ನಾಳೆ ಇರಬೇಕು ಇಂಥವರು’ ವಿಶೇಷ ಸರಣಿ ಉಪನ್ಯಾಸ

0
43

ಕಮಲಾಪುರ: ಕಮಲಾಪೂರ ತಾಲೂಕು ಕಸಾಪ ಘಟಕದ ವತಿಯಿಂದ ‘ಇರವೇಕು ಇಂಥವರು ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದರು.

‌ಶುಕ್ರವಾರ ಕಮಲಾಪುರ ಕಸಾಪ ಕಛೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಮೂಲಕ ತಾಲೂಕಿನ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು, ಧಾರ್ಮಿಕ ಮತ್ತು ಶೈಕ್ಷಣಿಕ , ರೈತ, ಕಾರ್ಮಿಕ ಪರ ಹೋರಾಟಗಾರರು ಮತ್ತಿತರ ಕ್ಷೇತ್ರದಲ್ಲಿ ಸಾಧನೆಗೈದ ಮಹನಿಯರ ನಿಶ್ವಾರ್ಥ ಸೇವೆ ಮತ್ತು ಸಾಮಾಜಿಕ ಕಳಕಳಿಯನ್ನು ತಿಳಿಸುವುದರೊಂದಿಗೆ ಯುವ ಪೀಳಿಗೆಯಲ್ಲಿ ಹೋರಾಟ, ನಿಶ್ವಾರ್ಥ ಸೇವಾ ಮನೋಭಾವ, ಸಂಘಟನೆಯ ಮಹತ್ವವನ್ನು ಯುವ ಪೀಳಿಗೆಯಲ್ಲಿ ಬಿತ್ತುವ ಸದುದ್ದೇಶದಿಂದ ‌ಸರಣಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಮಲಾಪುರ ಕಸಾಪ ತಾಲೂಕು ಘಟಕದ ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದ್ದಾರೆ.

Contact Your\'s Advertisement; 9902492681

ಸ್ವಾತಂತ್ರ್ಯ ಹೋರಾಟಗಾರರಾದ ಶಂಕರಶೆಟ್ಟಿ ಪಾಟೀಲ್ ಕಮಲಾಪುರ, ಚಂದ್ರಶೇಖರ ಪಾಟೀಲ ಮಹಾಗಾಂವ, ಅಪ್ಪಾರಾವ ಪಾಟೀಲ ಮಹಾಗಾಂವ, ಮಹಾಗಾಂವ ಕವಿ ಗುರುಲಿಂಗಸಿದ್ದ ತಡಕಲ್, ಮಹಾಗಾಂವ ಕಳ್ಳಿಮಠದ ಲಿಂ.ಶ್ರೀ ಗುರುಲಿಂಗ ಶಿವಾಚಾರ್ಯ ರು, ಸೊಂತ/ ಕಲಮೂಡ ದತ್ತ ದಿಗಂಬರ ಮಾಣಿಕೇಶ್ವರರು, ಕಾಮ್ರೇಡ್ ಮಾರುತುತಿ ಮಾನ್ಪಡೆ ಹೀಗೆ ತಾಲೂಕಿನ ವ್ಯಾಪ್ತಿಯಲ್ಲಿ ಸಮಾಜ ಸೇವೆ ಮಾಡಿ ನಮ್ಮನ್ನಗಲಿದ ಮತ್ತಿತರ ಮಹನಿಯರ ವಿಚಾರಗಳನ್ನು, ತತ್ವಾದರ್ಶಗಳನ್ನು ಯುವ ಸಮುದಾಯಕ್ಕೆ ತಿಳಿಸುವ ಸದುದ್ದೇಶ ಹೊಂದಿದ್ದೇವೆ ಎಂದರು.

ಸರಣಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ದಿನಾಂಕ 11-06-2023 ರಂದು ಲೇಂಗಟಿ ಗ್ರಾಮದಲ್ಲಿ ಸಂಜೆ ೭; ೩೦ ಗಂಟೆಗೆ ರೈತ, ಕಾರ್ಮಿಕ ಪರ ಹೋರಾಟಗಾರರಾದ ಹೋರಾಟ ರತ್ನ ಎಂದೇ ಖ್ಯಾತರಾಗಿದ್ದ ಕಾಮ್ರೇಡ್ ಮಾರುತಿ ಮನ್ಪಡೆ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮವನ್ನು ಮಾನ್ಪಡೆ ಅವರ ಪುತ್ರ ಯುವ ಹೋರಾಟಗಾರ ಸುನೀಲ‌ ಮಾನ್ಪಡೆ ಉದ್ಘಾಟಿಸಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಆಶಯ ನುಡಿಗಳನ್ನು ಆಡಲಿದ್ದು, ಮುಗಳಿ ಗ್ರಾಪಂ ಅಧ್ಯಕ್ಷ ರಾಜಕುಮಾರ ಪೂಜಾರಿ ಅಧ್ಯಕ್ಷತೆ‌ ವಹಿಸಲಿದ್ದಾರೆ, ನಿವೃತ್ತ ಶಿಕ್ಷಕ ಜಯರಾಂ, ಮಡಕಿ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಠಾಳೆ, ಕಾಂಗ್ರೆಸ್ ಮುಖಂಡ ಬಂಡಪ್ಪ ಲೇಂಗಟಿ, ಬಿಜೆಪಿ ಮುಖಂಡ ಸತೀಶ ಪೂಜಾರಿ, ಪ್ರಮುಖರಾದ ಬಸವರಾಜ ಸರಡಗಿ ಅಂಬಲಗಾ, ರೇವಣಸಿದ್ದ ಕಲಬುರಗಿ,ಸೋಮಶೇಖರ ಸಿಂಗೆ, ಶಿಕ್ಷಕಿ ತಂಗೆಮ್ಮ ಲಾಡಂತಿ,ಬಂಡಪ್ಪ ಚಿಲಿ,ಗುಂಡಪ್ಪ ಕೊಳ್ಳುರೆ, ಅತಿಥಿಗಳಾಗಿ ಆಗಮಿಸಲಿದ್ದಾರೆ.

ತಾಲೂಕು ಘಟಕದ ಪದಾಧಿಕಾರಿಗಳಾದ ರವಿಂದ್ರ ಬಿಕೆ, ಪ್ರಶಾಂತ ಮಾನಕರ, ನಾಗಣ್ಣ ವಿಶ್ವಕರ್ಮ, ಮಲ್ಲಿನಾಥ ಅಂಬಲಗಿ, ಸಂಜಯಕುಮಾರ ನಾಟಿಕಾರ, ಆನಂದ ವಾರಿಕ, ಚೇತನ, ಫಯಾಜ ಇತರರು ಭಾಗವಹಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here