ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಾಣ: ಶಾಸಕ ಪ್ರಿಯಾಂಕ್ ಖರ್ಗೆ

0
8

ಕಲಬುರಗಿ: ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದು ಪ್ರತಿಯೊಂದು ಶೌಚಾಲಯಕ್ಕೆ ರೂ 25 ಲಕ್ಷ ಅನುದಾನವನ್ನು ಈ ಯೋಜನೆಗೆ ತೆಗೆದಿರಸಲಾಗಿದೆ. ಅಂತಹ ಒಂದು ಶೌಚಾಲಯ ನಾಲವಾರದಲ್ಲಿಯೂ ಕೂಡಾ ನಿರ್ಮಾಣ ಮಾಡಲಾಗುವುದು ಎಂದು ಶಾಸಕರಾದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಹೇಳಿದರು.

ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ನೈರ್ಮಲ್ಯ ಯೋಜನೆಯಡಿಯಲ್ಲಿ ಶೌಚಾಲಯಗಳ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು ಮೊದಲ ಹಂತವಾಗಿ ಚಿತ್ತಾಪುರ ಮತಕ್ಷೇತ್ರದಲ್ಲಿ ಒಟ್ಟು 32 ಶೌಚಾಲಯ ನಿರ್ಮಾಣ ಮಾಡಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರತಿ ಶೌಚಾಲಯಕ್ಕಾಗಿ ರೂ 25 ಲಕ್ಷ ಅನುದಾನ ತೆಗೆದಿರಸಲಾಗಿದೆ. ಶೌಚಾಲಯಗಳ ಸಮರ್ಪಕ ನಿರ್ವಹಣೆ ನಂತರ ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.

ಬಿಜೆಪಿ ಅಭ್ಯರ್ಥಿಯನ್ನು ” ಧೀಮಂತ ನಾಯಕ ” ಎಂದು ಕರೆದು ಟಾಂಗ್ ಕೊಟ್ಟ ಶಾಸಕರು, ಅವರು ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ ಎಂದು ಜನರನ್ನು ಕೇಳಿದಾಗ ಅಕ್ಕಿ ಕಳ್ಳತನ ಮಾಡುತ್ತಾನೆ ಎಂದು ಉತ್ತರಿಸಿದರು. ಆಗ ಮುಂದುವರೆದು ಮಾತ‌ನಾಡಿದ ಅವರು ಅಂತಹ ವ್ಯಕ್ತಿಗೆ ನೀವು ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದರ ಜನರು ” ಇಲ್ಲಾ ಇಲ್ಲಾ ” ಎಂದರು.

ಚಿತ್ತಾಪುರದ ಅಭಿವೃದ್ದಿಯಾಗಬೇಕಾದರೆ ದಕ್ಷ ಹಾಗೂ‌ ಪ್ರಾಮಾಣಿಕ ವ್ಯಕ್ತಿ ಯಾಗಿರಬೇಕು. ಆದರೆ, ಬಿಜೆಪಿ ಈಗ ಕಣಕ್ಕಿಳಿಸಿರುವ ವ್ಯಕ್ತಿಯಿಂದ ಅಭಿವೃದ್ದಿ ಸಾಧ್ಯನಾ ? ಎಂದು ಪ್ರಶ್ನಿಸಿದರು.

ಸರ್ಕಾರ ವೈಫಲ್ಯವನ್ನು ನಾನು ಪ್ರಶ್ನಿಸಿರುವುದಕ್ಕೆ ನೀವೆಲ್ಲ ನನ್ನನ್ನು ಟಿವಿಯಲ್ಲಿ ನೋಡಿರುತ್ತೀರಿ ಪತ್ರಿಕೆಗಳಲ್ಲಿ ಓದಿರುತ್ತೀರಿ. ಆದರೆ, ಬಿಜೆಪಿ ಅಭ್ಯರ್ಥಿ‌ ಕೈಯಲ್ಲಿ ಪಿಸ್ತೂಲ್ ಹಿಡಿದ ಫೋಟೋ ಸಮೇತ ಸುದ್ದಿ ಇಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇಂತಹ ಅಭ್ಯರ್ಥಿ ನಿಮ್ಮನ್ನು ಪ್ರತಿನಿಧಿಸಬೇಕಾ ? ಎಂದರು.

ನಿಮ್ಮ ಮನೆಯ ಮಕ್ಕಳು ಸರ್ಕಾರಿ ನೌಕರಿ ಪಡೆಯಬೇಕಾದರೆ ಕೋಟಿಗಟ್ಟಲೇ ದುಡ್ಡು ಕೊಡಬೇಕಾಗುತ್ತದೆ. ಈ ಸರ್ಕಾರಕ್ಕೆ ಬಡವರ ಮಕ್ಕಳ ಕುರಿತು ಕಾಳಜಿ ಇಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಯುವ‌ನಿಧಿ ಯೋಜನೆಯಡಿಯಲ್ಲಿ ಪ್ರತಿ ಪದವಿಧರರಿಗೆ ತಿಂಗಳಿಗೆ ರೂ 3000 ಹಾಗೂ ಡಿಪ್ಲೋಮಾ ಓದಿದವರಿಗೆ ರೂ 1500 ಹಣಕಾಸಿನ ನೆರವು ನೀಡಲಾಗುವುದು ಎಂದರು. ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹ ಜ್ಯೋತಿ, ಉಚಿತ 10 ಕೆಜಿ ಅಕ್ಕಿ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಯೋಜನೆಗಳನ್ನು ಕಡ್ಡಾಯವಾಗಿ ಜಾರಿಗೆ ತರಲಾಗುವುದು ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಭರವಸೆ ನೀಡಿದರು.

ಭಾಗನಗೌಡ ಸಂಕನೂರು, ವೀರನಗೌಡ ಪರಸರೆಡ್ಡಿ, ಸಿದ್ದುಗೌಡ ಅಫಜಲ್ಪುರಕರ್, ಮಹೇಬೂಬ್ ಸಾಹೇಬ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here