ಕಾಮಗಾರಿ ತಡೆಗೆ ಶಾಸಕ ಬಿ.ಆರ್. ಸೂಚನೆ

0
33

ಆಳಂದ: ಕ್ಷೇತ್ರದಲ್ಲಿ ಐದು ವರ್ಷದ ಅವಧಿಯಲ್ಲಿ ರಸ್ತೆ, ಬ್ರಿಜ್ ಕಂ- ಬ್ಯಾರೇಜ್, ಜಲಜೀವನ್ ಮಿಷನ್ ಹಾಗೂ ಇನ್ನಿತರ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಸಾಕಷ್ಟು ಭ್ರμÁ್ಟಚಾರ ನಡೆದಿದೆ. ಈ ಕುರಿತು ಸಮಗ್ರ ತನಿಖೆ ನಡೆಯುವವರೆಗೂ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಬೇಕು ಎಂದು ಶಾಸಕ ಬಿ.ಆರ್ .ಪಾಟೀಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನ ಕಣಮುಸ ಹಾಗೂ ಹಿರೋಳ್ಳಿ ಗ್ರಾಮದ ವಿವಿಧ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಅವರು, ಅಧಿಕಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ರಿಜ್ ಕಂ-ಬಾರೇಜ್ ಕಾಮಗಾರಿಗೆ ಗುಣಮಟ್ಟದ ಸಾಮಗ್ರಿ ಉಪಯೋಗಿಸಿಲ್ಲ. ಅಧಿಕಾರಿಗಳು ಸ್ಥಳದಲ್ಲಿಯೇ ಕುಳಿತು ಮಂಜುರಾತಿ ಕೊಟ್ಟಿದ್ದಾರೆ. ಬೀಳಗಿ ರಾಜ್ಯ ಹೆದ್ದಾರಿ 124ರ ಸರಪಳಿ ಕಿ.ಮೀ 0 ದಿಂದ 71.15 ಕಿ.ಮೀ ವರೆಗೆ ಆಯ್ದು ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಹಿರೋಳ್ಳಿ- ಭೀಮಪುರ- ಕಾಮನಹಳ್ಳಿ, ನಿಂಗದಳ್ಳಿ- ಮಾದನಹಿಪ್ಪರಗಾ ರಸ್ತೆ ಕಾಮಗಾರಿಗಳಲ್ಲಿ ಅಳತೆ ಪುಸಕ್ತ ಪ್ರಕಾರ ಡಾಂಬರ್, ಮರುಮ್, ಸ್ಟೀಲ್ ರಾಡ್, ಸಿಮೆಂಟ್ ಬಳಿಸಿಲ್ಲ. ಹೀಗಾಗಿ ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಡಾಂಬರ್ ಕಿತ್ತು ಹೋಗಿದೆ. ಕೂಡಲೇ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಕಪ್ಪು ಪಟ್ಟಿಗೆ ಸೇರಿಸಿ ಎಂದು ತಾಕೀತು ಮಾಡಿದರು.

Contact Your\'s Advertisement; 9902492681

ಇತ್ತೀಚೆಗೆ ಕಳಪೆ ಕಾಮಗಾರಿ ಪ್ರಕರಣ ಹೆಚ್ಚಾಗುತ್ತಿವೆ. ತರಾತುರಿಯಲ್ಲಿ ಕೆಲಸ ಮಾಡಿ ಮುಗಿಸಬೇಕೆಂದು ಅಧಿಕಾರಿಗಳು ಗುಣಮಟ್ಟಕ್ಕೆ ಕೋಕ್ ನೀಡುತ್ತಿದ್ದಾರೆ. ಹಳೆಯ ರಸ್ತೆಯ ಧೂಳಿನಲ್ಲಿ ಅರ್ಧ ಇಂಚು ಡಾಂಬರ್ ಹಾಕುತ್ತಿದ್ದಾರೆ. ಇದನ್ನು ಕೈಯಿಂದ ಕಿತ್ತರೆ ಕೇಕ್‍ನಂತೆ ಬರುತ್ತಿದೆ. ಇಂತಹ ಕಳಪೆ ಮಟ್ಟದ ರಸ್ತೆ ಮಾಡುವ ಅವಶ್ಯಕತೆ ಏನಿತ್ತು ? ಎಂದು ಪ್ರಶ್ನಿಸಿದರು. ಜೆಇ ಬಸವರಾಜ, ಪ್ರಮುಖರಾದ ಕಾಶೀನಾಥ ವಾಗ್ದರ್ಗಿ, ಸಂಜು ಕುಮಾರ್, ದಯಾನಂದ ಮಣೂರೆ, ಕಾಶೀನಾಥ ಬಂಗರಗಿ, ಶರಣಬಸಪ್ಪ ನಿಂಗಶೆಟ್ಟಿ, ರಾಮಚಂದ್ರ ಲೋಹಾರ್, ಮಹಾದೇವ, ನಾಗೇಂದ್ರಪ್ಪ ಥಂಬೆ, ಸುನೀಲ್ ಪಾಟೀಲ್, ಗುರುಲಿಂಗಯ್ಯ ಥಂಬೆ ಇತರರಿದ್ದರು.

ಅಮರ್ಜಾ ಅಣೆಕಟ್ಟೆಗೆ ಭೇಟಿ: ಶಾಸಕ ಬಿ.ಆರ್. ಪಾಟೀಲ ಅವರು ಅಮರ್ಜಾ ಅಣೆಕಟ್ಟೆಗೆ ಭೇಟಿ ನೀಡಿ ಕುಡಿಯುವ ನೀರು ಪೂರೈಕೆಯ ಜಾಕವೇಲ್ ಪರಿಶೀಲಿಸಿದರು. ಪ್ರತಿನಿತ್ಯ ಪಟ್ಟಣದ ಜನತೆಗೆ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಾಜರಿದ್ದ ಮುಖ್ಯಾಧಿಕಾರಿ ಯಶೋಧಾ ಅವರನ್ನು ಸಲಹೆ ನೀಡಿದರು.

ಕಾಮಗಾರಿ ವರದಿ ನೀಡಿ: ಹಿಂದಿನ ಶಾಸಕರ ಅವಧಿಯಲ್ಲಿ ಕ್ವಾಲಿಟಿ ಕಂಟ್ರೋಲ್ ಅಧಿಕಾರಿಗಳ ಅನುಮತಿ ವರದಿ ಇಲ್ಲದೇ ಬಹುತೇಕ ಕಾಮಗಾರಿಗಳು ನಡೆದಿವೆ. ಅಧಿಕಾರಿಗಳು ಕೇವಲ ನಾಮಕವಾಸ್ತೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳನ್ನು ಕೂಡಲೇ ಪರಿಶೀಲಿಸಿ, ಸಮಗ್ರ ವರದಿ ಪ್ರಕಟಿಸಬೇಕು.
ಬಿ.ಆರ್.ಪಾಟೀಲ್ ಶಾಸಕರು ಆಳಂದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here