ಸುರಪುರ: ತಾಲೂಕಿನ ತಳವಾರಗೇರಿಯ ಶ್ರೀ ವೀರತಪಸ್ವಿ ಚನ್ನವೀರ ಪ್ರೌಢ ಶಾಲೆಯಲ್ಲಿ ಶ್ರೀ ಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಹಾಗೂ ನಾದಶೃತಿ ಟ್ರಸ್ಟ್ ಬೋನ್ಹಾಳ ಏರ್ಪಡಿಸಿದ ವಿಶ್ವ ಬುಡಕಟ್ಟು ದಿನಾಚರಣೆ ಆಚರಿಸಲಾಯಿತು.
ಶಾಲೆಯ ಪ್ರಧಾನ ಗುರು ವಾಅಸುದೇವ ಅರಸಿಕೆರಿ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ,ಜಗತ್ತಿಗೆ ಬುಡಕಟ್ಟು ಜನಾಂಗದಿಂದಲೇ ಜಾನಪದ ಪ್ರಕಾರ ಪರಿಚಯವಾದದ್ದು ಬುಡಕಟ್ಟು ಜನಾಂಗದಲ್ಲಿ ವಿವಿಧ ಪ್ರಕಾರಗಳು ಪದ್ದತಿಗಳು ಮತ್ತು ಸಂಸ್ಕೃತಿಗಳು ಆಚಾರ ವಿಚಾರಗಳು ಇರುವುದನ್ನು ಗಮನಿಸಬಹುದು.ಪ್ರಕೃತಿಯ ನಾಡಿ ಮಿಡಿತವನ್ನು ಬಲ್ಲವರು ಬುಡಕಟು ಜನಾಂಗದವರು ಮಾತ್ರ .ಅವರಿಂದ ಪ್ರಾರಂಭವಾದ ಜಾನಪದ ತನ್ನ ಮಹತ್ವವನ್ನು ಕಂಡುಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಮಾತನಾಡಿ, ಪ್ರಕೃತಿಯನ್ನು ಆರಾಧಿಸುವ ಮತ್ತು ಪೂಜಿಸುವ ಬುಡಕಟ್ಟು ಜನರು ಸೂರ್ಯ,ಚಂದ್ರ,ಭೂಮಿ ಮತ್ತು ಕಾಡನ್ನು ಪೂಜಿಸುತ್ತಾರೆ. ಪರಿಸರವನ್ನು ಹೆಚ್ಚು ಪ್ರೀತಿಸಿದವರು. ಆದುದರಿಂದಲೇ ಅವರು ಇರುವ ಜಾಗದಲ್ಲಿ ಹೆಚ್ಚು ಹೆಚ್ಚು ಮಳೆಯಾಗಿ ಬೆಳೆ ಸರಿಯಾಗಿ ಬರುವುದು ಆ ಕಾರಣಕ್ಕಾಗಿ ವಿಶ್ವ ಬುಡಕಟ್ಟು ದಿನಾಚರಣೆಯನ್ನು ಆಚರಿಸುವ ಮೂಲಕ ಈಗಿನ ಪೀಳೆಗೆಗೆ ಸಮಿತಿ ಹಾಗೂ ಟ್ರಸ್ಟ್ ಪರಿಚಯಸುವ ಕೆಲಸ ಮಾಡಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಪ್ರಿಯಾಂಕ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ನಿಂಗಣ್ಣ ಕುಂಬಾರ ಮಾತನಾಡಿ,ನಾಗರೀಕತೆ ಹೆಸರಿನಲ್ಲಿ ಬುಡಕಟ್ಟುಗಳ ಕಲೆ ಸಂಸ್ಕೃತಿ ಹಾಗು ಆಯಾ ಸಮುದಾಯದ ಸಾಂಪ್ರಾದಾಯಿಕ ಕಲೆಯ ಜೊತೆ ಜನಜೀವನ ವ್ಯವಸ್ಥೆ ವಿನಾಶದತ್ತ ತಲುಪುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪರಸುರಾಮ ಬೋನ್ಹಾಳ ಸ್ವಾಗತಿಸಿದರು,ಹಂಪಯ್ಯ ಹಿರೇಮಠ ಬೋನ್ಹಾಳ ನಿರೂಪಿಸಿದರು ಸದ್ದಾಂಹುಷೇನ ವಂದಿಸಿದರು.