ಕಲಬುರಗಿ : ರಟಕಲ್ ಸೌಹಾರ್ದ ಸಮಿತಿಯಿಂದ‌ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

0
147

ಕಲಬುರಗಿ: ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಪೊಲೀಸ್ ಅಧಿಕಾರಿಗಳು ಕಟ್ಟಿರುವ ಕಂಪೌಂಡ್ ಗೋಡೆ ತೆರವಿಗೆ ಒತ್ತಾಯಿಸಿ ಇಂದು ರಟಕಲ್ ಗ್ರಾಮ ಪಂಚಾಯತ್ ಎದುರುಗಡೆ ಸೌಹಾರ್ದ ಸಮಿತಿ ರಟಕಲ್ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಐತಿಹಾಸಿಕ ಹಿನ್ನೆಲೆ ಇರುವ ತಲಾತಲಾಂತದಿಂದ ದರ್ಗಾದ ಮೇಲೆ ನಂಬಿಕೆ ಹೊಂದಿರುವ ಹಿಂದೂ ಮುಸ್ಲಿಂರು ಸೌಹಾರ್ದ, ಸಹಬಾಳ್ವೆಯಿಂದ ಬದುಕಿದ್ದಾರೆ. ಇಂತಹ ಸೌಹಾರ್ದ ನಾಡಿನಲ್ಲಿ ರಾತೋರಾತ್ರಿ ಕಂಪೌಡ್ ಕಟ್ಟಿ ಶಾಂತಿ ಕದಡುವ ಕೆಲಸ ಪೋಲಿಸರೆ ಮಾಡುತ್ತಿದ್ದಾರೆಂದು ರಟಕಲ್ ಗ್ರಾಮಸ್ಥರು ಆರೋಪಿಸಿದ್ದಾರೆ.

Contact Your\'s Advertisement; 9902492681

ರಟಕಲ್ ಪೊಲೀಸ್ ಠಾಣೆಯ ಕಂಪೌಂಡನಲ್ಲಿ ಹಜರತ್ ಮಹೇಬೂಬ್ ಸುಬಾನಿ ದರ್ಗಾಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಗ್ರಾಮದಲ್ಲಿ ಪೊಲೀಸ್‌ ಠಾಣೆ ಸ್ಥಾಪನೆ ಆಗುವ ಮೊದಲೆ ದರ್ಗಾ ಇತ್ತು. ಪೊಲೀಸ್ ಸ್ಟೇಷನ್ ಗೆ ಹೊಲ ಮಾರಿದ್ದು ಅಬ್ದುಲ್ ಸಾಬ್ ತಂದೆ ಇವರು ಪೋಲಿಸ್ ಸ್ಟೇಷನ್ ಗೆ ( ಸರ್ಕಾರಕ್ಕೆ) ದರ್ಗಾವನ್ನು ತೆರವು ಗೊಳಿಸಬಾದು ಹಾಗೆ ಹಾಗೆ ಇರಬೇಕೆಂದು ಷರತ್ತು ಬದ್ಧ ವಾಗಿ ಹೊಲವನ್ನು ಮಾರಾಟ ಮಾಡಲಾಗಿತ್ತು.

ಗ್ರಾಮದಲ್ಲಿ ಜನರು ಜಾತಿಬೇಧ ತಾರತಮ್ಯವಿಲ್ಲದೆ ಸರ್ವಧರ್ಮದವರು ಈ ದರ್ಗಾಕ್ಕೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ಪ್ರತಿ ಗುರುವಾರ ಮತ್ತು ಅಮವಾಸೆ, ಹುಣ್ಣಿಮೆ,ಹಬ್ಬ ಹರಿದಿನಗಳು ಸೇರಿದಂತೆ ಪ್ರತಿದಿನ ಗ್ರಾಮದ ಜನರು ಪ್ರಾರ್ಥನೆಗೆಂದು ದರ್ಗಾಕ್ಕೆ ಬರುತ್ತಾರೆ .
ಗ್ರಾಮಸ್ಥರ ವಿರೋಧ ನಂತರವು ರಟಕಲ್ ಪೊಲೀಸ್ ಠಾಣೆಯ ಪೊಲೀಸರು ಜನರ ಭಾವನೆಗಳನ್ನು ಲೆಕ್ಕಿಸದೇ ದರ್ಗಾಕ್ಕೆ ಇರುವ ದ್ವಾರದಲ್ಲಿ ಕಂಪೌಂಡ ಕಟ್ಟಿದ್ದದಾರೆ. ಸಾರ್ವಜನಿಕವಾಗಿ ಎಲ್ಲಾ ಭಕ್ತರಿಗೆ ದರ್ಶನ ಪಡೆಯಲು ಪ್ರವೇಶ ದ್ವಾರ ನಿರ್ಬಂಧನೆ ಮಾಡಿ ಸಮಸ್ಯೆ ಮಾಡಿದ್ದಾರೆಂದು ಧರಣಿ ಸತ್ಯಾಗ್ರಹ ಉದ್ದೇಶಿಸಿ ಶರಣಬಸಪ್ಪ ಮಮ್ಮಶೆಟ್ಟಿ ಅವರು ಮಾತಾನ್ನಾಡಿ ಹೇಳಿದರು.

ತಕ್ಷಣ ರಟಕಲ್ ಗ್ರಾಮವೂ ಸೌಹಾರ್ದ ಮತ್ತು ಭಾವೈಕ್ಯತೆಯಿಂದ ಕೂಡಿದ ಗ್ರಾಮವಾಗಿದ್ದು , ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ದರ್ಗಾದ ಪ್ರವೇಶ ದ್ವಾರದಲ್ಲಿ ಕಟ್ಟಿರುವ ಕಂಪೌಂಡ ತೆರವುಗೊಳ್ಳಿಸಿ , ಭಕ್ತರಿಗೆ ದರ್ಗಾದ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೌಹಾರ್ದ ಮತ್ತು ಶಾಂತಿ ನೆಲೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡ ಶರಬಸಪ್ಪ ಮಮಶೇಟಿ, ಅಣಕಲ್ ಮುರಗ್ಯಣ ಸೌಕಾರ, ರಸೂಲ್ ಸಾಬ್, ರೇವಣಸಿದ್ದಪ್ಪ, ಶ್ರೀ ಜೇಜಿ ಮುತ್ಯಾ, ಸಿದ್ದಪ್ಪ, ಮಕ್ಬುಲ್ ಸಾಬ ಗೌಂಡಿ, ಇರಣ್ಣ, ಮೊಹಮ್ಮದ್ ಮಿಯ್ಯಾ ಇಕ್ಬಾಲ್ ಪಟೇಲ್, ಸೌಕತ್ ಅಲಿ, ಸಲೀಮಾ ಬೇಗಂ, ಹಸೀನಾ, ಗೋರಿಮಾ, ಹುಸೇನ್ ಬೀ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here