ಪ್ರಿಯಾಂಕ್ ಖರ್ಗೆ ಇನ್ನೂ ಬಚ್ಚಾ: ೧೪ ಸಲ ಅರ್ಥಸಚಿವರಾದರೂ ಬಂಡಲ್ ಬಿಟ್ಟ ಸಿದ್ದರಾಮಯ್ಯ | ಈಶ್ವರಪ್ಪ

0
21

ಪ್ರಿಯಾಂಕ್ ಖರ್ಗೆ ಇನ್ನೂ ಬಚ್ಚಾ

ತಂದೆ ಮಾರ್ಗದರ್ಶನ ಪಡೆದುಕೊಂಡು ಪ್ರಿಯಾಂಕ್ ಮುನ್ನಡೆಯಲಯ ಈಶ್ವರಪ್ಪ ಸಲಹೆ

Contact Your\'s Advertisement; 9902492681

ಕಲಬುರಗಿ: ಮಾತೆತ್ತಿದರೆ ದೇಶಭಕ್ತರ ಸಂಘಟನೆಯಾಗಿರುವ ಆರ್‌ಎಸ್‌ಎಸ್‌ನ್ನು ನಿಷೇಧ ಮಾಡುವುದಾಗಿ ಹೇಳುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ನಿಲುವಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ ಪ್ರಿಯಾಂಕ್ ಇನ್ನೂ ಬಚ್ಚಾ ಎಂದು ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಲಗಾಣಗಾಪುರಕ್ಕೆ ತೆರಳುವ ಮುನ್ನ ಭೇಟಿಯಾದ ಪತ್ರಕರ್ತರ ಜತೆಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ಅದಾದ ನಂತರವೂ ಪ್ರಿಯಾಂಕ್ ಖರ್ಗೆ ಆರ್‌ಆರ್‌ಎಸ್ ನಿಷೇಧಿಸುವ ಮಾತನ್ನು ಆಡುತ್ತಾರೆ, ಕಾನೂನು ಮೀರಿ ನಡೆದುಕೊಳ್ಳಲಿ ನೋಡೋಣ ಎಂದು ಸವಾಲು ಹಾಕಿದಂತೆ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ನಿಷೇಧಿಸುವುದು ಖರ್ಗೆ ಅವರ ಅಪ್ಪ ಮಲ್ಲಿಕಾರ್ಜುನ ಖರ್ಗೆ ಅವರಿಂದಲೂ ಆಗಿಲ್ಲ, ಅಷ್ಟೆ ಏಕೆ ಇಂದಿರಾಗಾAಧಿ ಅಂತಹವರಿAದಲೇ ಆಗಿಲ್ಲ ಎಂಬುದು ಮೊದಲು ಪ್ರಿಯಾಂಕ್ ಖರ್ಗೆ ಅರ್ಥ ಮಾಡಿಕೊಳ್ಳಲಿ. ದೇಶದ್ರೋಹಿಗಳಿಗೆ ಸಿಂಹಸಪ್ನವಾಗಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಹೊರತು ಕಾನೂನು ಉಲ್ಲಂಘಿಸುವ ಕೆಲಸವಲ್ಲ. ರಾಷ್ಟç ರಕ್ಷಣೆಗಾಗಿ ಹಗಲಿರುಳು ಆರ್‌ಎಸ್‌ಎಸ್ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ. ದೇಶಭಕ್ತರ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಕಿವಿಮಾತು ಹೇಳಿದರು.

ಅಲ್ಲದೆ ಪ್ರಿಯಾಂಕ್ ಅವರ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ಮಾದರಿಯಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿದ್ದು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರೇ ಇಂತಹ ಮಾತನಾಡಿಲ್ಲ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರೂ ಹೇಳಿದ ನಂತರವೂ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದರು. ಅಲ್ಲದೆ ಪ್ರಿಯಾಂಕ್ ಖರ್ಗೆ ಅವರ ತಂದೆಯವರ ಸಲಹೆ ಮಾರ್ಗದರ್ಶನ ಪಡೆದುಕೊಂಡು ಸಚಿವ ಸ್ಥಾನ ನಿರ್ವಹಿಸಲಿ, ರಾಜಕಾರಣದಲ್ಲಿ ಮುನ್ನಡೆಯಲಿ ಎಂದು ಸಲಹೆ ನೀಡಿದರು.

ಇನ್ನೂ ಯುವಕರಾಗಿದ್ದಾರೆ. ಸಾಕಷ್ಟು ವಯಸ್ಸಿದೆ. ಮನಬಂದAತೆ ಮಾತನಾಡುವುದು ಸರಿಯಲ್ಲ, ಫಲಿತಾಂಶ ಬಂದಾಗಿನಿAದ ಇದುವರೆಗೂ ಪದೇ ಪದೇ ಪ್ರಿಯಾಂಕ್ ಖರ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸುತ್ತಿರುವುದು ನೋಡಿದಾಗ ಪ್ರಚಾರಕ್ಕಾಗಿ ಮಾತನಾಡುತಿರುವಂತಿದೆ. ಸ್ವಲ್ಪ ಯೋಚನೆ ಮಾಡಲಿ ಎಂದು ಹೇಳಿದರು.

