ಯಾದಗಿರಿ: ಜಿಲ್ಲೆಯ ವಡಗೇರಾ ಮತ್ತು ಶಹಾಪೂರ ತಾಲ್ಲೂಕಿನ ಕೃಷ್ಣಾ ಭೀಮಾ ನದಿಗಳ ಬದಿಯಲ್ಲಿ ಬರುವ ಪ್ರವಾಹ ಪೀಡಿತ ಹಳ್ಳಿಗಳಲ್ಲಿ ಸಹಜ ಸ್ಥಿತಿ ಮರಳುತ್ತಿದೆ ಆದರೆ ಸ್ಥಳದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವುದರಿಂದ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವಂತೆ ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇದುವರೆಗೆ ಪ್ರವಾಹ ಇದ್ದರೆ ಒಂದು ರೀತಿಯ ಸಂಕಷ್ಟವಾಗಿದ್ದರೆ ಈದೀಗ ಪ್ರವಾಹ ಇಳಿದ ನಂತರ ನೀರಲ್ಲಿ ಹರಿದುಬಂದ ಕ್ರಿಮಿ ಕೀಟಗಳು ಸೂಕ್ಷ್ಮಾಣುಗಳಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಇದುವರೆಗೆ ನೀರು ಬರುವ ಭೀತಿ ಎದುರಿಸಿದರೆ ಇದೀಗ ಜನತೆಗೆ ರೋಗ ಬರುವ ಆತಂಕ ಉಂಟಾಗಿದೆ ಆದ್ದರಿಂದ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಈ ಪ್ರದೇಶಗಳಿಗೆ ಸೂಕ್ತ ಕ್ರಮಗಳಾದ ಫಾಗಿಂಗ್, ಬ್ಲಿಚಿಂಗ್ ಪೌಡರ್ ಸಿಂಪಡನೆ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಬೆಕು.
ಅಲ್ಲದೇ ಪ್ರವಾಹದಿಂದಾಗಿ ನೀರು ಕಲುಷಿತಗೊಂಡಿದ್ದು ನೀರಿನಲ್ಲಿ ರೋಗಾಣುಗಳು ಸೂಕ್ಷ್ಮಾಣುಗಳು ಸೇರಿಕೊಂಡಿವೆ. ಇದರಿಂದ ಗ್ರಾಮಗಳಿಗೆ ಶುದ್ಧ ನೀರು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರವಾಹಕ್ಕೆ ಸಿಲುಕಿ ನಲುಗಿದ ನೈಜ ಸಂತ್ರಸ್ತರಿಗೆ ಪರಿಹಾರ ತಲುಪಿಸಲು ಸರಿಯಾದ ವರದಿ ತರಿಸಿಕೊಳ್ಳಬೇಕು ನಂತರ ಸಮರ್ಪಕ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಮದು ಅವರು ಆಗ್ರಹಿಸಿದ್ದಾರೆ.