ಶರಣ ಢೋರ ಕಕ್ಕಯ್ಯ ಸಮಾಜದ ಅಭ್ಯರ್ಥಿ ವಿಠಲ್ ಗೆ ಸಚಿವ ಸ್ಥಾನ ನೀಡಲು ಮನವಿ

0
18

ಕಲಬುರಗಿ: ಕರ್ನಾಟಕ ರಾಜ್ಯದಾದ್ಯಂತ ಭಾರತೀಯ ಜನತಾ ಪಕ್ಷದ ವಿರುದ್ಧ ಬಹುಮತ ಪಡೆದುಕೊಂಡು ಸರಕಾರ ರಚಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಿರುವುದಕ್ಕೆ ಶರಣ ಢೋರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್‍ನ್ ಪಧಾಧಿಕಾರಿಗಳು ಸೇರಿ ಅನಂತ ಅನಂತ ಹೃತ್ತೂರ್ವಕ ಶುಭಕೋರಿ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸದರು.

ಪ್ರಸ್ತುತ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷದ ಶಾಸಕರಾಗಿ ಆಯ್ಕೆಯಾಗಿರುವ ನಮ್ಮ ಸಮುದಾಯದ ಏಕೈಕ ವ್ಯಕ್ತಿ ವಿಠಲ್ ಕಟಕೆ ಧೋಂಡ್ ರವರು ಅತ್ಯಂತ ಸರಳ, ಸಜ್ಜನ ಹಾಗೂ ಜನಪ್ರಿಯ ಶಾಸಕರಾಗಿರುತ್ತಾರೆ, ಅಲ್ಲದೇ ಸದರಿಯವರು ಉತ್ತಮ ಆಡಳಿತಗಾರರಾಗಿ 2008 ರಿಂದ 2013 ರ ಅವಧಿಯಲ್ಲಿ ಶಾಸಕರಾಗಿದ್ದಾಗ ತಮ್ಮ ಕ್ಷೇತ್ರವಾದ ವಿಜಯಪುರದ ನಾಗಠಾಣದಲ್ಲಿ ಸರಕಾರದಿಂದ ಸಾಧ್ಯವಿರುವ ಎಲ್ಲಾ ಅಭಿವೃದ್ಧಿಪರ ಕೆಲಸಗಳನ್ನು ಕೈಗೊಂಡಿರುತ್ತಾರೆ ಹಾಗೂ ನಾಯಕರಾಗಿರುತ್ತಾರೆ.

Contact Your\'s Advertisement; 9902492681

ಈ ರೀತಿಯಾಗಿ ಜನ ಮೆಚ್ಚುಗೆ ಪಡೆದ ವಿಠಲ್ ಕಟಕ್ ಧೋಂಡ್‍ರವರು ನಾಗಠಾಣಾ ಕ್ಷೇತ್ರದಿಂದ ಎರಡನೇ ಬಾರಿಗೆ ಅಭೂತಪೂರ್ವ ಮತಗಳಿಂದ ಆಯ್ಕೆಯಾಗಿದ್ದು, ಈ ಬಾರಿ ಅವರ ಸೇವಾಪರತೆಯು ಕೇವಲ ನಾಗಠಾಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಹಿಂದುಳಿದ ರಾಜ್ಯದ ತ್ರಿಮತಸ್ಥ ಸಮುದಾಯ ಸಮಸ್ತರಿಗೆ ತಲುಪಬೇಕಾದ ಅಗತ್ಯವಿದೆ.

ಡಿ. ದೇವರಾಜ ಅರಸುರವರ ಸಚಿವ ಸಂಪುಟದಲ್ಲಿ ಅತ್ಯಂತ ಅಲ್ಪಾವಧಿಗೆ ಸಚಿವರಾಗಿದ್ದ ಆರ್. ಕಿತ್ತೂರರಿಗಿಂತ ಮೊದಲು ಹಾಗೂ ನಂತರ ಯಾರೊಬ್ಬರೂ ಈ ಸಮುದಾಯದ ವತಿಯಿಂದ ಸಚಿವರಾಗಿರುವುದಿಲ್ಲ. ಅಲ್ಲದೇ ನಮ್ಮ ಸಮುದಾಯವು ಅತೀ ಕಡಿಮೆ ಜನಸಂಖ್ಯೆಯುಳ್ಳ ಸಮುದಾಯವಾಗಿದ್ದು, ನಮ್ಮ ಸಮುದಾಯವು ಸರಕಾರದ ಹಲವಾರು ಯೋಜನೆಗಳಿಂದ ವಂಚಿತರಾಗಿದ್ದೇವೆ. ಕಾರಣ ನಮ್ಮ ಪರಿಶಿಷ್ಟ ಜಾತಿ ಸಮುದಾಯವನ್ನು ಸಮಾಜದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸದರಿ ಶ್ರೀ ವಿಠಲ ಕಟಕ್ ಧೋಂಡ್ ಶಾಸಕರು ಇವರನ್ನು ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಆಶಿರ್ವಧಿಸಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರಿಗೆ ಅಪ್ಪಾರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅಧ್ಯಕ್ಷ ಸಾಯಬಣ್ಣ ಎಂ. ಹೋಳಕರ್, ಉಪಾಧ್ಯಕ್ಷ ಲಿಂಗೋಜಿ ಗಾಜರೆ, ಪ್ರಧಾನ ಕಾರ್ಯದರ್ಶಿ ಮೋತಿಲಾಲ ಕಟಕೆ, ಜಂಟಿ ಕಾರ್ಯದರ್ಶಿ ಅಶೋಕ ಶಿಂದೆ, ಖಜಾಂಚಿ ರಮೇಶ ಗಾಯದನಕ, ಸದಸ್ಯರಾದ ಅರ್ಜುನ ಸೋನಕಾವಡೆ, ದೇವಿಂದ್ರ ಧಡಕೆ, ಅಶೋಕ ಎಸ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here