ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಉಗ್ರರು ನುಸುಳಿದ್ದಾರೆಂಬ ಗುಪ್ತಚರ ದಳದ ಮಾಹಿತಿ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲ ಪ್ರಮುಖ ಸ್ಥಳಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ಅದೇ ರೀತಿ ಜಿಲ್ಲೆಯಲ್ಲಿಯೂ ಸಹ ವ್ಯಾಪಕ ಬಿಗಿ ಭದ್ರತೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಲಾಗಿದೆ.
ಶನಿವಾರ ಬೆಳಿಗ್ಗೆ ಬಾಂಬ್ ನಿಷ್ಕ್ರೀಯದಳ ಮತ್ತು ಶ್ವಾನದಳದೊಂದಿಗೆ ಪೋಲಿಸರು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ ಎಲ್ಲ ರೀತಿಯ ತಪಾಸಣೆಗಳನ್ನು ಕೈಗೊಂಡರು.
ಬಸ್ ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರ ಗಂಟು, ಮೂಟೆಗಳನ್ನು ಶ್ವಾನದ ಮೂಲಕ ಪರೀಕ್ಷಿಸಲಾಯಿತು. ಅದೇ ರೀತಿ ಬಸ್‌ಗಳಲ್ಲಿಯೂ ಸಹ ಪೋಲಿಸರು ತಪಾಸಣೆ ನಡೆಸಿದರು.
ಈಗಾಗಲೇ ವರದಿಯಾಗಿರುವಂತೆ ಯಾವುದೇ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವುದು ಕಂಡು ಬಂದರೆ 1000 ನಂಬರ್‌ಗೆ ಕರೆ ಮಾಡಿ ಮಾಹಿತಿ ಸಲ್ಲಿಸಲು ಕೋರಲಾಗಿದೆ.