ಶಹಾಬಾದ: ಜಗತ್ತಿನಲ್ಲಿ ಸಾವಿರಾರು ವೃತ್ತಿಗಳಿದ್ದರೂ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದದ್ದು ಎಂದು ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ರಾವೂರ ಗ್ರಾಮದಲ್ಲಿ ಶ್ರೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶ್ರೀಮತಿ ಬಸಮ್ಮ.ಸಿ.ಹಾವೇರಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಇವತ್ತಿನ ದಿನಮಾನಗಳಲ್ಲಿ ಶಿಕ್ಷಕರಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಕ್ಷಮತೆ ಕಡಿಮೆಯಾಗುತ್ತಿದೆ. ಆದ್ದರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮಡಯಾಗುತ್ತಿವೆ. ಪಠ್ಯವನ್ನು ಹೊರತು ಪಡಿಸಿಯೂ ಮಕ್ಕಳಿಗೆ ಜ್ಞಾನವನ್ನು ನೀಡಬೇಕು. ಶಿಕ್ಷಕ ಕೇವಲ ಶಿಕ್ಷಕನಾಗದೇ ಸ್ನೇಹಿತನಾಗಿ, ಪಾಲಕನಾಗಿ,ಹಿತೈಷಿಯಾಗಿ ಕೆಲಸ ಮಾಡಿದಾಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ.ಅಂತಹ ಉತ್ತಮ ಶಿಕ್ಷಕಿಯಾಗಿದ್ದ ಬಸಮ್ಮ ಅವರು ನಿವೃತ್ತಿಯಾಗಿದ್ದು ಸಂಸ್ಥೆಗೆ ನಷ್ಟ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಬಸವರಾಜ ಬಳೂಂಡಗಿ ಮಾತನಾಡಿ ಕೂಡುವುದು ಆಕಸ್ಮಿಕ ಅಗಲುವುದು ಅನಿವಾರ್ಯ ಸರಕಾರಿ ನಿಯಮದಂತೆ ನಿವೃತ್ತಿ ಆಗಲೇಬೇಕು. ಮೂವತ್ತೇಳು ವರ್ಷಗಳ ಸುದೀರ್ಘ ಸೇವೆ ಸಲ್ಲಿಸುವುದು ಸಾಧನೆಯೇ ಸರಿ. ಮಕ್ಕಳ ಪ್ರೀತಿ ಪಾತ್ರರಾಗಿ ಎಲ್ಲರ ಹೃದಯವನ್ನು ಗೆದ್ದಿದ್ದ ಶಿಕ್ಷಕಿಯರು ನಿವೃತ್ತರಾದಾಗ ಆಘಾತವಾಗುವುದು ಸಾಮಾನ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಅಬ್ದುಲ್ ಸಲೀಂ ಪ್ಯಾರೇ, ಮುಖ್ಯಗುರು ಚನ್ನಬಸಪ್ಪ ಬಂಡೇರ, ಬಸಮ್ಮ ಹಾವೇರಿ ಅವರು ಮಾತನಾಡಿದರು.
ವೇದಿಕೆಯ ಮೇಲೆ ಸಂಸ್ಥೆ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸದಸ್ಯರಾದ ಲಿಂಗಾರಾಡ್ಡಿ ಬಾಸರೆಡ್ಡಿ, ಅಣ್ಣಾರಾವ ಬಾಳಿ, ಸಿಆರ್ ಪಿ ಕವಿತಾ ಸಾಳೂಂಕೆ, ಈಶ್ವರ ಬಾಳಿ ಇದ್ದರು.
ಕಾರ್ಯಕ್ರಮದಲ್ಲಿ ಭೀಮರೆಡ್ಡಿ ಕುರಾಳ, ಅಶೋಕ ನಿಪ್ಪಾಣಿ, ಡಾ.ಜಗನ್ನಾಥ ಗಡ್ಡದ, ಡಾ. ವಿರೇಶ ಎಣ್ಣಿ, ಚಂದ್ರಶೇಖರ ಹಾವೇರಿ, ಬಸವರಾಜ ಕೆರಳ್ಳಿ, ಸಿದ್ಧಣ್ಣ ಕಲಶೆಟ್ಟಿ, ಭೀಮಶಾ ಜಿರೋಳ್ಳಿ, ಸಿದ್ರಾಮಪ್ಪ ದೇಸಾಯಿ, ದೇವಿಂದ್ರ ತಳವಾರ, ಚೆನ್ನಪ್ಪ ಅಳ್ಳೋಳ್ಳಿ, ಬಸವರಾಜ ಸೂಲಹಳ್ಳಿ, ಜಗದೀಶ ದೇಸಾಯಿ, ಶಿವಲಿಂಗ ಯಳಮೇಲಿ ಸೇರಿದಂತೆ ಅವರ ಕುಟುಂಬದ ಸದಸ್ಯರು, ಗ್ರಾಮದ ಮುಖಂಡರು, ಅವರ ಶಿಷ್ಯ ಬಳಗ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಕ್ಷಕ ಸಿದ್ಧಲಿಂಗ ಬಾಳಿ ನಿರೂಪಿಸಿ ವಂದಿಸಿದರು. ಮಂಜುಳಾ ಪಾಟೀಲ ಪ್ರಾರ್ಥಿಸಿದರು.