ಕಲಬುರಗಿ: ಪ್ರತಿಯೊಬ್ಬ ನಾಗರಿಕ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿ ಅಗುತ್ತದೆ ಜನರಲ್ಲಿ ರಕ್ತ ದಾನಿಗಳ ಮಹತ್ವವನ್ನು ಅರಿವು ಮೂಡಿಸುವುದು ಮುಖ್ಯ ಉದ್ದೇಶ ದಾನದಲ್ಲಿ ಶ್ರೇಷ್ಠ ದಾನ ರಕ್ತದಾನ ಮಹಾದಾನ. ನಾಲ್ಕು ಜನರಿಗೆ ರಕ್ತದ ಕೊರತೆ ನೀಗಿಸಲು ಆರೋಗ್ಯವಂತರು ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ವಿಭಾಗಿಯ ಜಂಟಿ ಕಾರ್ಯಾಲಯದ ಉಪನಿರ್ದೇಶಕ ಡಾ. ಶರಣಬಸಪ್ಪ ಗಣಜಲಖೇಡ ಹೇಳಿದರು.
ಬುಧುವಾರದಂದು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕರ್ನಾಟಕ ರಾಜ್ಯ ಏಡ್ ಪ್ರವೆನಷನ್, ಸೊಸೈಟಿ,ಬೆಂಗಳೂರು, ಜಿಲ್ಲಾ ಏಡ್ಸ ನಿಯಂತ್ರಣ ಮತ್ತು ತಡೆಗಟಗಟ್ಟುವ ಘಟಕ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ರೆಡ್ ರಿಬ್ಬನ ಕ್ಲಬಗಳು, ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್.ಘಟಕ, ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಾಥಾ ಚಾಲನೆ ನೀಡಿ ಮಾತನಾಡಿದರು.
ಇತ್ತಿಚೆಗೆ ಓಡಿಸಾ ರೈಲು ದುರಂತ ಸಂಧರ್ಭದಲ್ಲಿ ಸಾವು ನೋವುಗಳಲ್ಲಿ ಬದಕುಳಿದ ಜನರಿಗೆ ಎಷ್ಟು ಯುವಕರು ಮುಂದೆ ಸದರಿ ಸಾಲಿನಲ್ಲಿ ನಿಂತು ರಕ್ತದಾನ ಮಾಡಿದವರಗೆ ಕೃತಜ್ಞತೆ ಸಲ್ಲಿದರು. ಜನರು ರತ್ತದಾನ ಮಾಡುವುದರಿಂದ ಯಾವುದೇ ಹಾನಿ ಇಲ್ಲ ಯುವ ಜನರು ಹೆಚ್ಚಿನ ರೀತಿಯಲ್ಲಿ ರತ್ತದಾನ ಮಾಡಬೇಕೆಂದು ಕರೆ ಕೊಟ್ಟರು.
