ಪ್ರೊ.ಡಿ.ಬಿ ಪಾಟೀಲ್ ಸೇವೆ ಸ್ಮರಣೀಯ: ಪ್ರೊ.ವಿ.ಟಿ ಕಾಂಬಳೆ

0
19

ಕಲಬುರಗಿ: ವಿಶ್ವವಿದ್ಯಾಲಯದಲ್ಲಿ 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಪ್ರೊ.ಡಿ.ಬಿ ಪಾಟೀಲ ಅವರು ನಿವ್ರತ್ತಿಯ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ವಿ.ಟಿ ಕಾಂಬಳೆ ಹಾರೈಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರೊ.ಡಿ.ಬಿ ಪಾಟೀಲ ಅವರ ನಿವ್ರತ್ತಿಯ ಅಂಗವಾಗಿ ಪತ್ರಿಕೋದ್ಯಮ ವಿಭಾಗದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಪ್ರೊ.ಡಿ.ಬಿ ಪಾಟೀಲ ಅವರು ಮೂಲತ ಸುರಪುರ ತಾಲ್ಲೂಕಿನ ಗೂಡಿಹಾಳ ಟಿ ಗ್ರಾಮದವರಾಗಿದ್ದು ಮೂಲತ ಶಾಂತ ಸ್ವಭಾವದವರಾಗಿದ್ದಾರೆ. ನನ್ನ ಸಹಪಾಠಿಯಾಗಿ ಕೆಲಸ ಮಾಡಿದ ಅವರು ದೇಶ-ವಿದೇಶಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಾರೆ ಎಂದರು.

ನಂತರ ಮಾತನಾಡಿದ ಗ್ರಂಥಪಾಲಕ ಡಾ.ಸುರೇಶ ಜಂಗೆˌ ಸರಳ ವ್ಯಕ್ತಿತ್ವ ಹೊಂದಿದ ಪಾಟೀಲರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ದೇಶದ ಹಲವು ಸಂಸ್ಥೆಗಳ ಬೋರ್ಡ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿವ್ರತ್ತಿ ಜೀವನ ಸುಖಮಯವಾಗಿ ಸಾಗಲಿ ಎಂದರು.

ನಂತರ ಮಾತನಾಡಿದ ಅತಿಥಿ ಪ್ರಾಧ್ಯಾಪಕ ಡಾ.ರಾಜಕುಮಾರ ದಣ್ಣೂರˌ ಪತ್ರಿಕೋದ್ಯಮ ವಿಭಾಗದ ಬೆಳವಣಿಗೆಗೆ ಪ್ರೊ. ಡಿ.ಬಿ ಪಾಟೀಲರು ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ಸಿಬ್ಬಂದಿಗಳ ಜೊತೆಗೆ ಸ್ನೇಹಪರವಾದ ವಾತಾವರಣ ನಿರ್ಮಿಸಿದ್ದರು. ವಿಭಾಗದ ಪ್ರತಿ ಕಾರ್ಯಚಟುವಟಿಕೆಯ ಹಿಂದೆ ಪಾಟೀಲ ಅವರ ಶ್ರಮವಿದೆ ಎಂದರು.

ಈ ಸಂದರ್ಭದಲ್ಲಿ ಅತಿಥಿ ಪ್ರಾಧ್ಯಾಪಕಿ ರೀತು ತಳವಾರˌ ಡಾ.ಅಶೋಕ ದೊಡ್ಮನಿ ಮಾತನಾಡಿದರು. ವಿದ್ಯಾರ್ಥಿಗಳಾದ ವಿಜಯಕುಮಾರˌ ಭೀಮಾಶಂಕರˌ ಸಾಬಣ್ಣˌ ರಾಜಶೇಖರˌ ಗೌರಮ್ಮ ಕಲಬುರ್ಗಿˌ ಬಸವರಾಜ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here