ಆಳಂದ : ‘ ಉತ್ಪಾದನಾ ಕಂಪನಿಗಳು ಸರ್ಕಾರಕ್ಕೆ ಕಳಪೆ ಬೀಜಗಳು ಪೂರೈಕೆ ಮಾಡುವ ಸಾಧ್ಯತೆ ಇದ್ದು,ರೈತರು ಇದರಿಂದ ಎಚ್ಚರಿಕೆ ಇಡುವಂತೆ ‘ ರೈತರಿಗೆ ಶಾಸಕ ಬಿ.ಆರ್.ಪಾಟೀಲ ಅವರು ಕರೆ ನೀಡಿದರು.
ಪಟ್ಟಣದ ಕಲಬುರಗಿ ರಸ್ತೆಯ ( ಆಡಳಿತ ಸೌಧ) ರೈತ ಸಂಪರ್ಕ ಕಚೇರಿಯ ಆವರಣದಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಸಾಂಕೇತಿಕ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಬಹುರಾಷ್ಟ್ರೀಯ ಕಂಪನಿಗಳ ಕುತಂತ್ರ ಆಡಗಿದೆ.ರೈತರು ಹಳೆಯ ಬೀತ್ತನೆ ಪದ್ದತಿ ಅಳವಡಿಸಿಕೊಳ್ಳಿ ಎಂದರು.
ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪುರ ಮಾತನಾಡಿದರು.ತಹಶಿಲ್ದಾರ ಪ್ರದೀಪಕುಮಾರ ಹಿರೇಮಠ , ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ, ಇಲಾಖೆಯ ಕುರಿತು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.
ಶಾಸಕರು ರೈತರಿಗೆ ಸಾಂಕೇತಿಕವಾಗಿ ಬೀಜ ವಿತರಿಸಲಾಯಿತು.ಇದೇ ವೇಳೆಯಲ್ಲಿ ಇಲಾಖೆ ಜಾಗೃತಿ ಬೀತ್ತಿಪತ್ರ ಬಿಡುಗಡೆ ಮಾಡಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ವೀಲಾಸರಾಜ್ ಪ್ರಸನ್ನ , ಕೃಷಿ ಇಲಾಖೆಯ ಅಧಿಕಾರಿಗಳು,ಯುವ ಮುಖಂಡ ಸಿದ್ದು ವೇದಶೇಟ್ಟಿ , ಮಹಾಂತೇಶ ಪಾಟೀಲ,ಶ್ರವಣಕುಮಾರ ಆಳಂಗೆ,ಸಿದ್ದು ಢಗೆ, ಸೇರಿದಂತೆ ತಾಲ್ಲೂಕಿನ ವಿವಿಧೆಡೆ ರೈತರು ಪಾಲ್ಗೊಂಡಿದ್ದರು.
ಸಂಜಯ ಕುಮಾರ ಸವದಿ ನಿರೂಪಿಸಿದರು. ವಂದನೆ ಸಾಕ್ಷಿ ಅಲಮದ ವಂದಿಸಿದರು.