ವಿಜಿ ಮಹಿಳಾ ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ

0
130

ಕಲಬುರಗಿ: ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್ ಉಲ್ಬಣಗೊಳ್ಳುವುದಲ್ಲದೆ ತಾಯ್ತನಕ್ಕು ಧಕ್ಕೆಯುಂಟಾಗುತ್ತದೆ ಎಂದು ದಂತವೈದ್ಯರಾದ ಡಾ.ಸುಧಾ ಹಾಲಕಾಯಿ ಅವರು ಹೇಳಿದರು.

ಇಂದು ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾ.ಸೆ.ಯೋಜನೆ ಘಟಕಗಳು ಹಾಗೂ NCC ಸಂಯುಕ್ತ ಆಶ್ರಯದಲ್ಲಿ ” ವಿಶ್ವ ತಂಬಾಕು ರಹಿತ ದಿನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಮಹಾನಗರಗಳಲ್ಲಿ ಹೆಣ್ಣು ಮಕ್ಕಳು ಸಹ ತಂಬಾಕು ಸೇವನೆ ಮಾಡುತ್ತಿರುದು ವಿಶಾದನೀಯ ಸಂಗತಿ ಎಂದು ಹೇಳಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ಇಂದು ವಿದ್ಯಾರ್ಥಿನಿಯರು ತಮ್ಮ ಸುತ್ತಮುತ್ತಲಿನವರಿಗೆ ಇದರ ಬಗ್ಗೆ ಅರೀವು ಮೂಡಿಸುವ ಅವಶ್ಯಕತೆ ಇದೆ ಎಂದು ಕರೆಕೊಟ್ಟರು ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿದ್ದರು.

ರಾ.ಸೇ.ಯೊ.ಕಾರ್ಯಕ್ರಮಾಧಿಕಾರಿ ಡಾ.ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತಗಳನ್ನಾಡಿ ಸ್ವಾಗತಿಸಿದರು. ಡಾ.ರೇಣುಕಾ ಹಾಗರಗುಂಡಗಿ ವಂದಿಸಿದರು. ಶೃತಿ ಹಾಗೂ ವಿಂಧ್ಯಾ ಪ್ರಾರ್ಥಸಿದರು, ಜೇಸ್ಮಿತಾ ಹಾಗೂ ಪ್ರಜ್ವಲಾ‌ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಡಾ.ಪ್ರೇಮಚಂದ ಚವ್ಹಾಣ,ಡಾ.ಸುಭಾಸ ದೊಡ್ಡಮನಿ,ಡಾ.ಸವಿತಾ ಬಿ, ಶಿವಲೀಲಾ ಧೋತ್ರೆ,ಡಾ.ಶರಣಮ್ಮ ಕುಪ್ಪಿ, ಉಮಾ ರೇವೂರ ಹಾಗೂ ಸಿಬ್ಬಂದಿ ,ಸ್ವಯಂಸೇವಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here