ನಾಳೆ ವಾಡಿಗೆ ನಟ ಚೇತನ್, ಕನ್ಹಯ್ಯ ಆಗಮನ

0
70

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿದ ಐತಿಹಾಸಿಕ ನೆಲ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಏ.27 ರಂದು ಆಚರಿಸಲಾಗುತ್ತಿರುವ ಅಂಬೇಡ್ಕರ್ ಜಯಂತಿ ಸಮಾರಂಭಕ್ಕೆ ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಹಾಗೂ ಜೆನ್‍ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್ ಆಗಮಿಸಲಿದ್ದಾರೆ ಎಂದು ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಮಟೆ, ಅಂಬೇಡ್ಕರ್ ಅವರ ಭೇಟಿಯ ನೆನಪುಗಳನ್ನು ಜೀವಂತವಾಗಿಡಲು ಪ್ರತಿ ವರ್ಷ ವಾಡಿಯಲ್ಲಿ ಏ.27 ಮತ್ತು 28 ರಂದೇ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಯಾವೂದೇ ಅಡೆತಡೆಗಳು ಎದುರಾದರೂ ಈ ಎರಡು ದಿನಗಳು ಮಾತ್ರ ಬದಲಾಗುವುದಿಲ್ಲ. ಪರಿಣಾಮ ಈ ವರ್ಷ ಏ.27 ರಂದು ಸಂಜೆ 6:00 ಗಂಟೆಗೆ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಲಾಗಿರುವ ಬೃಹತ್ ಬಹಿರಂಗ ಸಭೆಗೆ ನಟ ಚೇತನ್ ಹಾಗೂ ಕನ್ಹಯ್ಯಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಬೌದ್ಧ ಭಿಕ್ಷುಗಳಾದ ಧಮ್ಮಾನಂದ ಥೇರೊ, ಭಂತೆ ಜ್ಞಾನಸಾಗರ, ಬೌದ್ಧ ಬಿಕ್ಕುಣಿ ಮಾತಾ ಅರ್ಚಸ್ಮತಿ ಸಾನಿಧ್ಯ ವಹಿಸುವರು.

Contact Your\'s Advertisement; 9902492681

ಶಾಸಕ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಸಾಹಿತಿ ಬುದ್ಧಘೋಷ ದೇವೇಂದ್ರ ಹೆಗ್ಗಡೆ ಉಪನ್ಯಾಸ ನೀಡುವರು. ದಲಿತ ಸಮುದಾಯದ ಜನಪ್ರತಿನಿಧಿಗಳು ಹಾಗೂ ವಿವಿಧ ಸಮಾಜಗಳ ಅಧ್ಯಕ್ಷರುಗಳು ಅತಿಥಿಗಳಾಗಿ ಪಾಲ್ಗೊಳ್ಳುವರು. ಇದಕ್ಕೂ ಮೊದಲು ಅಶೋಕ ಚಕ್ರ ಮೆರವಣಿಗೆ ನಡೆಯಲಿದೆ. ಏ.28 ರಂದು ಎಂದು ಬೆಳಗ್ಗೆ 10:00 ಗಂಟೆಯಿಂದ ಅಂಬೇಡ್ಕರ್ ಭಾವಚಿತ್ರ ಹಾಗೂ ಬೌದ್ಧ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ ಎಂದರು.

ಬೌದ್ಧ ಸಮಾಜದ ಪ್ರಧಾನ ಕಾರ್ಯದರ್ಶಿ ದೇವಿಂದ್ರ ನಿಂಬರ್ಗಾ, ಮುಖಂಡರಾದ ಮಲ್ಲೇಶಪ್ಪ ಚುಕ್ಕೇರ, ಸತೀಶ ಭಟ್ಟರ್ಕಿ, ಚಂದ್ರಸೇನ ಮೇನಗಾರ, ಶರಣಬಸು ಸಿರೂರಕರ, ಸೂರ್ಯಕಾಂತ ರದ್ದೇವಾಡಿ, ಮಲ್ಲೇಶ ನಾಟೀಕಾರ, ರಮೇಶ ಬಡಿಗೇರ, ಅಮೃತ ಕೋಮಟೆ, ವಿಜಯ ಸಿಂಗೆ, ಚಂದ್ರಶೇಖರ ಧನ್ನೇಕರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here