ಕಲಬುರಗಿ; 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕೆಳಕಂಡ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಆಸಕ್ತಿಯುಳ್ಳ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ ಸರ್ಕಾರಿ ಶಾಲೆಗಳ ವಿವರ ಇಂತಿದೆ. ಕಮಲಾಪುರ ಕಲಬುರಗಿಯ ಎಂ.ಎಸ್.ಕೆ.ಮಿಲ್, ಫರಹತಾಬಾದ, ಕಲಬುರಗಿ(ಮಾಲಗತ್ತಿ) ಮಹಿಬೂಬನಗರ, ಪಟ್ಟಣ ಪಂಚಾಯತ್ ಅಫಜಲಪೂರ ಟೌನ್, ಅಫಜಲಪುರ ತಾಲೂಕಿನ ಸರ್ಕಾರಿ ಶಾಲೆ ಮಣ್ಣೂರ, ಆಳಂದ ತಾಲೂಕಿನ ನರೋಣಾ ಮತ್ತು ಬಂಗಡಿ ಪೀರ ಕಾಲೋನಿ ಆಳಂದ ಟೌನ್, ಚಿಂಚೋಳಿ, ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಮತ್ತು ಸುಲೇಪೇಟ್, ಚಿತ್ತಾಪುರ ತಾಲೂಕಿನ ಸೋನಾಬಾಯಿ ಏರಿಯಾ ಉರ್ದು ಶಾಲೆ ವಾಡಿ (ಜಂ), ಶಹಾಬಾದ ಉರ್ದು ಶಾಲೆ ಗಂಜ್ ಏರಿಯಾ ಶಹಾಬಾದ, ಚಿತ್ತಾಪುರ ಬಸ್ ಸ್ಟಾಂಡ್ ಹತ್ತಿರ ಸರ್ಕಾರಿ ಶಾಲೆ ಚಿತ್ತಾಪುರ ಟೌನ್, ಸಮಾಜ ಕಲ್ಯಾಣ ಇಲಾಖೆ ಕಟ್ಟಡ ಸರ್ಕಾರಿ ಉರ್ದು ಶಾಲೆ ಹತ್ತಿರ ಕಾಳಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೃಷಿ ಇಲಾಖೆ ಹತ್ತಿರ ಜೇವರ್ಗಿ ಟೌನ್, ಯಡ್ರಾಮಿ ತಾಲೂಕಿನ ಇಜೇರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೊದಲನೇ ಮಹಡಿ ಇಜೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಜಾಮೀಯಾ ಮಸೀದಿ ಹತ್ತಿರದ ಅರಳಗುಂಡಗಿ ಕ್ರಾಸ್ ಯಡ್ರಾಮಿ, ಸೇಡಂ ಬಿ.ಎಸ್.ಎನ್.ಎಲ್. ಆಫೀಸ್ ಹಿಂದುಗಡೆಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಮಳಖೇಡಗಳಲ್ಲಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.
ಮಾದರಿ ಶಾಲೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯಕ್ಕೆ ಶೇಕಡಾ 75 ಹಾಗೂ ಇತರೆ ವರ್ಗಗಳ ವಿದ್ಯಾರ್ಥಿಗಳಿಗೆ ಶೇಕಡಾ ಶೇ. 25 ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಎಲ್ಲಾ ಮೌಲಾನಾ ಆಜಾದ ಮಾದರಿ ಶಾಲೆ, ಅಲ್ಪಸಂಖ್ಯಾತರ ತಾಲೂಕಾ ವಿಸ್ತರಣಾಧಿಕಾರಗಳ ಕಚೇರಿ ಹಾಗೂ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಲಬುರಗಿ ಕಚೇರಿಯಿಂದ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಕಛೇರಿ, ಕುಡಾ ಕಟ್ಟಡ ಮೊದಲನೆ ಮಹಡಿ ಸ್ಟೇಷನ ರಸ್ತೆ ಕಲಬುರಗಿ.08472-247260 ಹಾಗೂ ರಾಜ್ಯ ಮಟ್ಟದ ಅಲ್ಪಸಂಖ್ಯಾತರ ಇಲಾಖೆಯ ಸಹಾಯವಾಣಿ 8277799990(24*7) ಗಳಿಗೆ ಸಂಪರ್ಕಿಸಲು ಕೋರಲಾಗಿದೆ.