ಪ್ರಾದೇಶಿಕ ಆಯುಕ್ತರ ಆದೇಶ ಉಲ್ಲಂಘನೆ: ಆರೋಪ

0
15

ಆಳಂದ: ಜನ, ಜಾನುವಾರು ಅನುಕೂಲಕ್ಕಾಗಿ ಅಮರ್ಜಾ ಬಲದಂಡೆ ಕಾಲವೆಗೆ ನೀರು ಹರಿಸುವಂತೆ ಅಮರ್ಜಾ ಅಣೆಕಟ್ಟೆ ಪ್ರದೇಶದ ದೆವಂತಗಿ ಮತ್ತು ಜಾವಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.

ಗ್ರಾಮಸ್ಥರ ಈ ಮನವಿಗೆ ಪುರಸ್ಕರಿಸಿದ ಜಿಲ್ಲಾಧಿಕಾರಿಗಳು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳನ್ನು ಆದೇಶಿಸಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ಕೋರಿಕೆ ಸಲ್ಲಿಸಿ ನೀರು ಹರಿಸುವುದು ಸೂಕ್ತವೆಂದು ಕೋರಿದ್ದರು.

Contact Your\'s Advertisement; 9902492681

ಈ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತರು, ದೇವಂತಗಿ ಮತ್ತು ಜಾವಳಿ ಗ್ರಾಮಗಳ ವ್ಯಾಪ್ತಿಯ ಅಗತ್ಯಕನುಗುಣವಾಗಿ ಬಲದಂಡೆ ಕಾಲುವೆಗೆ ನೀರು ಹರಿಸಿ ಅನುಕೂಲ ಮಾಡಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಅಮರ್ಜಾ ಅಣೆಕಟ್ಟೆಯ ಅಧಿಕಾರಿಗಳಿಗೆ ಕಳೆದ ಮೇ 17ರಂದು ಆದೇಶ ನೀಡಿದ್ದರು.

ಆದರೆ ಇದುವರೆಗೂ ಅಣೆಕಟ್ಟೆ ಅಧಿಕಾರಿಗಳು ನೀರು ಹರಿಸದೆ ಇರುವುದು ಜನ-ಜಾನುವಾರುಗಳಿಗೆ ತೊಂದರೆ ಪಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಧೀಕ್ಷಕ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಇವರು ಸಹ ಅಮರ್ಜಾ ಡ್ಯಾಮ್‍ನಿಂದ ಕಾಲುವೆ ಮುಖಾಂತರ ಆಳಂದ ತಾಲೂಕಿನ ದ್ಯಾವಂತಗಿ ಮತ್ತು ಜವಳಿ ಗ್ರಾಮಗಳ ಜನ ಜಾನುವರುಗಳಿಗೆ ಕುಡಿಯಲು 0,100 ಟಿ.ಎಂ.ಸಿ ನೀರು ಸದರಿ ಗ್ರಾಮಗಳಿಗೆ ಕಾಲುವೆ ಮುಖಾಂತರ ಹರಿಸಲು ಆದೇಶಿಸಬೇಕೆಂದು ವಿನಂತಿಸಿಕೊಂಡಿರುತ್ತಾರೆ.

