ಕಲಬುರಗಿ: ರಾಜ್ಯದ “ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಪಿ.ಡಿ.ಎ. ಕಾಲೇಜಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆಯೋಜಿಸಲಾಗಿರುವ ರಾಜೀವ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದರಿಂದ ಜಿಲ್ಲಾಧಿಕಾರಿಗಳು ಅವರು ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಆಡಿಟೋರಿಯಂ ಹಾಲಿನಲ್ಲಿರುವ ಪ್ರತಿಯೊಂದು ಹಾಸನದ ವ್ಯವಸ್ಥೆ ಹಾಗೂ ಮೈಕ್ ಸೌಂಡ್ ವ್ಯವಸ್ಥೆ ಗಣ್ಯ ವ್ಯಕ್ತಿಗಳಿಗೆ ಹಾಗೂ ಪತ್ರಕರ್ತರಿಗೆ ಆಸನದ ವ್ಯವಸ್ಥೆ ಎಲ್ಲವನ್ನು ಪರಿಶೀಲಿಸಿ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದರು.
ಅಲ್ಲದೆ ಹೊರ ಭಾಗದಲ್ಲಿರುವಾಗ ಮೈಕ್ ಶಾಮಿಯಾನ್ ಸ್ಥಳವನ್ನು ಪರಿಶೀಲಿಸಿದರು. ರಸ್ತೆ ಬಂದಿಯಲ್ಲಿ ಮೋಟರ್ ವಾಹನಗಳನ್ನು ನಿಲ್ಲಿಸಲು ಪೋಲಿಸ್ ಅಧಿಕಾರಿಗಳಿಗೆ ಸೊಚನೆ ನೀಡಿದರು. ಅಧಿಕಾರಿಗಳು ತಮಗೆ ವಹಿಸ ಕೆಲಸ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಈಶಾನ್ಯ ವಲಯದ ಪೋಲಿಸ್ ಮಹಾ ನಿರೀಕ್ಷ ಕರು ಹಾಗೂ ಪೊಲೀಸ್ ಆಯುಕ್ತ ಅಜಯ ಹಿಲ್ಲೋರಿ, ಎಸ್ ಪಿ ಅಡ್ಡೂರು ಶ್ರೀನಿವಾಸಲು,ಸಿ ಇ ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ದೇವದಾಸ್ ಪಾಟೀಲ್ ಡಿಎಸ್ಪಿ ಬಿಂದುರಾಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.