ಕಲಬುರಗಿ: ನಗರದ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಕಲಾ, ಭಾಷಾ ಮತ್ತು ಸಮಾಜ ವಿಜ್ಞಾನ ನಿಕಾಯದಲ್ಲಿ ಬುಧವಾರ ಪ್ರಬಂಧ, ತೇಪೆ ಚಿತ್ರಗಾರಿಕೆ ಸ್ಪರ್ಧೆ ಹಾಗೂ ರಸಪ್ರಶ್ನೆಗಳನ್ನು ಏರ್ಪಡಿಸಲಾಗಿತ್ತು.
ಕೆಬಿಎನ್ ವಿವಿಯ ಸುಮಾರು 35 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಸುದೇವ ಕುಟುಂಬಕಂ -ವಸ್ತು ವಿಷಯದ ಬಗ್ಗೆ ಏರ್ಪಡಿಸಿದ ಸ್ಪರ್ಧೆಯಗಳು ಬಹುಭಾಷಗಳಲ್ಲಿ ಜರುಗಿದವು. ಇಂಗ್ಲಿಷ್ ಮಧ್ಯಮದಲ್ಲಿ ಆಫ್ಸ ತಬಸ್ಸುಮ್ ಮತ್ತು ಹರಿಯ ನಾಜ್ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು.ಮುಸ್ಕಾನ್ ಬೇಗಂ ಮತ್ತು ಶಹಾಬಾಜ್ ಬೇಗಂ ಭೀತ್ತೀಚಿತ್ರ ತಯಾರಿಕೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.
ಪ್ರಬಂಧ ಸ್ಪರ್ಧೆಯಲ್ಲಿ (ಇಂಗ್ಲಿಷ್)ಶಹಾಬಾಜ ಬೇಗಂ ಮತ್ತು ಸೋಫಿಯ ನಾಜ್ ವಿಜೇತರಾದರು.ಹುಮೆರಾ ಬೇಗಂ ಮತ್ತು ಲುಬಿನ ಸಂರೀನ್ ಉರ್ದು ಮಧ್ಯಮದ್ ವಿಜೇತರು.ಬರೀರ ಮಹಾವಿನ ಮತ್ತು ರೂಕ್ಕಿಯ ಪರ್ವೀನ್ ಹಿಂದಿ ಮಧ್ಯಮದ ವಿಜೇತರು.
ಈ ಸ್ಪರ್ಧೆಗಳಲ್ಲಿ ವಿವಿಯ ಡೀನ್ ಡಾ. ನಿಶಾತ್ ಆರೀಫ್ ಹುಸೇನಿˌ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಮತ್ತು ಎಲ್ಲ ಉಪನ್ಯಾಸಕರು ಹಾಜರಿದ್ದರು.
ತಯ್ಯಬಾ, ಸಫಿಯಾ, ಸುಮಯ್ಯ, ಪಾಷಾ ಮತ್ತು ಸೊಯೆಬ್ ತಂಡ ರಸಪ್ರಶ್ನೆ ಯಲ್ಲಿ ಪ್ರಥಮ್ ಸ್ಥಾನ ಪಡೆದರೆ ಬಾಖರ್, ಫಯಾಜ್, ನೋಮನ್, ಜರೀನ್, ಬರೀರ ತಂಡ ದ್ವಿತೀಯ ಸ್ಥಾನ ಪಡೆಯಿತು.