ನಮ್ಮ ಅಭ್ಯರ್ಥಿ ಅಕ್ಕಿ, ಹಾಲಿನಪುಡಿ ಕಳ್ಳ ಸಾಗಾಣಿಕೆ ಮಾಡುತ್ತಾರೆ ಎಂದು ಸಿಎಂ ಪ್ರಚಾರ ಮಾಡ್ತಾರಾ?

0
44
  • ಪಕ್ಷ ಸೇರಿದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿದ ಪ್ರಿಯಾಂಕ್ ಖರ್ಗೆ..
  • ಚಿತ್ತಾಪುರದ ಸರ್ವಾಂಗೀಣ ಅಭಿವೃದ್ದಿಗೆ ನನ್ನನ್ನು ಬೆಂಬಲಿಸಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ ಖರ್ಗೆ

ಕಲಬುರಗಿ: ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಅಭಿವೃದ್ದಿ ಪರ, ಯುವಕರ ಭವಿಷ್ಯದ ಕಾಳಜಿ‌ ಇರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಹಾಗಾಗಿ ಅವರಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.

ಈ ಸಲದ ಚುನಾವಣೆ ಚಿತ್ತಾಪುರದ ಭವಿಷ್ಯದ ಪ್ರಶ್ನೆಯಾಗಿದೆ. ಬಿಜೆಪಿ ಅಭ್ಯರ್ಥಿ ಪರ ಯಾವೊಬ್ಬ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಬಿಜೆಪಿಯಲ್ಲಿರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಇಲ್ಲವೇ ತಟಸ್ಥರಾಗಿದ್ದಾರೆ ಹಾಗಾಗಿ ಕೇವಲ ಎನ್ ರವಿಕುಮಾರ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದಾರೆ.

Contact Your\'s Advertisement; 9902492681

ಬಸವ ತತ್ವ, ಅಂಬಿಗರ ಚೌಡಯ್ಯನವರ ತತ್ವ ಆದರ್ಶ, ಸಂವಿಧಾನದ ಪರಿಪಾಲನೆ ಹಾಗೂ ಅಭಿವೃದ್ಧಿ ಪರ ಚಿಂತನೆ ಇರುವ ವ್ಯಕ್ತಿ ಚುನಾವಣೆಗೆ ನಿಂತಾಗ ಮಾತ್ರ ಅವರ ಪರ ಮಾತನಾಡಲು ಕಾರ್ಯಕರ್ತರಿಗೆ ಎದೆಗಾರಿಕೆ ಇರುತ್ತದೆ. ಆದರೆ, ಬೆಜೆಪಿ ಪರವಾಗಿ ಅಂತ ವಾತಾವರಣ ಇಲ್ಲ.

ಸಿಎಂ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಲು ಬರುತ್ತಿದ್ದಾರೆ. ಅವರ ಪರ ಏನು ಹೇಳಿ ಮತಯಾಚಿಸುತ್ತಾರೆ. ನಮ್ಮ ಅಭ್ಯರ್ಥಿ ಅಕ್ಕಿ ಹಾಗೂ ಹಾಲಿನಪುಡಿ ಕಳ್ಳ ಸಾಗಾಣಿಕೆ ಮಾಡುತ್ತಾರೆ ಅವರ ಮೇಲೆ 40 ಕೇಸು ದಾಖಲಾಗಿವೆ. ಒಂದು ಕೇಸಿನಲ್ಲಿ ಕೋರ್ಟ್ ಶಿಕ್ಷೆ ನೀಡಿದೆ ಅಂತ ಹೇಳಿ ಪ್ರಚಾರ ಮಾಡುತ್ತಾರೆಯೇ? ಎನ್ ರವಿಕುಮಾರ ಅವರು ಇಂತಹ ಅಭ್ಯರ್ಥಿಯನ್ನು ಸಮರ್ಥ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ನನ್ನ ಮೇಲೂ 8 ಕೇಸುಗಳಿವೆ ಅವೆಲ್ಲ ಸಮಾಜ ಕಲ್ಯಾಣ ಕ್ಕಾಗಿ ಹೋರಾಟ ನಡೆಸಿದಾಗ ಹಾಕಿದ ಕೇಸುಗಳು ಆದರೆ, ಮಣಿಕಂಠನ ವಿಚಾರನೆ ಬೇರೆ ಎಂದರು.