ಜಿಲ್ಲಾ ಸರ್ಕಾರಿ ಆಸ್ಪತ್ರೆ ಜಿಮ್ಸ್ ಆವರಣದಿಂದ ಜಗತ್ ಸರ್ಕಲ್ ಮಾರ್ಗ ವಾಗಿ ಅನ್ನಪೂರ್ಣ ಕ್ರಾಸ್ ನಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ. ಆವರಣದಲ್ಲಿ ಕೊನೆ ಗೊಂಡಿತು . ಪ್ರಮುಖರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜಶೇಖರ ಮಾಲಿ. ಜಿಲ್ಲಾ ಶಾಸ್ತ್ರಜ್ಞರು ಹಾಗೂ ಅಧಿಕ್ಷಕರು, ಜಿಲ್ಲಾ ಆಸ್ಪತ್ರೆ ಕಲಬುರಗಿ ಡಾ|| ಎ.ಎಸ್. ರುದ್ರವಾಡಿ . ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಡಾ || ಚಂದ್ರಕಾಂತ ನರಬೋಳಿ. ಡಿ ಎಲ್ ಓ ಡಾ|| ರಾಜಕುಮಾರ ಕುಲಕರ್ಣಿ, ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿ ಡಾ|| ವಿವೇಕಾನಂದ ರಡ್ಡಿ, ಡಾ|| ಜಗದೀಶ ಕಟ್ಟಿ ಮನಿ ಎ ಆರ್ ಟಿ ವೈದ್ಯಾಧಿಕಾರಿ ಡಾ || ರೇಣುಕ ಪ್ರಸಾದ . ಜಿಲ್ಲಾ ಡಿ ಆರ್ ಟಿಬಿ ಟೀಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ , ಜಿಲ್ಲಾ ಪಿಪಿಎಂ ಸಂಯೋಜಕ ಶಶಿಧರ ಕಮಲಪುರ, ಜಿಮ್ಸ್ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ ನಸಿರ್ಂಗ್ ವಿಧ್ಯಾರ್ಥಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಅನೇಕರು ಭಾಗವಹಿಸಿ ಯಶಸ್ವಿಗೊಳಿಸಿದ್ದರು.
ಘೋಷಣೆ : ರಕ್ತ ನೀಡಿ , ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ಹೆಚ್ಚಾಗಿ ಹಂಚಿಕೊಳ್ಳಿ. ನಂತರ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ಮತ್ತು ಸ್ನಾತಕೋತ್ತರ ಕೇಂದ್ರ ಸಭಾಂಗಣದಲ್ಲಿ ಹಾಗೆ ಅತಿ ಹೆಚ್ಚು ರಕ್ತದಾನ ( ರತ್ತದಾನ / ಪ್ಲಾಸ್ಮ ದಾನ ) ಮಾಡಿದವರು ಡಾ|| ವಿವೇಕಾನಂದ ರೆಡ್ಡಿ ಡಾ|| ಸಿದ್ದು ಮೊಳ ಕೆ ಆರ್ ಪಳ್ಳಿ . ಸುದೇವ್ ಸಿಂಗ್ ಡಾ|| ವಿಜಯ ಶ್ರೀ ಮಠದ್ ಗುರುದತ್ತ ರೆಡ್ಡಿ ಪ್ರಶಂಸನೀಯ ಪತ್ರ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪ್ರಮುಖರಾದ ಪ್ರಾದೇಶಿಕ ನಿರ್ದೇಶಕರು ವಿ.ಟಿ.ಯು. ಸ್ನಾತಕೋತ್ತರ ಕೇಂದ್ರದ ಡಾ|| ಬಸವರಾಜ ಗಾದಗೆ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಡಾ|| ಚಂದ್ರಕಾಂತ ನರಬೋಳಿ , ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಪ್ಪಾರಾವ ಅಕ್ಕೋಣಿ. ಉಪ ಸಭಾಪತಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅರುಣಕುಮಾರ ಲೋಯಾ. ಭಾಗ್ಯಲಕ್ಷ್ಮೀ . ರಕ್ತನಿಧಿ ಕೇಂದ್ರ ಸರ್ಕಾರಿ ಜಿಮ್ಸ್ ಆಸ್ಪತ್ರೆಯ ಡಾ|| ಮಮತಾ ಪಾಟೀಲ. ಗೌರವ ಕಾರ್ಯದರ್ಶಿಗಳು ಭಾ.ರೆ.ಸಂಸ್ಥೆಯ ರವೀಂದ್ರ ಶಾಬಾದಿ . ಕಾರ್ಯಕ್ರಮ ಅಧಿಕಾರಿಗಳು ವಾಯ್.ಆರ್ ಸಿ.ವಿ.ಟಿ.ಯು. ಡಾ|| ಶರಣಗೌಡ ಬಿರಾದಾರ . ಉಪಸ್ಥಿತರಿದ್ದರು.