ಶಹಾಬಾದ: ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ ಮಡ್ಡಿ ಕಾರ್ಯಕ್ಷೇತ್ರದ ಅಡಿವಿರೇಶ್ವರ ಸ್ವಸಹಾಯ ಸಂಘದ ಸದಸ್ಯರಾದ ರತ್ನಮ್ಮ ರವರ ಆರೋಗ್ಯ ರಕ್ಷಾ ಕಾರ್ಯಕ್ರಮದಡಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಇಪ್ಪತ್ತು ಸಾವಿರದ ಮೊತ್ತದ ಚೆಕ್ಕನ್ನು ಯೋಜನಾಧಿಕಾರಿ ಕೃಷ್ಣಮೂರ್ತಿ ಫಲಾನುಭವಿಗೆ ವಿತರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೃಷ್ಣ ಮೂರ್ತಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಂಘದ ಸದಸ್ಯರಿಗೆ ಅರೋಗ್ಯ ಚಿಕಿತ್ಸೆಗೆ ನೆರವಾಗಲು ಆರೋಗ್ಯ ವಿಮಾ ಯೋಜನೆ ಜಾರಿಗೆ ತಂದಿದೆ. ಕಷ್ಟದ ಕಾಲದಲ್ಲಿ ನೆರವಾಗುವ ದೃಷ್ಟಿಯಿಂದ ಯೋಜನೆ ತಂದಿದೆ.
ನಮ್ಮ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾತ್ರ ಆರೋಗ್ಯ ರಕ್ಷಾ ವಿಮಾ ಯೋಜನೆ ಇದಾಗಿದೆ. 79 ವರ್ಷ ಮೀರದ ಸದಸ್ಯರಿಗೆ ಅನ್ವಯವಾಗುತ್ತದೆ. ಸದಸ್ಯರ ವಿಮಾ ಕಂತು ಒಂದು ವರ್ಷಕ್ಕೆ 272ರೂ. ಆಗಿದ್ದು, ಸಂಘ 125 ರೂ. ಶುಲ್ಕ ಭರಿಸಲಿದೆ.ಕ್ಷೇತ್ರದಿಂದ 20 ರೂ. ಫಲಾನುಭವಿ 127ರೂ. ಭರಿಸಬೇಕು. 20 ಸಾವಿರ ವರೆಗೆ ಮಾತ್ರ ಯೋಜನೆಯಲ್ಲಿ ಲಾಭ ದೊರೆಯುತ್ತದೆ.
ಈ ಯೋಜನೆಯಡಿ ಒಬ್ಬ ಸದಸ್ಯರಿಗೆ ಹಾಗೂ ಅವರ ಪತಿಗೆ ಮಾತ್ರ ಚಿಕಿತ್ಸೆಗೆ ಅವಕಾಶ ಇದೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಹೇಳಿದರು.
ಕಚೇರಿಯ ವ್ಯವಸ್ಥಾಪಕರು ಮಹೇಶ,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕು.ರೇಖಾ, ವಲಯ ಮೇಲ್ವಿಚಾರಕರಾದ ಫಕಿರೇಶ, ಜಯಶ್ರೀ, ಬಸಯ್ಯ, ಶಿವಕುಮಾರ, ಸುರೇಶ, ಮಲ್ಲಿಕಾರ್ಜುನ,ಸಂತೋಷ,ತಮ್ಮಣ್ಣ ಇತರರು ಇದ್ದರು.