ಭಾರತವೇ ನಮ್ಮ ಸಂಪತ್ತು: ಶಂಕರ್ ಬಿದರಿ

0
38

ಕಲಬುರಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ವೈಯಕ್ತಿಕ ಸಂಪತ್ತು ಮತ್ತು ಸ್ವಾರ್ಥ ಮನೋಭಾವನೆಗೆ ಬೆಲೆ ಕೊಡದೇ, ದೇಶಕ್ಕಾಗಿ ದುಡಿಯಬೇಕು. ಇಡೀ ಭಾರತವೇ ನಮ್ಮ ಸಂಪತ್ತು ಎಂದು ತಿಳಿಯಬೇಕು. ಅಂದಾಗ ಮಾತ್ರ ಭಾರತ ಸಮೃದ್ಧಿ ರಾಷ್ಟ್ರವಾಗುವುದಕ್ಕೆ ಸಾಧ್ಯ ಎಂದು ನಿವೃತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಹೇಳಿದರು.

ನಗರದ ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಡಕ್ಸನ್(ದೀಕ್ಷಾರಂಭ-೨೦೧೯) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಸಂರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಇದರಿಂದ ತಾವು ಅಧ್ಯಯನ ಮಾಡುವ ವಿಷಯದಲ್ಲಿ ಪಾರದರ್ಶಕತೆ ಮತ್ತು ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು. ಶರಣಬಸವ ವಿದ್ಯಾಸಂಸ್ಥೆಯಲ್ಲಿ ಎಂಜಿನಿಯರಿಂಗ್, ಬಿಬಿಎಮ್, ಕಲಾ ವಿಜ್ಞಾನ ಸೇರಿದಂತೆ ವಿವಿಧ ಹೊಸ ಹೊಸ ಕೋರ್ಸ್‌ಗಳು ಆರಂಭವಾಗಿವೆ. ಈ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವಾಗ ದೇಶದೆಲ್ಲೆಡೆ ಉದ್ಯೋಗವಕಾಶ ದೊರೆತರೆ ಖುಷಿಯಿಂದ ಹೊಗಬೇಕು. ಅವಕಾಶಗಳು ಮತ್ತೆ ಮರಳಿ ಬರುವುದಿಲ್ಲ. ನಿಮ್ಮ ಕರ್ತವ್ಯದಿಂದ ದೇಶಾಭಿಮಾನ ಹೆಚ್ಚುತ್ತದೆ ಎಂದು ವಿದ್ಯಾರ್ಥಿಗಳ ಜವಾಬ್ದಾರಿ ಬಗ್ಗೆ ತಿಳಿಸಿದರು.

Contact Your\'s Advertisement; 9902492681

ವಿವಿ ಕುಲಪತಿ ಡಾ. ನಿರಂಜನ ನಿಷ್ಠಿ ಮಾತನಾಡಿ, ಶ್ರವಣಕುಮಾರ ಹೆತ್ತ ತಂದೆ, ತಾಯಿನ್ನು ಯಾವ ರೀತಿ ಗೌರವದಿಂದ ಕಂಡಿದ್ದರು, ಅದೇ ರೀತಿ ನೀವು ಕೂಡಾ ತಮ್ಮ ಹೆತ್ತವರನ್ನು ಪ್ರೀತಿಸಿ, ಗೌರವಿಸಿ ಎಂದು ತಿಳಿಸಿದರು.
ಬೆಂಗಳೂರು ನಾರಾಯಣ ಹೃದಯಾಲಯ ಆಸ್ಪತ್ರೆಯ ಪ್ರೋಗ್ರಾಮ ಮ್ಯಾನೇಜರ್(ಕಾರ್ಯಕ್ರಮ ವ್ಯವಸ್ಥಾಪಕರಾದ) ನಾಗರಾಜ ಪಾಣಿ ಮಾತನಾಡಿ, ಶಿಕ್ಷಣದಿಂದ ಕೇವಲ ಉದ್ಯೋಗಸ್ಥರಾಗದೇ, ಸಂಪನ್ಮೂಲ ವ್ಯಕ್ತಿಗಳಾಗಿ ಬದಲಾಗಬೇಕು. ಕಲಿಕೆ ಎನ್ನುವುದು ಕಂಠಪಾಠ ಆಗಿರದೇ, ಪ್ರಾಯೋಗಿಕವಾಗಿರಲಿ. ವಿಶ್ವದ ಮತ್ತು ಮಾರುಕಟ್ಟೆಯ ಅವಶ್ಯಕತೆಯನ್ನು ಅರಿತುಕೊಂಡು ಶೈಕ್ಷಣಿಕ ಚಟುವಟಿಕೆಯಲ್ಲಿ ಮುಂದೆ ಸಾಗಿ, ಹೊಸತನ ಕಲಿಕೆಗೆ ಹೆಚ್ಚು ಹೆಚ್ಚು ಒತ್ತು ನೀಡುವದರಿಂದ, ಕಲಿಕೆಯಲ್ಲಿ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಯಾವುದೋ ಒಂದು ಹೊಸತನ ಕಾರ್ಯಕ್ಕೆ ನೀವೇ ನಾಂದಿ ಹಾಡಬಹುದು ಎಂದು ಮಕ್ಕಳಲ್ಲಿ ಹುರಿದುಂಬಿಸಿದರು.

ನಿಮ್ಮ ಕಲಿಕೆಯಿಂದ ಜನ ನಿಮ್ಮನ್ನು ಗುರುತಿಸಿ, ನಿಮ್ಮತ್ತ ಬರುವಂತಾಗಬೇಕು. ಕೆಲಸದಲ್ಲಿನ ಶ್ರದ್ಧೆ, ಕಠಿಣ ಪರಿಶ್ರಮ, ಪ್ರಯೋಗಾತ್ಮಕ ಮನಸ್ಸು, ನಾಯಕತ್ವ ಗುಣ, ವಿಮರ್ಶಾತ್ಮಕ ಕೌಶಲ್ಯ ಮುಂತಾದ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ನಿಮ್ಮ ಜೀವನದಲ್ಲಿ ಯಶಸ್ವಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ವಿವಿ. ಸಮ ಕುಲಪತಿ ಡಾ. ವಿಡಿ. ಮೈತ್ರಿ ಮಾತನಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಪತಿ ಡಾ. ನಿರಂಜನ್ ನಿಷ್ಠಿ, ವಿವಿ. ಕುಲಸಚಿವ ಡಾ. ಅನೀಲಕುಮಾರ ಬಿಡವೆ, ವಿವಿ. ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡಾ. ಶಿವದತ್ತ ಹೊನ್ನಳಿ, ಡಾ. ಬಸವರಾಜ ಮಠಪತಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here