4ರಂದು ಲಿಂಗಾಯತ್ ರ್ಯಾಲಿಗೆ ಭಾಗವಹಿಸಲು ಲೋಹಾರ ಮನವಿ

0
26

ಆಳಂದ: ಜೂ4ರಂದು ಬೆಳೆಗ್ಗೆ 11 ಗಂಟೆಗೆ ಹೈದ್ರಾಬಾದ ನ ಎಕ್ಷಬಿಷನ್ ಮೈದಾನ, ನಾಮಪಲ್ಲಿ ಸ್ಟೇಷನ್ ಹತ್ತಿರ ಬ್ರಹತ್ ಲಿಂಗಾಯತ್ ರ್ಯಾಲಿ ನಡೆಯಲಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಾಗತಿಕ ಲಿಂಗಾಯತ್ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೈದರಾಬಾದನಲ್ಲಿ ರ್ಯಾಲಿ ಮಾಡುವ ಮೂಲಕ ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ನಮ್ಮ ಆಳಂದ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರ ಲಿಂಗಾಯತ ಮುಖಂಡರು ಭಾಗವಾಯಿಸಬೇಕು ಎಂದು ಕೊರಿದ ಅವರು, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮತ್ತು ಸಮಕಾಲಿನ ಶರಣರು ಚಳುವಳಿ ಮೂಲಕ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ವಚನಸಾಹಿತ್ಯ ಈ ಧರ್ಮದ ಧರ್ಮ ಗ್ರಂಥವಾಗಿದೆ. ಅಲ್ಲದೆ, ಒಂದು ಧರ್ಮಕ್ಕೆ ಬೇಕಾಗಿರುವ ಎಲ್ಲ ಅರ್ಹತೆ, ಲಕ್ಷಣಗಳು ಇವೆ. ಹನ್ನೆರಡನೇ ಶತಮಾನದಿಂದ ದೇಶ ಸ್ವತಂತ್ರವಾಗುವ ವರೆಗೆ ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮವಾಗಿತ್ತು. ಆದರೆ ದೇಶ ಸ್ವತಂತ್ರವಾದ ನಂತರ ಲಿಂಗಾಯತ ಧರ್ಮದ ಸ್ವಾತಂತ್ರ್ಯ ತಗೆದು ಹಾಕಿ ಹಿಂದೂ ಧರ್ಮದಡಿಯಲ್ಲಿ ಸೇರಿಸಿ ಲಿಂಗಾಯತರಿಗೆ ದ್ರೋಹ ಮಾಡಲಾಯಿತು ಎಂದು ಅವರು ಅಸಮಾಧಾನ ವ್ಯಕ್ತಡಿಸಿದರು.

Contact Your\'s Advertisement; 9902492681

ಸ್ವಾತಂತ್ರ್ಯದ ಅಂದಿನಿಂದ ಇಂದಿನವರೆಗೆ ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಗೆ ಅನೇಕ ಕಾನೂನು ಹೋರಾಟ, ಜನಾಂದೋಲನ, ಸಭೆ ಸಮಾರಂಭಗಳು ನಡೆಯುತ್ತಲೇ ಬಂದಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೋರಾಟದ ತೀವ್ರತೆ ಹೆಚ್ಚಾಗಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಮಹಾ ಅಧಿವೇಶನ ನಡೆಸಿ ಸರ್ಕಾರಗಳ ಮೇಲೆ ಒತ್ತಡ ತಂದಿದರ ಪರಿಣಾಮ ನ್ಯಾಯಮೂರ್ತಿ ನಾಗಮೋಹನದಾಸ ಅವರನ್ನು ನೇಮಿಸಿ ಅಧ್ಯಯನ ಮಾಡಿ ವರದಿ ಆದರಸಿ ಕರ್ನಾಟಕ ಸರಕಾರ ಕ್ಯಾಬಿನೆಟನಿಂದ ಕೇಂದ್ರ ಸರಕಾರಕ್ಕೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡಲು ಕೇಂದ್ರ ಸರ್ಕಾರರಕ್ಕೆ ಸಿಫಾರಸ್ಸು ಕಳಿಸು ಕೊಟ್ಟರು ಕೇಂದ್ರ ಸರಕಾರ ಸಾಕಾರಾತ್ಮಕವಾಗಿ ಸ್ಪಂದಿಸಿಲಿಲ್ಲ ಆದರೂ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ನಿಂತಿಲ್ಲ ಅದು ನಿರಂತರ ಮುಂದುವರಿದಿದೆ ಎಂದು ನುಡಿದರು.

ಧರ್ಮ ಮಾನ್ಯತೆಗೆ ಪೂರಕ ಎನ್ನುವಂತೆ ಕೆಲವು ತಿಂಗಳ ಹಿಂದೆ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಬಸವಕಲ್ಯಾಣದಲ್ಲಿ ಮಹಾಸಭಾ ಪ್ರಥಮ ಬ್ರಹತ್ ಅಧಿವೇಶನ ನಡೆಯಿತು. ಎಲ್ಲಾ ಕಡೆ ರ್ಯಾಲಿ, ಸಭೆ ಸಮಾರಂಭ, ಕೆಡರ್ ಕ್ಯಾಂಪ್ ಹೀಗೆ ಅನೇಕ ರೀತಿ ಕಾರ್ಯ ಜಾರಿಯಲ್ಲಿದ್ದು ನಾವು ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ಸಿಗುವವರೆಗೆ ನಿರಂತರ ಹೋರಾಟ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ದೇಶದ ಮಠಾಧೀಶರು, ಪ್ರಗತಿಪರ ಚಿಂತಕರು, ಜನಪರ ಜೀವಪರ ಹೋರಾಟಗಾರರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಜೂ 4ರಂದು ಹೈದರಾಬಾದನಲ್ಲಿ ನಡೆಯುವ ಲಿಂಗಾಯತ್ ರ್ಯಾಲಿಗೆ ಸರ್ವರು ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here