ವಾಡಿ: ಚಿತ್ತಾಪುರ ಮತಕ್ಷೇತ್ರದ ಪ್ರಗತಿಯ ಭವಿಷ್ಯ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನಲ್ಲಿದೆ. ತತ್ವಸಿದ್ಧಾಂತ ಮರೆತಿರುವ ಬಿಜೆಪಿಗೆ ಸೋಲಿನ ಪಾಠ ಕಲಿಸಬೇಕು ಎಂದು ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಬಸವನಗುಡಿ ಬಡಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಮತಯಾಚಿಸಿ ಅವರು ಮಾತನಾಡಿದರು. ಧರ್ಮ, ಭಾರತೀಯತೆ, ತತ್ವನಿಷ್ಠೆ, ಬದ್ಧತೆ ಎಂಬುದು ಬಿಜೆಪಿಗರ ಬಾಯಲ್ಲಿದೆಯಷ್ಟೆ. ದೇಶಾಭೀಮಾನದ ಮುಖವಾಡ ತೊಟ್ಟ ಬಿಜೆಪಿಯಲ್ಲಿ ಈಗ ಕಳ್ಳರು, ಸುಳ್ಳರು, ಭ್ರಷ್ಟರೇ ತುಂಬಿಕೊಂಡಿದ್ದಾರೆ.
ಚಿತ್ತಾಪುರದಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಿಜೆಪಿ ಅಭ್ಯರ್ಥಿ ಯಾವೂದೇ ಕಾರಣಕ್ಕೂ ಗೆಲ್ಲಬಾರದು. ಕ್ಷೇತ್ರದ ಮತದಾರರು ಪ್ರಬುದ್ಧರಾಗಿದ್ದು, ಯಾವ ಅಭ್ಯರ್ಥಿ ಬದ್ಧತೆ, ಪ್ರಗತಿಪರತೆ, ಜನಪರತೆ ಹೊಂದಿದ್ದಾರೆ ಎಂಬುದು ಅರ್ಥಮಾಡಿಕೊಂಡು ಮತ ನೀಡುತ್ತಾರೆಂಬ ಭರವಸೆಯಿದೆ ಎಂದರು.
ಮುಖಂಡರಾದ ಮೋತಿತಾಮ ರಾಠೋಡ, ವಿಶಾಲ ನಾಯಕ, ರೇವು ಜಾಧವ, ಟೋಪಸಿಂಗ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಡಾವಣೆಯ ಮುಖಂಡರಾದ ಶ್ರೀರಾಮ ರಾಠೋಡ, ಜೈಸಿಂಗ್ ರಾಠೋಡ, ರಮೇಶ ರಾಠೋಡ, ಗೋವಿಂದ ರಾಠೋಡ, ಪವನ ಜಾಧವ, ಪ್ರೇಮ ರಾಠೋಡ, ಅಜಯ ಜಾಧವ, ಕೃಷ್ಣ ಜಾಧವ ಇತರರು ಬಿಜೆಪಿ ತೊರೆದು ಅರವಿಂದ ಜಾಧವ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.