ಜೂನ್ 13 ರಂದು ಕ್ಯಾಂಪಸ್ ಸಂದರ್ಶನ

0
16

ಕಲಬುರಗಿ; ಬೆಂಗಳೂರಿನ ಜಿಗಣಿ ಟೋಯೋಟೊ ಇಂಡಸ್ಟ್ರೀಸ್ ಇಂಜೀನ್ ಇಂಡಿಯಾ ಪ್ರೈ.ಲಿ. ವತಿಯಿಂದ ಇದೇ ಜೂನ್ 13 ರಂದು ಬೆಳಿಗ್ಗೆ 9 ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ರಸ್ತೆಯಲ್ಲಿರುವ ಸರ್ಕಾರಿ (ಪುರುಷ) ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಐ.ಟಿ.ಐ. ವೃತ್ತಿಯಲ್ಲಿ ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಂ.ಎಂ.ವ್ಹಿ, ಎಂ.ಡಿ. ಪಾಸಾದ 18 ರಿಂದ 23 ವರ್ಷ ವರ್ಷದೊಳಗಿನ 2021, 2022 ಸಾಲಿನಲ್ಲಿ ಪಾಸಾದ ಮತ್ತು 2023 ರಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಐಟಿಐ ಅಂಕಪಟ್ಟಿ, ಎರಡು ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳೊಂದಿಗೆ ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಯಲ್ಲಿ ಮೇಲ್ಕಂಡ ದಿನದಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.

Contact Your\'s Advertisement; 9902492681

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸೂಚನಾ ಫಲಕವನ್ನು ಹಾಗೂ ಕಚೇರಿ ಮೊಬೈಲ್ ಸಂಖ್ಯೆ 7259272146 ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here