ಇಎಸ್ ಐಸಿ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯದ, ರೇಲ್ವೆ ಪ್ರತ್ಯೇಕ ವಲಯ ತರುವಲ್ಲಿ‌ ವಿಫಲರಾದ, ವಾಡಿ ರೇಲ್ವೆ ಮೇಲ್ಸೇತುವೆ ಪೂರ್ಣಗೊಳಿಸದ ಸಂಸದರನ್ನು ಗುಲಬರ್ಗಾ ಸಂಸದ ಎನ್ನಲು ಹೇಗೆ ಸಾಧ್ಯ? ಅವರು ಕೇವಲ ಚಿಂಚೋಳಿ ಸಂಸದ ಎಂದು ಉಮೇಶ ಜಾಧವ ಅವರಿಗೆ ಕುಟುಕಿದರು.

ವ್ಯಕ್ತಿ ಗಿಂತ ಪಕ್ಷ ಮುಖ್ಯ‌ ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಘೋಷಣೆ ನಿಜವೇ ಆಗಿದ್ದರೆ ಪ್ರತಿಯೊಬ್ಬ ದೇಶಭಕ್ತರು ಪ್ರಿಯಾಂಕ್ ಖರ್ಗೆಗೆ ಓಟು ಮಾಡಬೇಕು ಎಂದ ಅವರು ಮಣಿಕಂಠ ರಾಠೋಡ ಶಾಸಕರಾದರೆ ಜನಸಮಾನ್ಯರ ಮೇಲೂ ಕೇಸು ಬೀಳುತ್ತವೆ. ನಮಗೆ ಅಭಿವೃದ್ದಿಯೇ ಮೂಲಮಂತ್ರ. ಚಿತ್ತಾಪುರದಲ್ಲಿ ಒಂದು ಪರಿಪೂರ್ಣ ಸಮಾಜ ನಿರ್ಮಾಣದ ಕನಸು ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಮುಖ್ಯವಾಹಿನಿಗೆ ತರುವ ತುಡಿತ ನಮಗಿದೆ. ನಮಗೆ ಯಾವುದೇ ಧರ್ಮ ಹಾಗೂ ಜಾತಿಯ ರಾಜಕೀಯ ಬೇಕಿಲ್ಲ. ಹಾಗಾಗಿ ಚಿತ್ತಾಪುರ ಸರ್ವಾಂಗೀಣ ಅಭಿವೃದ್ದಿಗೆ ನನ್ನನ್ನು ಗೆಲ್ಲಿಸಿ ಎಂದರು ಮನವಿ ಮಾಡಿದರು.

ಮಾಜಿ ಜಿಪಂ ಸದಸ್ಯರಾದ ಅರವಿಂದ ಚವ್ಹಾಣ್ ಮಾತನಾಡಿ ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿಗೆ ಚಿತ್ತಾಪುರ ಕ್ಷೇತ್ರಕ್ಕೆ ಕ್ರಿಮಿನಲ್ ಹಿನ್ನೆಲೆಯಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಅಕ್ರಮವಾಗಿ ಅಕ್ಕಿ ಹಾಗೂ ಹಾಲಿನಪುಡಿ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಸುಮಾರು ಕೇಸುಗಳಿವೆ. ಒಂದು ಕೇಸಿನಲ್ಲಿ ನ್ಯಾಯಾಲಯ ಕೂಡಾ ಶಿಕ್ಷೆ ವಿಧಿಸಿದೆ. ಅಂತಹ ಅಭ್ಯರ್ಥಿ ಆಯ್ಕೆ ವಿರೋಧಿಸಿ ನಾವೆಲ್ಲ ಪಕ್ಷದಿಂದ ಹೊರಬಂದು ಜನಪರ ಕಾಳಜಿಯ ಅಭಿವೃದ್ಧಿಯ ಪರವಾಗಿರುವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಲು ಕಾಂಗ್ರೆಸ್ ಸೇರಿದ್ದೇವೆ. ನಾವೆಲ್ಲ ಸೇರಿ ಪ್ರಿಯಾಂಕ್ ಖರ್ಗೆ ಅವರನ್ನು ಗೆಲ್ಲಿಸಬೇಕು ಎಂದರು.

ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ ಮಾತನಾಡಿ ಅರವಿಂದ ಚವ್ಹಾಣ ಅವರಿಗೆ ಟಿಕೇಟ್ ನೀಡಲು ನಾವೆಲ್ಲ ಒತ್ತಾಯಿಸಿದ್ದೆವು. ಆದರೆ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಪಕ್ಷ ಮಣಿಕಂಠ ರಾಠೋಡನಿಗೆ ಟಿಕೇಟ್ ನೀಡಲಾಗಿದೆ. ಗುಲಬರ್ಗಾ ಜಿಲ್ಲೆಯಿಂದ ರಾಠೋಡನನ್ನು ಗಡಿಪಾರು ಮಾಡಿರುವ ಸಂಗತಿ ಗೊತ್ತಿದ್ದರು ಒಬ್ಬ ಸಂಸದ ಒಬ್ಬ ಸಚಿವ ಹಾಗೂ ಕೆಲ ಸ್ವಾಮೀಜಿಗಳು ಸಿಎಂ ಬಳಿ ಮಣಿಕಂಠನನ್ನು ಕರೆದೊಯ್ದು ಸಮಾಜ‌ಸೇವಕ ಎಂದು ಪರಿಚಯಿಸಿ ಟಿಕೇಟ್ ಕೊಡಿಸಿದ್ದಾರೆ. ಆದರೆ, ಆತನ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಸಿಎಂ, ಯಡಿಯೂರಪ್ಪ ಹಾಗೂ ಗೃಹಸಚಿವರಿಗೆ ತಿಳಿಸಿದ್ದೆ. ಈಗ ಅವನ ಪರ ಪ್ರಚಾರ ಮಾಡಲು ಬರುವ ಸಿಎಂ ಪಿಎಂ ಯಾರೇ ಬರಲಿ ಅವನ ಹಿನ್ನೆಲೆ ಬಗ್ಗೆ ಹೇಳಲೇಬೇಕು. ಬಿಜೆಪಿಯವರು ಭಾರತ ಮಾತಾಕೀ ಜೈ ಎನ್ನುತ್ತಾರೆ ಇಂತಹ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ಇಟ್ಟುಕೊಂಡು ಹೇಗೆ ಹೇಳುತ್ತಾರೆ. 26 ವರ್ಷ, ಮೆಟ್ರಿಕ್ ಫೇಲ್ ಹಾಗೂ 40 ಕೇಸು ಇರುವ ಅಂತಹ ವ್ಯಕ್ತಿಯನ್ನು ಗೆಲ್ಲಿಸಿ ವಿಧಾನಸೌಧಕ್ಕೆ‌ ಕಳಿಸಿದರೆ ಚಿತ್ತಾಪುರ ಜನರ ಮರ್ಯಾದೆ ಮಣ್ಣು ಪಾಲಾಗಲಿದೆ ಎಂದು ಪ್ರಶ್ನಿಸಿದರು. ಹಾಗಾಗಿ, ನಾವೆಲ್ಲ ಸೇರಿ ಪ್ರಿಯಾಂಕ್ ಅವರನ್ನು ಗೆಲ್ಲಿಸಿ ಅಭಿವೃದ್ದಿಗೆ ಕೈಜೋಡಿಸೋಣ. ನನಗೆ ಪ್ರಿಯಾಂಕ್ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಹೊಸರು ಗ್ರಾಮದ ಹಲವರು ಹಾಗೂ ಅಲ್ಲೂರು ( ಬಿ) ಗ್ರಾಮದ ಮಲ್ಲಯ್ಯ ಸ್ವಾಮಿ, ಮುಂತಾದವರು ಕಾಂಗ್ರೆಸ್ ಪಕ್ಷದ ತತ್ವ ಹಾಗೂ ಸಿದ್ದಾಂತವನ್ನು ಮತ್ತು ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ದಿಪರ‌ ಚಿಂತನೆ ಮೆಚ್ಚಿ ಕಾಂಗ್ರೆಸ್ ಪಕ್ಷ‌ ಸೇರ್ಪಡೆಗೊಂಡರು.

ಭಾಗನಗೌಡ ಸಂಕನೂರು, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ, ಮಹೇಬೂಬ ಸಾಹೇಬ, ಮುಕ್ತಾರ್ ಪಟೇಲ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here