Asst. ಎಸ್.ಪಿ ಮತ್ತು ರಟಕಲ್ ಗ್ರಾಮಸ್ಥರ ಮಾತುಕತೆ ವಿಫಲ: ಮುಂದುವರೆದ ಧರಣಿ ಸತ್ಯಾಗ್ರಹ

0
137

ಕಲಬುರಗಿ: ಚಿಂಚೋಳಿಯ ಕಾಳಗಿ ತಾಲ್ಲೂಕಿನ ‌ರಟಕಲ್‌ ಗ್ರಾಮದಲ್ಲಿ ಐತಿಹಾಸಿಕ ಮಹಿಬೂಬ್ ‌ಸುಬಾನಿ ದರ್ಗಾ ಪ್ರವೇಶ ದ್ವಾರಕ್ಕೆ ಪೊಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆ ತೆರವುಗೊಳಿಸಲು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಸಹಾಯಕ ಎಸ್.ಪಿ ಇತ್ಯರ್ಥಗೊಳಿಸುವ ಸಂಧಾನದ ಮಾತುಕತೆ ವಿಫಲಗೊಂಡಿದೆ. ಶನಿವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 5 ದಿನಕ್ಕೆ ಮುಂದುವರೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ವೇಳೆ ಹೋರಾಟ ನಿರತ ಕೆಲವರೊಂದಿಗೆ ಸಹಾಯಕ ಎಸ್.ಪಿ ನ್ಯಾ ಶ್ರೀನಿಧಿ ಮಾತುಕತೆ ನಡೆಸಿ ದರ್ಗಾ ಪ್ರವೇಶಕ್ಕೆ ಹೊಸ ದಾರಿ ಕಲ್ಪಿಸಿ, ಇಲಾಖೆಯಿಂದ ಹೊಸ ದಾರಿಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿ ಮನವೊಲಿಸಲು ಯತ್ನಿಸಿದರು. ಸದ್ಯ ಅಭಿವೃದ್ಧಿ ಹಾಗೂ ವಕ್ಫ್ ದಾಖಲೆ ಪ್ರಸ್ತಾಪಕ್ಕೆ ಆಸ್ಪದ ನೀಡದ ಹಿನ್ನೆಲೆಯಲ್ಲಿ ಮಾತುಕತೆ ವಿಫಲವಾಗಿದೆ ಎನ್ನಲಾಗಿದೆ.

Contact Your\'s Advertisement; 9902492681

ಗ್ರಾಮಸ್ಥರು ಹಳೆ ದಾರಿ ವಿಚಾರವಾಗಿ ರೂಢಿಗತ ಪರಂಪರೆ, ಧಾರ್ಮಿಕ ನಂಬಿಕೆ ಸೇರಿದಂತೆ ಹಲವು ಅಂಶಗಳನ್ನು ಸಹಾಯಕ ಎಸ್.ಪಿ ಎದುರಿಗೆ ಗ್ರಾಮಸ್ಥರು ಇಟ್ಟು ಸ್ಪಂದಿಸಿ ದರ್ಗಾದ ಹಳೆ ದಾರಿಯನೇ ಬೀಡಿ ಎಂದು ಮನವರಿಕೆ ಮಾಡಿಕೊಂಡರು. ಗ್ರಾಮಸ್ಥರ ಮಾತುಗಳು ಅಲ್ಲಗಳೆದು, ನಿಮ್ಮ ಹೋರಾಟ ವಿತಂಡವಾದ ಮತ್ತು ಹಟವಾದಿತನದಿಂದ ಕೊಡಿದೆ ಎಂದು ಇದು ನ್ಯಾಯಯುತ ಹೋರಾಟ ಅಲ್ಲವೇ ಅಲ್ಲ ಎಂದು ಪೊಲೀಸ್ ಇಲಾಖೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ನಡೆಯುತ್ತಿದೆ ಎಂದು ಬೆಸರ ವ್ಯಕ್ತಪಡಿಸಿದರು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ, ನಮ್ಮ ಹೋರಾಟ ಹಳೆಯ ರಸ್ತೆಯ ವಿಚಾರವಾಗಿ ನಡೆಯುತ್ತಿದೆ. ಗ್ರಾಮಸ್ಥರು ವಿರೋಧಿಸಿದರು ದರ್ಗಾ ಪ್ರವೇಶ ದ್ವಾರದಲ್ಲಿ ಅಡ್ಡಲಾಗಿ ಪೊಲೀಸರು ತರಾತುರಿಯಲ್ಲಿ ಕಂಪೌಂಡ ಕಟ್ಟಿರುವುದ್ದೇಕೆ?, ಈಗ ಹಳೆ ದಾರಿ ಬಿಡುವುದಿಲ್ಲ ಎಂದು ಯಾರದೋ ಒತ್ತಡದಿಂದ ಪೊಲೀಸರು ಈ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಹರಿದಾಡುತ್ತಿದೆ.

ಪೊಲೀಸ್ ಇಲಾಖೆ ಜನರ ಮೇಲೆ ಒತ್ತಡ ಹೇರಿ ಹೊಸ ದಾರಿ ನೀಡುವುದಕ್ಕೆ ಮುಂದಾಗಿದ್ದು, ದರ್ಗಾಕ್ಕೆ ಇರುವ ಹಳೆ ದಾರಿನೇ ನಮಗೆ ಬಿಟ್ಟುಕೊಡಿ ಬೆರೆನ್ನೂ ನಮಗೆ ಬೇಡ. ಎಸ್.ಪಿ ಬಂದು ನ್ಯಾಯಯುತ ನಮ್ಮ ಬೇಡಿ ಇತ್ಯರ್ಥಗೊಳಿಸುವ ವಿಶ್ವಾಸ ನಮಗಿದೆ ಎಂದು ಗ್ರಾಮಸ್ಥರು ಧರಣಿ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here