ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಜ್ಞಾನ ಇಮ್ಮಡಿ: ಡಾ. ನಿಶಾತ್ ಆರೀಫ್ ಹುಸೇನಿ

0
37

ಕಲಬುರಗಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯ್ಯಾರಿ ಮಾಡುವುದರಿಂದ ವಿದ್ಯಾರ್ಥಿಗಳ ಜ್ಞಾನ, ಅರಿವು ಹೆಚ್ಚುವುದಲ್ಲದೆ ವ್ಯಕ್ತಿತ್ವ ಕೂಡ ವಿಕಾಸನವಾಗುತ್ತದೆ ಎಂದು ನಗರದ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಕಲಾ, ಭಾಷಾ, ಮಾನವಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನದ ಡೀನ್ ಡಾ. ನಿಶಾತ್ ಆರೀಫ್ ಹುಸೇನಿ ನುಡಿದರು.

ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ಕೌನ್ಸೆಲಿಂಗ್ ಘಟಕದ (ಸಿಈಸಿಸಿ) ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ಖಾಜಾ ಶಿಕ್ಷಣ ಸಂಸ್ಥೆಯು ಸುಮಾರು ವರ್ಷಗಳಿಂದ ಕಲಬುರ್ಗಿಯಲ್ಲಿ ಶಿಕ್ಷಣ ಒದಗಿಸುತ್ತಿದೆ. ಮಹಿಳಾ ಶಿಕ್ಷಣ ಇದರ ಆದ್ಯತೆ. ಅಲ್ಲದೇ ವಿದ್ಯಾರ್ಥಿಗಳ ಕ್ರೀಡೆಗೂ ಅವಕಾಶಗಳ ಮಳೆ. ಈಗ ಕರ್ನಾಟಕದ ಏಕೈಕ ಮುಸ್ಲಿಂ ವಿಶ್ವವಿದ್ಯಾಲಯವಾಗಿದ್ದು ವಿಶಿಷ್ಟ ರೀತಿಯ ಪರೀಕ್ಷೆ ಪದ್ಧತಿಗಳನ್ನು ಜಾರಿಗೆ ಗೊಳಿಸಿದೆ. ಪದವಿ ಶಿಕ್ಷಣದಲ್ಲಿ ಪ್ರಾಯೋಗಿಕ ಹಾಗೂ ಸಂಶೋಧನಾತ್ಮಕ ಬೋಧನಾ ಕ್ರಮ ಒಳಗೊಂಡಿದೆ.

ಈಗ ಸಿಈಸಿಸಿ ಕೆಬಿಎನ್ ವಿವಿಯ ಮತ್ತೊಂದು ಹೆಜ್ಜೆ. ವಿದ್ಯಾರ್ಥಿಗಳು ಕೆಪಿಸಿಸಿ, ಬ್ಯಾಂಕ ಪರೀಕ್ಷೆ ಹಾಗೂ ಸಿವಿಲ್ ಸರ್ವಿಸ್ ನಂತಹ ಸ್ಪರ್ಧೆಗಳನ್ನು ಎದುರಿಸಲು ತರಬೇತಿ ನೀಡಲಾಗುತ್ತದೆ. ಕೆ ಸೆಟ್ ಮತ್ತು ನೆಟ್ ಪರೀಕ್ಷೆಗಳಿಗೆ ಹಾಜರಾಗಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳಿಗೆ ದಿನಚರಿಯ ನಂತರ ತರಬೇತಿಯನ್ನು ನೀಡಲಾಗುವುದು. ಅಲ್ಲದೇ ವಿವಿಧ ವಿಷಯದ ಬಗ್ಗೆ ಉಪನ್ಯಾಸ ನೀಡಲು ಬೇರೆ ಕಡೆಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಮಂತ್ರಿಸಲಾಗುವುದು. ಎಂದು ಹೇಳಿದರು.

ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಮೇಶ್ ಇವರು ಸಿಈಸಿಸಿನ ಉದ್ದೇಶ ಮತ್ತು ಗುರಿಗಳ ಬಗ್ಗೆ ಮಾತನಾಡಿದರು.

ವೈದ್ಯಕೀಯ ವಿಜ್ಞಾನದ ಅನಟೋಮಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಯ ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ವಿದ್ಯಾರ್ಥಿ ಫಯಾಜ್ ಪ್ರಾರ್ಥಿಸಿದರೆ, ವಿದ್ಯಾರ್ಥಿನಿ ನಿಖತ್ ಸ್ವಾಗತಿಸಿದರು. ಸುಮ್ಮಯ್ಯಾ ವಂದಿಸಿದರೆ ಹನಿಯಾ ಮತ್ತು ಫಿರ್ದೋಸ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here