ಕಲಬುರಗಿ: ಕಾಂಗ್ರೆಸ್ ಪಕ್ಷದ ಪರ ಜನರು ತಮ್ಮ ಒಲವು ಹೆಚ್ಚಾಗಿ ತೋರಿಸುತ್ತಿರುವುದರಿಂದ ಬಿಜೆಪಿಗರು ಹತಾಶೆರಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಪತ್ರಿಕೆಗಳು ಹಾಗೂ ನ್ಯೂಸ್ ಚಾನೆಲ್ ಗಳು ಮತ್ತು ಸರ್ವೆಗಳು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಯವುದನ್ನು ಸೂಚಿಸುತ್ತಿವೆ. ಇದರಿಂದಾಗಿ ಬಿಜೆಪಿ ಪಕ್ಷದ ನಾಯಕರು ಹತಾಶೆರಾಗಿದ್ದಾರೆ. ಈ ವಾತಾವರಣ ರಾಜ್ಯ ಹಾಗೂ ಚಿತ್ತಾಪುರದಲ್ಲಿ ಇದೆ. ಎನ್ ರವಿಕುಮಾರ ಅವರನ್ನು ಹೊರತುಪಡಿಸಿ
ಬಿಜೆಪಿ ಪರವಾಗಿ ಯಾವ ನಾಯಕರು ಚುನಾವಣೆ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದರು.
ಬಿಜೆಪಿಗರು ಈ ಹಿಂದೆ ಕಾಂಗ್ರೆಸ್ ಗೆ ಪೈಪೋಟಿ ನೀಡುವಂತ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುತ್ತಿದ್ದರು ಆದರೆ, ಈ ಸಲ ಎಂತವರಿಗೆ ಟಿಕೇಟ್ ನೀಡಿದಾರೆ, ಅವರ ಹಿನ್ನೆಲೆ ಏನು ಎಂದರೆ ಅಕ್ರಮವಾಗಿ ಅಕ್ಕಿ ಹಾಗೂ ಹಾಲಿನಪುಡಿಯನ್ನು ಮಾರಾಟ ಮಾಡಿರುವ ಆರೋಪದ ಮೇಲೆ ಕನಿಷ್ಠ 40 ಕೇಸುಗಳನ್ನು ಹಾಕಿಸಿಕೊಂಡಿದ್ದಾರೆ. ಅಂತವರು ನಿಮ್ಮ ಶಾಸಕರಾಗಬೇಕಾ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ ಅವುಗಳಲ್ಲಿ 10 ಕೆಜಿ ಉಚಿತ ಅಕ್ಕಿ ನೀಡುವುದು ಕೂಡಾ ಒಂದಾಗಿದೆ. ಇದರಿಂದ ಬಡ ವರ್ಗದ ಜನರಿಗೆ ಅನುಕೂಲವಾಗಲಿದೆ. ನಮ್ಮ ಜನಪರ ಯೋಜನೆಗಳಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ದೂರಿದರು.
ಚಿತ್ತಾಪುರದ ಪ್ರಗತಿಗಾಗಿ, ವಿದ್ಯಾರ್ಥಿಗಳ, ರೈತರ ಮಹಿಳೆಯರ, ಹಾಗೂ ಸರ್ವಾಂಗೀಣ ಅಭಿವೃದ್ದಿಗೆ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಲವಾರು ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಭಾಗನಗೌಡ ಸಂಕನೂರು, ವೀರನಗೌಡ ಪರಸರೆಡ್ಡಿ, ಗುರು ಪಾಟೀಲ, ಶರಣಗೌಡ ಇಟಗಿ, ಪ್ರಭುಗೌಡ, ಮಲ್ಲನಗೌಡ, ರಾಜೂಗೌಡ, ಸಿದ್ದುಗೌಡ ಅಫಜಲ್ ಪುರ ಸೇರಿದಂತೆ ಹಲವರಿದ್ದರು.