ಸುರಪುರ: ಬಾವಿಯಲ್ಲಿ ಈಜಾಡಲು ಹೋಗಿ ಬಾಲಕನೊಬ್ಬ ನೀರಲ್ಲಿ ನಾಪತ್ತೆಯಾಗಿರುವ ಘಟನೆ ನಗರದ ರಂಗಂಪೇಟೆಯ ದೊಡ್ಡಬಾವಿಯಲ್ಲಿ ನಡೆದಿದೆ.
ಮೂಲತಃ ಕುಂಬಾರಹಳ್ಳಿಯ ನಿವಾಸಿಯಾಗಿರುವ ನಿತಿನ್ 16 ವರ್ಷದ ಬಾಲಕನ ಪೋಷಕರು ಬೆಂಗಳೂರಿನಲ್ಲಿ ಇರುತ್ತಿದ್ದರು,ನಾಪತ್ತೆಯಾದ ಬಾಲಕ ತುಮಕೂರಿನ ಸಿದ್ದಗಂಗಾ ಮಠದ ಶಾಲೆಯಲ್ಲಿ ಹತ್ತನೆ ತರಗತಿ ಮುಗಿಸಿ ರಜೆಗೆಂದು ಊರಿಗೆ ಬಂದಿದ್ದ.ರಂಗಂಪೇಟೆಯ ತಿಮ್ಮಾಪುರದಲ್ಲಿನ ತಮ್ಮ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಕ್ಕೆಂದು ಆಗಮಿಸಿದ್ದು,ಬಾಲಕನ ಪೋಷಕರು ಕಾರ್ಯಕ್ರಮ ಮುಗಿಸಿ ಮಂಗಳವಾರ ಸಂಜೆ ಬೆಂಗಳೂರಿಗೆ ತೆರಳಿದ್ದರು,ಆದರೆ ಬಾಲಕ ನಿತಿನಿ ಕೆಲ ದಿನಗಳು ಇಲ್ಲಿಯೇ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ಇಲ್ಲಿಯೇ ಉಳಿದಿದ್ದು,ಆದರೆ ಬುಧವರಾ ಸಂಬಂಧಿಕರ ಮನೆಯಲ್ಲಿನ ಎಲ್ಲಾ ಬಾಲಕರೊಂದಿಗೆ ದೊಡ್ಡಬಾವಿಯಲ್ಲಿ ಈಜಾಡಲು ತೆರಳಿದ್ದರು.
ಅವರೊಟ್ಟಿಗೆ ನಿತಿನ್‍ಕೂಡ ತೆರಳಿದ್ದು ಆದರೆ ನಿತಿನ್‍ಗೆ ಈಜು ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.ಜೊತೆಗೆ ಬಂದ ಬಾಲಕರೊಂದಿಗೆ ಸೊಂಟಕ್ಕೆ ಡಬ್ಬಿಯೊಂದನ್ನು ಕಟ್ಟಿಕೊಂಡು ಕೆಲಕಾಲ ಈಜಾಡಿ ನಂತರ ಕಟ್ಟಿಕೊಂಡಿದ್ದ ಡಬ್ಬಿ ಬಿಚ್ಚಿಟ್ಟು ಈಜಾಡಲು ಪ್ರಯತ್ನಿಸಿದ್ದಾನೆ.ಇನ್ನುಳಿದ ಎಲ್ಲಾ ಬಾಲಕರು ತಮ್ಮ ಪಾಡಿಗೆ ತಾವು ಈಜಾಡುತ್ತಿರುವಾಗ ನಿತಿನ್ ಬಾವಿಯಲ್ಲಿ ಆಯತಪ್ಪಿ ನೀರೊಳಗೆ ಹೋಗಿದ್ದು,ಇನ್ನುಳಿದ ಯಾರು ಗಮನಿಸಿಲ್ಲ,ನಂತರ ಮರಳಿ ಮನೆಗೆ ಹೋಗುವಾಗ ನೋಡಿದ್ದು ಬಟ್ಟೆಗಳು ಬಾವಿ ದಂಡೆಯಲ್ಲೆ ಇದ್ದು ನಿತಿನ್ ಮಾತ್ರ ಕಾಣದಾದಾಗ ಎಲ್ಲರು ಗಾಬರಿಗೊಂದು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಮನೆಯವರು ಬಂದು ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದಾಗ ಬಾವಿಯಲ್ಲಿ ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದು,ಬುಧವಾರ ಸಂಜೆವರೆಗೂ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ ಎಂದು ಬಾಲಕನ ಸಂಬಂಧಿ ವೀರಭಧ್ರಪ್ಪ ಕುಂಬಾರ ತಿಳಿಸಿದ್ದಾರೆ.ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಮುಖಂಡರ ಭೇಟಿ: ಬಾಲಕ ಬಾವಿಯಲ್ಲಿ ಕಾಣೆಯಾದ ಬಗ್ಗೆ ಮಾಹಿತಿ ತಿಳಿದು ಅನೇಕ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ,ರಾಜಾ ಮುಕುಂದ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಶಂಕರ ನಾಯಕ ಸೇರಿದಂತೆ ಅನೇಕರು ಭೇಟಿ ನೀಡಿದ್ದಾರೆ.