ಲಿಂಗಸ್ಗೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ನ ಲಿಂಗಸ್ಗೂರು ತಾಲೂಕು ಸಮ್ಮೇಳನ ಇಂದು ಪಟ್ಟಣದ ಗುರಭವನದಲ್ಲಿ ಜರುಗಿತು.
ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು)ರಾಜ್ಯ ಜಂಟಿ ಕಾರ್ಯದರ್ಶಿ ಶಬ್ಬೀರ್, ದುಡಿಯುವ ವರ್ಗದ ಹೋರಾಟದ ಫಲವಾಗಿ ರಚನೆಗೊಂಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹಿತಗೊಂಡಿರುವ ಸಾವಿರಾರು ಕೋಟಿ ರೂಪಾಯಿ ಹಣ ದುರುಪಯೋಗ ಆಗುತ್ತಿದೆ. ನ್ಯಾಯಾಲಯ ಕಾರ್ಮಿಕರಿಗೆ ಹಣ ಪಾವತಿಸುವಂತೆ ಖಡಕ್ ಆದೇಶ ನೀಡಿದ್ದರೂ ಸರಕಾರಗಳು ಪಾಲಿಸುತ್ತಿಲ್ಲ ಎಂದು ಹೇಳಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗಪ್ಪ ಎಂ ನಿರೂಪಿಸಿದರು. ವೆಂಕಟೇಶ ವಂದಿಸಿದರು.
ಈ ಸಂದರ್ಭಗಳಲ್ಲಿ ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಸಿಐಟಿಯು ತಾಲೂಕು ಸಂಚಾಲಕ ಮಹಮ್ಮದ್ ಹನೀಫ್, ಆಟೋ ಯೂನಿಯನ್ ಅಧ್ಯಕ್ಷ ಬಾಬಾಜಾನಿ, ಸಿಬ್ಲ್ಯೂಎಫ್ ಐ ಮುಖಂಡರಾದ ಗೀತಾ ನಿಲೋಗಲ್, ಫಾಲ್ ಸನ್, ಸಿಐಟಿಯು ಹಟ್ಟಿ ಚಿನ್ನದ ಗಣಿ ಘಟಕದ ಉಪಾಧ್ಯಕ್ಷ ಫಕೃದ್ದೀನ್, ಅಲ್ಲಾಭಕ್ಷ, ಭೀಮಣ್ಣ ಉಪ್ಪೇರಿ, ಯೂಸುಫ್ ಸಾಬ್ ಗ್ವಾಡಿಕರ್, ಶಾಂತಪ್ಪ ಮೇಸ್ತ್ರಿ, ಎಸ್ಎಫ್ಐ ಮುಖಂಡ ವಿಶ್ವ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.