ಕಲಬುರಗಿ: ಇಲ್ಲಿಯ ಜೀವನ ಜ್ಯೋತಿ ಆಸ್ಪತ್ರೆಯ ಪ್ರಖ್ಯಾತ ಡಾಕ್ಟರ್ ಅಶ್ವಿನ್ ಶಾ ಹಾಗೂ ಅವರ ತಂಡದ ಸಹಾಯದಿಂದ ಸತತ 6 ಗಂಟೆಗಳ ಮುಖದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ದೇಶ ಕಾಯುವ ಸೈನಿಕನ ಮುಖಕ್ಕೆ ಡಾಕ್ಟರ್ ತಂಡ ಮರು ಜೀವ ನೀಡಿ ಅಬ್ದುತವಾದ ಯಶಸ್ಸು ಕಂಡಿದೆ.
ಜಮ್ಮು ಕಾಶ್ಮೀರದ ಪ್ರಾಂತದಲ್ಲಿ ಸಿಆರಪಿಎಫ್ ತುಕಡಿಯಲ್ಲಿ ಹವಾಲ್ದಾರ್ ಆಗಿ ತೈನಾತಾಗಿದ್ದ ಯೋಧ ಶಾಂತಕುಮಾರ ತಂದೆ ಬಲದೇವ ಸಿಂಗ್ ಗಡಿಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಉಗ್ರವಾದಿಗಳು ನೇರವಾಗಿ ಮುಖಕ್ಕೆ ಮೂರು ಸುತ್ತಿನ ಗುಂಡು ಹಾರಿಸಿ,ಮುಖದ ಭಾಗಕ್ಕೆ ಗಂಭೀರ ಗಾಯ ಮಾಡಿದ್ದು,ಸೀಳು ತುಟಿ, ಸೀಳು ಬಾಯಿ ಹಾಗೂ ಸೀಳು ಮಖಾಂಗವನ್ನು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಯೋಧನನ್ನು ಗುಣಪಡಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಯಗೊಂಡ ಯೋಧ ಶಾಂತಕುಮಾರ ಅವರನ್ನು ಮೊದಲ ಬಾರಿ ಸೇನೆಯ ವತಿಯಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎರಡನೇ ಹಂತದ ಶಸ್ತ್ರಚಿಕಿತ್ಸೆ ಕಲಬುರಗಿ ಬಂದಾಗ,ಜೀವನ ಜ್ಯೋತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನೂ ಮೂರನೇ ಹಂತದ ಶಸ್ತ್ರಚಿಕಿತ್ಸೆ ಬಾಕಿಯಿದೆ ಎಂದು ತಿಳಿಸಿದ ಆಸ್ಪತ್ರೆಯ ವೈದ್ಯರು, ಯೋಧನ ಶಸ್ತ್ರಚಿಕಿತ್ಸೆ ಗೆ ಯಾವುದೇ ರೀತಿಯ ಖಚು೯ ತೆಗೆದುಕೊಂಡಿಲ್ಲ,ಉಚಿತವಾಗಿ ನಮ್ಮ ಕಡೆಯಿಂದ ಯೋಧನಿಗೆ ಸೇವೆ ಮಾಡಲಾಗಿದೆ ಎಂದು ಹೇಳಿದರು.
ಭಯೋತ್ಪಾದಕರ ಗುಂಡಿಗೆ ಬಲಿಯಾದ ಯೋಧನ ಮುಖದ ನಾಲಿಗೆಯಿಂದ ಚಮ೯ ತೆಗೆದು, ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮತ್ತೆ ಮುಖಕ್ಕೆ ಹಾಗೂ ನಾಲಿಗೆಗೆ ಮರು ಜೀವ ನೀಡಲಾಗಿದೆ.
ದೇಶದ ಸೈನಿಕವಿರುವ ಕಾರಣ ನಾವು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು,ಹೊರಗಡೆ ಇದರ ಖಚು೯ ಅಂದಾಜು ಎರಡುವರೆ ಲಕ್ಷ ಬರಬಹುದು ಎಂದು ಹೇಳಿದ ಅವರು,19 ದಿನಗಳ ಕಾಲ ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಅವರನ್ನು ಚಿಕಿತ್ಸೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಅಶ್ವಿನ್ ಶಾ,ಡಾ.ಮಲ್ಲಿಕಾರ್ಜುನ, ಡಾ.ದೇವರಾಜ ಕಣ್ಣೂರ,ಡಾ.ಅಮರನಾಥ ಮಹಾರಾಜ ಇದ್ದರು.