ಕಲಾ ವಿಭಾಗದ ಪ್ರಾಧ್ಯಾಪಕರಾದ ಆನಂದತೀರ್ಥ ಜೋಶಿ, ಪ್ರಿಯಾಂಕಾ ಕಾರ್ಣಿಕ್, ಎನ್.ಎಸ್.ಎಸ್ ಅಧಿಕಾರಿ ಮಂಜುನಾಥ್ ಬನ್ನೂರು, ಆಡಳಿತಾಧಿಕಾರಿ ರಾಧಿಕಾ ಗುತ್ತೇದಾರ್, ಅನ್ನಪೂರ್ಣಾ ಪಸಾರ್, ಅಂಬಿಕಾ ಕೊಬಾಳ್, ಕಾಶಿಬಾಯಿ ವಗ್ಗೆನೂರ್ ವಿದ್ಯಾರ್ಥಿಗಳು ಭಾಗವಿಸಿದ್ದರು. ಉಪನ್ಯಾಸಕ ಡಿ ಪಿ ಸಜ್ಜನ್ ನಿರೂಪಿಸಿದರು. ಶಿವಶರಣಪ್ಪ ಪೂಜಾರಿ ಸ್ವಾಗತಿಸಿದರು, ಮಹೇಶ್ ತೆಗ್ಗಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here