ಸುರಪುರ:ವಿಧಾನಸಭಾ ಚುನಾವಣೆ ಮತಯಂತ್ರಗಳ ರವಾನೆ

0
13

ಸುರಪುರ: ವಿಧಾನಸಭಾ ಕ್ಷೇತ್ರದಾದ್ಯಂತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಅಮರೇಶ ನಾಯ್ಕ ತಿಳಿಸಿದರು.

ನಗರದ ಶ್ರೀಪ್ರಭು ಮಹಾವಿದ್ಯಾಲಯ ಆವರಣದಲ್ಲಿ ನಡೆದ ಮಸ್ಟರಿಂಗ್ ಪ್ರಕ್ರೀಯೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿನ ಸೂಕ್ಷ್ಮ ಕ್ಷೇತ್ರಗಳಲ್ಲಿ ನಮ್ಮ ಸುರಪುರ ವಿಧಾನಸಭಾ ಕ್ಷೇತ್ರವೂ ಒಂದಾಗಿರುವುದರಿಂದ ಕ್ಷೇತ್ರದಲ್ಲಿ ಒಟ್ಟು 317 ಮತಗಟ್ಟೆಗಳಿದ್ದು ಅವುಗಳಲ್ಲಿ 67 ಸೂಕ್ಷ್ಮ ಹಾಗೂ 11 ಅತಿ ಸೂಕ್ಷ್ಮ ಮತಗಟ್ಟೆಗಳಿವೆ,ಇನ್ನು 222 ಮತಗಟ್ಟೆಗಳನ್ನು ಸೆನ್ಸಿಟಿವ್ ಎಂದು ಗುರುತಿಸಲಾಗಿತ್ತು. ಅದರ ಆಧಾರದ ಮೇಲೆ 222 ಮತಗಟ್ಟೆಗಳಲ್ಲಿ ವೆಬ್‍ಕ್ಯಾಸ್ಟಿಂಗ್ ಅಳವಡಿಕೆ ಮಾಡಲು ಕೇಳಲಾಗಿತ್ತು,ಆದರೆ ಇದುವರೆಗೆ 297 ಕೇಂದ್ರಗಳಿಗೆ ವೆಬ್‍ಕ್ಯಾಸ್ಟಿಂಗ್ ಅಳವಡಿಸಲಾಗಿದೆ.ಇನ್ನುಳಿದಂತೆ ಸಿಬ್ಬಂದಿಗಳ ರವಾನೆಗೆ 74 ರೂಟ್‍ಗಳನ್ನು ಮಾಡಲಾಗಿದೆ,ಒಂದು ಮತಕೇಂದ್ರದಲ್ಲಿ ಪಿ.ಓ,ಓ,ಪಿ.ಆರ್.ಓ ಸೇರಿದಂತೆ ಇತರೆ ಸಿಬ್ಬಂದಿಗಳು ಸೇರಿ 2000 ಜನ ಸಿಬ್ಬಂದಿ,64 ಜನ ಮೈಕ್ರೋ ಅಬ್ಜರ್ವರ್ಸ್ ಇರಲಿದ್ದಾರೆ.ಇನ್ನುಳಿದಂತೆ 19 ಜನ ಸಿಕ್ಟರ್ ಆಫಿಸರ್ಸ್ ಇದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಭದ್ರತೆ ಕುರಿತು ಪೊಲೀಸ್ ಇನ್ಸ್ಪೇಕ್ಟರ್ ಎಮ್.ಬಿ ಚಿಕ್ಕಣ್ಣನವರ್ ಮಾಹಿತಿ ನೀಡಿ,ಕ್ಷೇತ್ರದ ಚುನಾವಣೆಗಾಗಿ ಒಬ್ಬರು ಎಸ್ಪಿ,ಮೂವರು ಡಿವೈಎಸ್ಪಿ,6 ಸಿ.ಪಿ.ಐ,16 ಪಿ.ಎಸ್.ಐ,17 ಎ.ಎಸ್.ಐ,317 ಬೂತ್‍ಗೆ 317 ಜನ ಪೊಲೀಸ್ ಸಿಬ್ಬಂದಿ,ಸೂಕ್ಷ್ಮ ಮತಗಟ್ಟೆಗಳಿಗೆ 73 ಆಫ್ ಸೆಕ್ಸೆನ್ ಪ್ಯಾರಾ ಮಿಲಿಟರಿ ಫೋರ್ಸ್ ಇರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಮಹಾಂತೇಶ ದ್ಯಾಮಣ್ಣವನರ್,ಪ್ರಾಂಶುಪಾಲ ವಾರೀಸ್ ಕುಂಡಾಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ವಸತಿನಿಲಯದಲ್ಲಿ ಎಲ್ಲಾ 317 ಮತಕೇಂದ್ರಗಳಿಗೆ ತೆರಳುವ ಸಿಬ್ಬಂದಿಗಳಿಗಾಗಿ ಆಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.ಸಿಬ್ಬಂದಿಗಳು ಮದ್ಹ್ಯಾನದ ಆಹಾರ ಸೇವಿಸಿ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಯಂತ್ರದೊಂದಿಗೆ ತೆರಳಿದರು.ಕೆಕೆಆರ್‍ಟಿಸಿ ಬಸ್ ಹಾಗೂ ಖಾಸಗಿ ವಾಹನಗಳನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಲಾಗಿತ್ತು.ಶ್ರೀ ಪ್ರಭು ಮಹಾವಿದ್ಯಾಲಯದ ಎನ್.ಸಿ.ಸಿ ಕೆಡೆಟ್‍ಗಳು ಚುನಾವಣೆ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗಳ ನೆರವಿಗೆ ಧಾವಿಸುವ ಮೂಲಕ ಕಾಲೇಜ್ ವತಿಯಿಂದ ಸಹಕಾರ ನೀಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here