ಸುರಪುರ:ಚುನಾವಣಾ ಆಯೋಗ ಈಬಾರಿ 80 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು,ಇದೇ ಮೇ 3ನೇ ತಾರಿಖು ಇವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಚುನಾವಣಾಧಿಕಾರಿ ಅಮರೇಶ ನಾಯ್ಕ ತಿಳಿಸಿದರು.
ನಗರದ ತಹಷೀಲ್ದಾರ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಈಗಾಗಲೇ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರು ಸೇರಿ ಒಟ್ಟು 139 ಜನ ಮತದಾರರು ಮನೆಯಿಂದಲೇ ಮತದಾನಕ್ಕೆ ಹೆಸರು ನೊಂದಾಯಿಸಿಕೊಂಡಿದ್ದು ಎಲ್ಲರಿಗೂ 10 ತಂಡಗಳ ಮೂಲಕ ಇದೇ ಮೇ 3ನೇ ತಾರಿಖು ಮತದಾನ ಮಾಡಲು ಅವಕಾಶ ನೀಡಲಾಗುತ್ತಿದ್ದು,ಅವರ ಮನೆ ಬಾಗಿಲಿಗೆ ಹೋಗಿ ಮತದಾನವನ್ನು ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲದೆ ಅಗತ್ಯ ಸೇವೆಯಲ್ಲಿರುವವರು ಮತ್ತು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡವರಿಗೆ ಮತದಾನಕ್ಕೆ ಮೇ 2 ರಿಂದ 4ನೇ ತಾರಿಖಿನವರೆಗೆ ಅವಕಾಶ ನೀಡಲಾಗುವುದು,ತಹಸೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿರುವ ಮತಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗುವುದು ಎಂದರು.
ಈಬಾರಿಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಭ್ಯರ್ಥಿಯಾದವರು ತಮ್ಮ ಮೇಲೆ ಯಾವುದೇ ಪ್ರಕರಣ ಇರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ನೀಡಬೇಕು ಎಂದು ಇದೆ,ಅದರಂತೆ ಬಿಜೆಪಿ,ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೂರು ಜನ ಅಭ್ಯರ್ಥಿಗಳು ಪತ್ರಿಗೆಳಿಗೆ ನೀಡಿದ್ದಾರೆ,ಇನ್ನು ಎರಡು ಬಾರಿ ನೀಡಬೇಕಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ 210 ಸ್ಥಳಗಳಿಂದ ಒಟ್ಟು 317 ಮತಗಟ್ಟೆಗಳನ್ನು ತೆರೆಯಲಾಗುವುದು,ಅದರಲ್ಲಿ 1400 ಮತದಾರರಿರುವ 5 ಮತ ಕೇಂದ್ರಗಳು ಮತ್ತು 1300 ಮತದಾರರಿರುವ 5 ಮತಗಟ್ಟೆಗಳು ಇವೆ,ಅತ್ಯಂತ ಪಡಿಮೆ ಮತದಾರರಿರುವ 259 ಮತದಾರರಿರುವ ಮತ ಕೇಂದ್ರ ಗುಡಿಹಾಳ ಜೆ ಗ್ರಾಮದಲ್ಲಿ ಇದೆ ಎಂದು ತಿಳಿಸಿದರು.ಇನ್ನು 6 ಮತ ಕೇಂದ್ರಗಳು ಒಂದೇ ಸ್ಥಳದಲ್ಲಿ ಇರುವಂತದ್ದು ಎರಡು ಕಡೆಗಳಲ್ಲಿ ಇವೆ,5 ಮತ ಕೇಂದ್ರಗಳು ಒಂದೇಕಡೆ ಇರುವುದು ಒಂದು ಸ್ಥಳದಲ್ಲಿದೆ,ಕ್ಷೇತ್ರದಲ್ಲಿ ಒಟ್ಟು 2 ಲಕ್ಷ 75 ಸಾವಿರ 419 ಮತದಾರರು ಈಬಾರಿ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವರ್ ಉಪಸ್ಥಿತರಿದ್ದರು.