ಶ್ರೀಸಿಮೆಂಟ್ ಕಂಪನಿ ವಿರುದ್ಧ ಧರಣಿ ನಿರತ ರೈತ ಸ್ಥಳದಲ್ಲೇ ಸಾವು

0
168

ಕಲಬುರಗಿ: ಇಲ್ಲಿನ ಶ್ರೀಸಿಮೆಂಟ್ ಕಂಪೆನಿಯ ವಿರುದ್ಧ ಕಳೆದ 183 ದಿನಗಳಿಂದ ವಿವಿಧ ಬೇಡಿಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ರೈತ ಓರ್ವ ಅಸ್ವಸ್ಥರಾಗಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಸೇಡಂ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ದೇವಿಂದ್ರಪ್ಪ ಮಲ್ಲಣ್ಣ ಜೊಗೆರ (50) ಮೃತಪಟ್ಟ ಹೋರಾಟ ನಿರತ ರೈತ ಎಂದು ತಿಳಿದುಬಂದಿದೆ. ದೇವಿಂದ್ರಪ್ಪ ಶ್ರೀಸಿಮೆಂಟ್ ಕಂಪನಿಗೆ ತನ್ನ 2 ಎಕರೆ 20 ಗುಂಟೆ ಜಮೀನು ನೀಡಿದ್ದು, ಉದ್ಯೋಗ ಇಲ್ಲದೇ ಕೂಲಿ ಮಾಡಿಕೊಂಡಿದರು.

Contact Your\'s Advertisement; 9902492681

ಕಂಪನಿಯ ಜಾಬ್ ಕಾರ್ಡ್ ಕೊಟ್ಟು ಮಗನಿಗೆ ಉದ್ಯೋಗ ಕೊಡದೇ ಕಂಪನಿ ಮೊಸ ಮಾಡಿದೆ ಎಂದು ಆರೋಪಗಳು ಕೇಳಿಬಂದಿದೆ. ಮೃತ ವ್ಯಕ್ತಿ ಪತ್ನಿ ಶಾಂತಮ್ಮ, ಮಗಳು ನಾಗಮ್ಮ, ಮಗನಾದ ಮಲ್ಲಪ್ಪ ಹಾಗೂ ಸಲಭಾಗಪ್ಪ ಎಂಬ ಇಬ್ಬರು ಮೂವರು ಮಕ್ಕಳು ಇದ್ದಾರೆ.

ಸೇಡಂ ತಾಲೂಕಿನ ಕೋಡ್ಲಾ ಬೆನಕನಹಳ್ಳಿ ಶ್ರೀಸಿಮೆಂಟ್ ಕಂಪೆನಿ ಎದುರು ದಿನಾಂಕ 1/12/2022 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ 183 ನೆ ದಿನಕ್ಕೆ ಕಾಲಿಟ್ಟಿದ್ದು, ಕಂಪೆನಿ ವಿಷಕಾರಿ ಗಾಳಿ ವಾಸನೆ ದಿಂದ ಧರಣಿಯಲ್ಲಿ ಕುಳಿತು ಭೂಮಿ ಕಳೆದುಕೊಂಡ ರೈತ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ಕಂಪನಿಯ ನಿರ್ಲಕ್ಷ್ಯ ಮತ್ತು ಮೊಸದ ಆಟಕ್ಕೆ ರೈತ ಓರ್ವ ಬಲಿಯಾಗಿದ್ದು, ಸಾವಿಗೆ ಶ್ರೀಸಿಮೆಂಟ್ ಕಂಪನಿ ನೆರ ಹೊಣೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಆರೋಪಿಸಿ,ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಶ್ರೀಸಿಮೆಂಟ್ ಕಂಪನಿಯ ವಿರುದ್ಧ ರೈತರು ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮೃತ ಕುಟುಂಬಸ್ಥತರ ಆಕ್ರಮನಂದನ ಮುಗಿಲು ಮುಟ್ಟಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here