ಈ ಎರಡು ಪತ್ರಗಳ ಮುಲಕ ಕೋರಿರುವುದನ್ನು ಪರಿಶೀಲಿಸಲಾಗಿ ಪ್ರಾದೇಶಿಕ ಆಯುಕ್ತರು ತಾಲೂಕಿನ ಅಮರ್ಜಾ ಅಣೆಕಟ್ಟೆ ಹಳ್ಳಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವವನ್ನು ನಿವಾರಿಸುವುದು ಅವಶ್ಯವಿರುವುದೆಂದು ಕಂಡುಬಂದಿರುವುದರಿಂದ 0.100 ಟಿ.ಎಮ್.ಸಿ ನೀರನ್ನು ಅಮರ್ಜಾ ಡ್ಯಾಮ್ ಬಲದಂಡೆ ಕಾಲುವೆ ಮುಖಾಂತರ ಬಿಡುಗಡೆ ಕ್ರಮ ಕೈಗೊಳ್ಳುವಂತೆ ಕಳೆದ ಮೇ 17ರಂದು ಪ್ರಾದೇಶಿಕ ಆಯುಕ್ತರು ಸಾರ್ವಜನಿಕರ ಹಿತದೃಷ್ಟಿಯಿಂದ ದ್ಯಾವಂತಗಿ ಮತ್ತು ಜವಳಿ ಗ್ರಾಮಗಳ ಜನ/ಜಾನುವರುಗಳಿಗೆ ಕುಡಿಯಲು 0.100 ಟಿ.ಎಂ.ಸಿ ನೀರು ಅಮರ್ಜಾ ಡ್ಯಾಮ್ ಬಲದಂಡೆ ಕಾಲುವೆ ಮುಖಾಂತರ ನೀರನ್ನು ಅವಶ್ಯಕತೆಗನುಗುಣವಾಗಿ ಹಂತ ಹಂತವಾಗಿ ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. ಆಹೀಗಿರುವಾಗ ದೇವಂತಗಿ ಮತ್ತು ಜಾವಳಿ ಡಿ. ಗ್ರಾಮದಿಂದ ಹಾದಿರಿರುವ ಕಾಲುವೆಗೆ ನೀರು ಹರಿದಿಲ್ಲ. ಇದರಿಂದ ಜನ ಜಾನುವಾರು ಪರದಾಡುವಂತಾಗಿದೆ ಎಂದು ದೇವಂತಗಿ ಗ್ರಾಮದ ಹಿರಿಯ ಮಹಾಂತಪ್ಪ ನಿಂಬಿತೋಟ ಮತ್ತು ಮಾಂತಪ್ಪ ನಿಂಬಿ ತೋಟ ಹನುಮಂತ್ ಎನ್ ಪ್ಯಾಟಿ ದೇವಂತಿ ಹೇಳಿಕೊಂಡಿದ್ದಾರೆ.

ಕುಡಿಯುವ ನೀರಿನ ಅಭಾವ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಅಭಾವ ನಿವಾರಿಸಲು ಕೂಡಲೇ 100 ಟಿಎಂಸಿ ನೀರನ್ನು ಅಮರ್ಜಾ ಆಣೆಕಟ್ಟೆಯ ಬಲದಂಡೆ ಕಾಲುವೆಯಿಂದ ಬಿಡುಗಡೆ ಮಾಡಬೇಕು ಎಂದು ಗ್ರಾಮದ ಹಿರಿಯ ರೈತ ಮಹಾಂತಪ್ಪ ನಿಂಬಿತೋಟ್ ಹಾಗೂ ಹಣಮಂತ್ ಎನ್. ಪ್ಯಾಟಿ ದೇವಂತಿ ಅವರು ಅಮರ್ಜಾ ಅಣೆಕಟ್ಟೆ ಅಧಿಕಾರಿಗಳಿಗೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ಈ ಕುರಿತು ಕಲಬುರ್ಗಿಯ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ತಾಲ್ಲೂಕಿನ ದ್ಯಾವಂತರಿ, ಜವಳಿ ಗ್ರಾಮಗಳಲ್ಲಿ ನೀರಿನ ಕೊರತೆ ಇದ್ದು, ಜನ ಹಾಗೂ ಜಾನುವಾರುಗಳಿಗೆ ತುಂಬಾ ಸಮಸ್ಯೆಯಾಗಿದೆ. ಕುಡಿಯುವ ನೀರಿಗೂ ಸಹ ಪರದಾಡುವಂತಾಗಿದೆ. ಆದ್ದರಿಂದ ಅಮರ್ಜಾ ಬಲದಂಡೆ ಕಾಲುವೆಯಿಂದ ನೀರು ಹರಿಸುವ ಮೂಲಕ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.

ನೀರಿನ ಸಮಸ್ಯೆಯ ನಿವಾರಣೆಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳೂ ಸಹ ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರರಿಗೆ ಅಮರ್ಜಾ ಯೋಜನೆಯ ಆಣೆಕಟ್ಟೆಯಿಂದ ಕಾಲುವೆ ಮುಖಾಂತರ 100 ಟಿಎಂಸಿ ನೀರು ಹರಿಸಲು ಕೋರಿದ್ದಾರೆ. ಹಾಗಾಗಿ ಕೂಡಲೇ ದ್ಯಾವಂತಗಿ ಮತ್ತು ಜವಳಿ ಗ್ರಾಮಗಳ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕಾಲುವೆ ಮುಖಾಂತರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here