ಸೇವಾ ಮನೋಭಾವ ಬೆಳೆಸಿಕೊಳ್ಳಿ: ಡಾ.ಮಾಜೀದ

0
34

ಕಲಬುರಗಿ: ವೈದ್ಯಕೀಯ ವ್ರತ್ತಿ ಕೇವಲ ಹಣ ಗಳಿಸುವ ಉದ್ಯಮವಾಗದೇ ಬಡವರ ಸೇವೆ ಮಾಡುವ ಒಂದು ಅವಕಾಶವಾಗಿದೆ ಎಂದು ಖ್ಯಾತ ಕ್ಯಾನ್ಸರ್ ತಜ್ಞೆ ಡಾ.ಮಾಜೀದ್ ಅಭಿಪ್ರಾಯಪಟ್ಟರು.

ಖಾಜಾ ಶಿಕ್ಷಣ ಸಂಸ್ಥೆಯ ಖಾಜಾ ಬಂದೇನವಾಜ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಎಂಬಿಬಿಎಸ್ ಮುಗಿಸಿದರಷ್ಟೆ ಸಾಲದುˌ ಇನ್ನೂ ಉನ್ನತ ವ್ಯಾಸಂಗ ಮಾಡಬೇಕು. ವೈಧ್ಯರಾದ ನಂತರ ಹೊರದೇಶಕ್ಕೆ ಹೋಗದೆ ದೇಶದ ಬಡವರ ನಿರ್ಗತಿಕರ ಸೇವೆ ಮಾಡಬೇಕು. ಎಲ್ಲ ಪಾಲಕರಿಗೂ ತಮ್ಮ ಮಕ್ಕಳು ವೈಧ್ಯರಾಗಬೇಕು ಎಂದು ಆಶಯ ಇರುತ್ತದೆ. ಆದರೆ ಎಲ್ಲರಿಗೂ ವೈಧ್ಯರಾಗಲು ಸಾಧ್ಯವಾಗುವುದಿಲ್ಲ. ವೈಧ್ಯರಾದ ನಂತರ ತಾಳ್ಮೆˌ ಸಂಯಮ ಬಹಳ ಮುಖ್ಯ. ದೇವರ ನಂತರದ ಸ್ಥಾನ ವೈಧ್ಯರಿಗೆ ಸಲ್ಲುತ್ತದೆ. ವೈಧ್ಯರಾದವರಿಗೆ ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಗಬಹುದು ಆದರೆ ಸಮಯ ಮಾತ್ರ ಸಿಗುವುದು ಕಷ್ಟ. ಮನುಕುಲದ ಉದ್ಧಾರವಾಗಬೇಕಾದರೆ ವೈಧ್ಯರ ಶ್ರಮ ಅಪಾರವಾಗಿರುತ್ತದೆ ಎಂದರು.

ಕೆಬಿಎನ್ ವಿವಿಯ ಕುಲಪತಿ ಪ್ರೊ. ಅಲಿರಜಾ ಮೂಸ್ವಿ ಮಾತನಾಡಿˌ ವೈಧ್ಯರಾಗುವ ಮೊದಲು ಪ್ರಮಾಣ ವಚನ ತೆಗೆದುಕೊಂಡವರು ವ್ರತ್ತಿಗಿಳಿದ ನಂತರ ಮರೆತು ಬಿಡುತ್ತಿರುವುದು ದುರಂತ. ವೈಧ್ಯಕೀಯ ಸೇವೆ ಮಾಡುತ್ತಿರುವವರು ಇದು ದೇಶದ ಸೇವೆ ಎನ್ನುವುದು ಮರೆಯಬಾರದು ಎಂದರು.

ಈ ವೇಳೆ 94 ವೈಧ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ವೈಧ್ಯಕೀಯ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶ್ರತಿ ಬಿಜೆ ಅವರಿಗೆ 10ಸಾವಿರ ಬಹುಮಾನ ನೀಡಲಾಯಿತು.

ಕುಲಸಚಿವೆ ರುಕ್ಸಾರ ಫಾತೀಮಾˌ ಡಾ.ಸಿದ್ದೇಶˌ ಡಾ.ಪಿ.ಎಸ್ ಶಂಕರ್ˌ ಪ್ರೊ.ಪಠಾಣ ಮತ್ತಿತರರು ಇದ್ದರು. ವಿದ್ಯಾರ್ಥಿ ಶ್ಯಾನ್ ಪ್ರಾರ್ಥಿಸಿದರು. ಡಾ.ಸಿದ್ದೇಶ ಸ್ವಾಗತಿಸಿದರು. ಇರ್ಫಾನ ಅಲಿˌ ನೇಹಾ ನಿರೂಪಿಸಿದರು. ಡಾ.ಸಿದ್ದಲಿಂಗ ಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here