ನವದೆಹಲಿ: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಯು.ಟಿ.ಖಾದರ್ ಅವರು, ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ನಿನ್ನೆ (ಜೂನ್ 8) ಸೌಹಾರ್ದತವಾಗಿ ಭೇಟಿ ಮಾಡಿ ಚರ್ಚಿಸಿದರು.
ಚರ್ಚೆಯ ಸಂದರ್ಭದಲ್ಲಿ ಲೋಕಸಭಾಧ್ಯಕ್ಷರು ಸದನಗಳಲ್ಲಿ ನಿಯಮಾವಳಿಗಳಂತೆ ಚರ್ಚೆಗೆ ಅವಕಾಶ ನೀಡಿ,ಧರಣಿ ಮತ್ತು ಗದ್ದಲಗಳಿಗೆ ಮುಕ್ತಿ ಕೊಟ್ಟು ಕಾರ್ಯಕಲಾಪಗಳು ಸುಗಮವಾಗಿ Peಡಿಜಿeಛಿಣಟಥಿ ಪರಂಪರೆಯನ್ನು ಬೆಳೆಸೋಣ ಎಂಬ ಸಲಹೆಯನ್ನು ನೀಡಿದರು.
ಚರ್ಚೆಯು ಅತ್ಯಂತ ಸೌಹಾರ್ದಯುತವಾಗಿತ್ತು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.