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧಕ್ಷ ನೆ.ಲ.ನರೇಂದ್ರಬಾಬು, ಉಪಾಧ್ಯಕ್ಷ ಶರಣಪ್ಪ ತಳವಾರ, ಮುಖಂಡರಾದ ಧರ್ಮಣ್ಣ ಇಟಗಾ, ಶಂಕರ ಚವ್ಹಾಣ ಮೊದಲಾದವರಿದ್ದರು.

ದತ್ತನ ದರ್ಶನ ಪಡೆದ ಈಶ್ವರಪ್ಪ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಸಂಜೆ ದೇವಲಗಾಣಗಾಪುರಕ್ಕೆ ತೆರಳಿ ದತ್ತಾತ್ರೇಯನ ನಿರ್ಗುಣ ಪಾದುಕೆ ದರ್ಶನ ಪಡೆದುಕೊಂಡರು. ವಿಶೇಷ ಪೂಜೆ ಸಲ್ಲಿಸಿದರು.

ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಮುಖಂಡರು ಜತೆಗಿದ್ದರು.

೧೪ ಸಲ ಅರ್ಥಸಚಿವರಾದರೂ ಬಂಡಲ್ ಬಿಟ್ಟ ಸಿದ್ದರಾಮಯ್ಯ: ಮಾತೆತ್ತಿದ್ದರೆ ಹದಿನಾಲ್ಕು ಸಲ ಹಣಕಾಸು ಸಚಿವನಾಗಿ ಕೆಲಸ ಮಾಡಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದಿದ್ದರೂ, ಆದರೆ, ಎರಡು ಸಂಪುಟ ಸಭೆಯಾದರೂ ಮಾಡುತ್ತಿಲ್ಲ ಎಂದರೆ ಜನರ ಮುಂದೆ ಬಂಡಲ್ ಬಿಟ್ಟರಾ ಸಿದ್ದರಾಮಯ್ಯ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನೀಡಿದ ಗ್ಯಾರಂಟಿಗಳನ್ನು ನಂಬಿಕೊAಡೆ ಜನರು ಕಾಂಗ್ರೆಸ್‌ಗೆ ಈ ಸಲ ಮತ ನೀಡಿ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ಎಲ್ಲರಿಗೂ ಫ್ರೀ ಎಂದು ಭಾಷಣ ಬಿಗಿದು, ಈಗ ಷರತ್ತುಗಳನ್ನು ಹಾಕವುದು ಸರಿಯಲ್ಲ ಎಲ್ಲರಿಗೂ ಯೋಜನೆಗಳ ಲಾಭ ಸಿಗುವಂತೆ ಮಾಡಬೇಕು ಎಂದರು.

ಒಂದು ತಿಂಗಳ ಕಾದು ನೋಡುತ್ತೇವೆ. ಜಾರಿಗೊಳಿಸದೆ ಹೋದರೆ, ಯಾವ ತೆರನಾದ ಹೋರಾಟಗಳನ್ನು ಮಾಡಬೇಕು ಎಂಬುದರ ಕುರಿತು ಎಲ್ಲರು ಸೇರಿಕೊಂಡು ಚರ್ಚೆ ನಡೆಸಿ ಹೋರಾಟಗಳನ್ನು ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಹಿಂದಿನAತೆ ಮೋಸ ಮಾಡಲು ಹೋಗಬೇಡಿ, ಅಲ್ಲದೆ ಹಾದಿ ಬೀದಿಯಲ್ಲಿ ಬಿದ್ದವರಿಗೆ ಕೊಡಲು ಆಗಲ್ಲ ಎನ್ನುವ ಮೂಲಕ ರಾಜ್ಯದ ಜನರಿಗೆ ಅವಮಾನ ಹೊರಟಿದ್ದಾರೆ ಎಂದು ಗುಡುಗಿದರು.

ಈ ಸಲ ಪಾಸಾದ ಪದವೀಧರರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎನ್ನುವುದು ಸರಿಯಲ್ಲ, ೨೦೦ಯೂನಿಟ್ ಕರೆಂಟ್‌ನ್ನು ಬಿಪಿಎಲ್ ಕಾರ್ಡ್ ಇದ್ದವರಿಗೆ ಅನ್ವಯ ಅನ್ನುತ್ತಿರುವುದು ತರವಲ್ಲ ಎಂದು ಈಶ್ವರಪ್ಪ ಹೇಳಿದರು.

ಎಲ್ಲರಿಗೂ ಎಲ್ಲ ಯೋಜನೆ ಲಾಭ ಸಿಗುವಂತೆ ಕ್ರಮ ಕೈಗೊಂಡು ಹಣ ಹೊಂದಾಣಿಕೆ ಮಾಡಿ. ಏಷ್ಟೆ ಆದರೂ ನೀವು ೧೪ ಸಲ ಅರ್ಥ ಸಚಿವರಾದವರಲ್ಲವೇ ಎಂದು ಈಶ್ವರಪ್ಪ ಕಿಚಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here