ಗಾನಯೋಗಿ ಪಂಚಾಕ್ಷರಿ ಪಂಡೀತ ಪುಟ್ಟರಾಜ ಕವಿ ಗವಾಯಿಗಳ ಸ್ಮರಣೋತ್ಸವ

0
7

ಸುರಪುರ:ನಗರದ ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಸ್ಮರಣೋತ್ಸವ ಹಾಗೂ ಸಿದ್ದಾರೂಡ ನಾಗರಹಳ್ಳಿ ಸಂಪಾದಿತ ಗಾನ ವಚನ ವೈಭವ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ ಮಾತನಾಡಿ, ವಿಶ್ವ ಸಂಗೀತ ಲೋಕಕ್ಕೆ ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ್ ಪುಟ್ಟರಾಜ ಗವಾಯಿಗಳ ಕೋಡುಗೆ ಅಪಾರವಾಗಿದೆ,ಗದುಗಿನ ಉಭಯ ಗಾಯನಾಚಾರ್ಯಾರು ದೃಷ್ಟಿಹಿನರಾಗಿದ್ದು, ಈ ನಾಡಿನೊಳಗಡೆ ಅನೇಕ ಜನ ದೃಷ್ಟಿ ಉಳ್ಳವರ ಬಾಳು ಮತ್ತು ಬದುಕಿಗೆ ಬೆಳಾಗಿರುವದು ಮಹತ್ವದ ಕಾರ್ಯಾ ಎಂದರು.

Contact Your\'s Advertisement; 9902492681

ತ್ರಿಭಾಷಾ ಕವಿಗಳು ಎಲ್ಲಾ ಬಗೆಯ ಸಂಗಿತದ ವಾದ್ಯಗಳನ್ನು ಬಲ್ಲವರಾಗಿದ್ದ ಗದುಗಿನ ಗಾನಯೋಜಿ ಶಿವಯೋಗಿ ಪುಟ್ಟರಾಜ ಗವಾಯಿಗಳು ಈ ನಾಡಿಗೆ ನೀಡಿದ ಕೋಡುಗೆ ಅತ್ಯಂತ ಮಹತ್ವ ಮತ್ತು ಮಹತ್ತರವಾಗಿದೆ ಎಂದು ಹೇಳಿದರು ಹಾಗೂ ಸಿದ್ದಾರೂಡ ನಾಗರಳ್ಳಿರವರ ಗಾನ ವಚನ ವೈಭವ ಕೃತಿ ಗದುಗಿನ ಸಂಗೀತ ಗುರುಗಳಿಗೆ ಸಮರ್ಪಿತವಾಗಿದೆ ಎಂದರು.

ಕಾರ್ಯಕ್ರಮವನ್ನು ಸಾಹಿತಿ ಶಾಂತಪ್ಪ ಬೂದಿಹಾಳ ಉದ್ಘಾಟಿಸಿ ಪುಸ್ತಕ ಬಿಡುಗಡೆ ಮಾಡಿದರು. ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪಂಚಾಕ್ಷರಿ ಗುರುಗಳು ಸಾನಿಧ್ಯವಹಿಸಿದ್ದರು, ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸಂಸ್ಕೃತ ಪಂಡಿತ ಜನಾರ್ಧನ ಪಾಣಿಭಾತೆ, ಶಿವಶರಣಪ್ಪ ಹೇಡಿಗಿನಾಳ, ಸಿದ್ದಾರೂಡ ನಾಗರÀಳ್ಳಿ, ಮನೋಹರ ಹುಣಿಸ್ಯಾಳ, ಶ್ರೀಕಾಂತ ರತ್ತಾಳ ವೇದಿಕೆಮೇಲಿದ್ದರು. ಕಾರ್ಯಕ್ರಮವನ್ನು ಶೃತಿ ಹಿರೇಮಠ ನಿರೂಪಿಸಿದರು, ಪ್ರವೀಣ ಜಕಾತಿ ಸ್ವಾಗತಿಸಿದರು, ಸಿದ್ದಪ್ರಸಾದ ವಂದಿಸಿದರು, ಮನೋಹರ ವಿಶ್ವಕರ್ಮ, ಬಸವರಾಜ ಜಾಯಿ, ಮಹಾದೇವಪ್ಪ ಶಹಾಪುರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here