ಆಳಂದ: ಧಾರವಾಡ ಅಣ್ಣಿಗೇರಿ ಕಾಲೇಜು ಶುಲ್ಕದಲ್ಲಿ ಶೇ 30 ರೀಯಾತಿ

0
28

ಆಳಂದ: 10ನೇ ತರಗತಿಯಲ್ಲಿ ಶೇ 90 ಕ್ಕಿಂತ ಮೇಲ್ಪಟ್ಟು ಅಂಕಪಡೆದ ವಿದ್ಯಾರ್ಥಿಗಳು ರಾಜ್ಯದ ಯಾವುದೇ ಮೂಲೆಯಿಂದ ಪ್ರವೇಶ ಬಯಸಿ ಬಂದರೆ ಇಂಥವರಿಗೆ ಕಾಲೇಜಿನ ಶುಲ್ಕದಲ್ಲಿ ಶೇ 30 ರಷ್ಟು ರೀಯಾಯಿತಿ ಜಾರಿಗೆ ತರಲಾಗುತ್ತಿದೆ ಎಂದು ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಪ್ರೊ ನಾಗೇಶ ಅಣ್ಣಿಗೇರಿ ಅವರು ಹೇಳಿದರು.

ಧಾರವಾಡ ಹಳಿಹಾಳ ಮುಖ್ಯ ರಸ್ತೆಯ ತಪೋವನ್ ಬಳಿಯ ಪ್ರತಿಷ್ಠಿತ ವೈ.ಬಿ. ಅಣ್ಣಿಗೇರಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ 10ನೇ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೇಸಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಕಲ್ಯಾಣ ಕರ್ನಾಟಕ ಪಾಲಕ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

Contact Your\'s Advertisement; 9902492681

ಸ್ಪರ್ಧಾತ್ಮಕತೆ ಸಾಮಥ್ರ್ಯವನ್ನು ವೃದ್ಧಿ, ಕಾಲೇಜಿನ ಗುಣಮಟ್ಟದ ಶಿಕ್ಷಣದಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಓದಿದ ನೂರಾರು ವಿದ್ಯಾರ್ಥಿಗಳು ಉನ್ನತ ಹುದ್ದೇಗೇರಿ ರಾಜ್ಯ, ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪ್ರತಿವರ್ಷ ರಾಜ್ಯದ 31 ಜಿಲ್ಲೆಯಿಂದಲೂ ಪಿಯುಸಿ ಓದಲು ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೊದಲು ಬಾರಿಗೆ ಅಣ್ಣಿಗೇರಿ ಸಂಸ್ಥೆಯಿಂದ ಶುಲ್ಕದಲ್ಲಿನ ಶೇ 30ರಷ್ಟು ರಿಯಾಯಿತಿ ನೀಡಿ ಅನುಷ್ಠಾನಕ್ಕೆ ತರಲಾಗಿದೆ. ಇದರ ಲಾಭವನ್ನು ಪಡೆದಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಶಿಕ್ಷಣ ಕೇವಲ ಸರ್ಕಾರಿ ನೌಕರಿಗೆ ಎಂದು ಕಲಿಯದೇ ಬದುಕು ರೂಪಿಸಿಕೊಳ್ಳಲು ಶಿಕ್ಷಣದ ಅವಶ್ಯಕತೆ ಇದೆ ಎಂಬುದು ಅರಿತುಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಾಜದಲ್ಲಿ ಬದುಕು ರೂಪಿಸುವುದು ಮುಖ್ಯವಾಗಿದೆ, ಮಾನವೀಯ ಮೌಲ್ಯ, ಸಂಸ್ಕಾರ, ಅಂತಃಕರಣ ಮೈಗೂಡಿಸಿಕೊಂಡು ಆಯ್ಕೆ ಕ್ಷೇತ್ರದಲ್ಲಿ ಮುಂದೆವರೆದರೆ ಸಮಾಜದ ಸಾರ್ಥಕತೆ ಈಡೇರುತ್ತದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಮಹಾಬಳೇಶ್ವರ ಚಿಕ್ಕಿ ಅವರು ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳ ಬದುಕಿನ ಟರನಿಂಗ್ ಪೈಂಟ್ ಆಗಿದೆ. ಬೇಸಿಗೆ ತರಬೇತಿ ಪಡೆದ ಮಾತ್ರಕ್ಕೆ ವರ್ಷದ ಕಲಿಕೆ ಮುಗಿದಂತಲ್ಲ ಕಲಿತ ವಿಷಯಗಳನ್ನು ಪರೀಕ್ಷೆ ಬರುವ ತನಕೂ ಶಾಲೆ, ಕಾಲೇಜಿನಲ್ಲಿ ಹೇಳಿಕೊಡುವ ಪಾಠದೊಂದಿಗೆ ಪುನರಮನನ ಮುಂದುವರೆಸಿದರೆ ಹೆಚ್ಚಿನ ಅಂಕಪಡೆಯಲು ಸಾಧ್ಯವಿದೆ, ಕಠಿಣ ಪರಿಶ್ರಮ ನಿರಂತರ ಅಧ್ಯಯನ ಯಶಸ್ಸಿನ ಗುಟ್ಟಾಗಿದೆ. ವಿದ್ಯಾರ್ಥಿಗಳು ಇದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಂಗ್ಲ ಉಪನ್ಯಾಸಕ ಪ್ರಕಾಶ ತಾಳಿಕೋಟೆ, ಶಿಕ್ಷಕ ಸುನೀಲ, ಸಾಗರ, ಅಲಂ ಪ್ರಭು, ಚೈತ್ರಾ, ಗಿರೀಶ ಇನ್ನಿತರು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯ ಕಲಿಕೆಯಲ್ಲಿ ಕಠಣ ವಿಷಯಗಳನ್ನು ಸರಳೀಕರಣ ಮತ್ತು ನೆನಪಿಟ್ಟು ಬರೆಯುವ ಕ್ರಮವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.
ಸಂಸ್ಥೆಯ ಆಡಳಿತಾಧಿಕಾರಿ ಸಚೀನ ಕಮಟೆ, ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಪಾಲಕರ ಪರ ಪತ್ರಕರ್ತ ಮಹಾದೇವ ವಡಗಾಂವ, ನಾಗಪ್ಪ ದೇವಂತಗಿ, ಬೀದರ್‍ನ ಸಂಜಕುಮಾರ ಬಿರಾಜದಾರ ಇನ್ನಿತರು ಸಂಸ್ಥೆಯ ಅಧ್ಯಕ್ಷ ನಾಗೇಶ ಅಣ್ಣಿಗೇರಿ ಸೇರಿ ಶಿಕ್ಷರನ್ನು ಸನ್ಮಾನಿಸಿದರು. ಸಂಸ್ಥೆಯಿಂದಲೂ ಪಾಲಕ ಬಳಗÀ ಪ್ರತಿನಿದಿಗಳಿಗೂ ಸನ್ಮಾನಿಸಿ ಗೌರವಿಸಲಾಯಿತು.

ಭಾಗವಹಿಸಿದ್ದ ಬೆಂಗಳೂರು, ಮಂಗಳೂರು, ಬೆಳಗಾಂವ, ಹುಬಳಿ, ಧಾರವಾಡ, ವಿಜಾಪೂರ ನೆರೆ ಹೊರೆಯ ಜಿಲ್ಲೆ ಒಳಗೊಂಡು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ, ಯಾದಗಿರಿ ಕೊಪ್ಪಾಳ, ರಾಯಚೂರು ಭಾಗದ ವಿದ್ಯಾರ್ಥಿಗಳು ಮತ್ತವರ ಪಾಲಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here