-
ಮರಿಗೌಡ ಬಾದರದಿನ್ನಿ
ಕೊಪ್ಪಳ: ಕೊಪ್ಪಳದ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ವಾಸವಿದ್ದು ಐದು ಮಕ್ಕಳು ಇಂದು ಬೆಳಿಗ್ಗೆ ದುರಂತದ ಸಾವನಪ್ಪಿದ್ದಾರೆ. ಸ್ವಾತಂತ್ರ್ಯೋತ್ಸವಕ್ಕೆಂದು ಇಟ್ಟಿದ್ದ ಧ್ವಜದ ಕಂಬವೂ ಕೇಬಲ್ ಮತ್ತು ವಿದ್ಯುತ್ ವೈರಿನ ಮೇಲೆ ಬಿದ್ದಿದ್ದು ಅದನ್ನು ತೆರವುಗೊಳಿಸಲು ಹೋದ ಐವರು ವಿದ್ಯಾರ್ಥಿಗಳಿಗೆ ಕರೆಂಟ್ ಶಾಕ್ ತಗುಲಿ ಮೃತಪಟ್ಟಿರುವ ದುರ್ಘಟನೆ ಇಂದು ಮುಂಜಾನೆ ಕೊಪ್ಪಳ ನಗರದಲ್ಲಿ ಜರುಗಿದೆ.
ಘಟನೆಯ ಹಿನ್ನೆಲೆ ಹಾಗೂ ಕಾರಣವೇನು?
ರಾಜ್ಯದ ಅರ್ಧದಷ್ಟು ಹಾಸ್ಟೆಲ್ ಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಎಲ್ಲಾ ಹಾಸ್ಟೆಲ್ ಗಳಿಗೂ ಸ್ವಂತ ಕಟ್ಟಡ ನಿರ್ಮಿಸುವಲ್ಲಿ ಎಲ್ಲಾ ಸರ್ಕಾರಗಳೂ ವಿಫಲವಾಗಿವೆ. ಈ ಖಾಸಗಿ ಕಟ್ಟಡಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿರುವುದಿಲ್ಲ. ಇದೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ.
ಕೊಪ್ಪಳದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ಸ್ವಂತ ಕಟ್ಟಡವಿಲ್ಲ. ಇರುವ ಬಾಡಿಗೆ ಕಟ್ಟಡದ ಪಕ್ಕದಲ್ಲಿಯೇ ಹೆವಿ ವಿದ್ಯುತ್ ಟ್ರಾನ್ಸ್ಫಾರ್ಮ್ ಇದ್ದು ಅದರ ಕೇಬಲ್ ಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ವಾತಂತ್ರ್ಯೋತ್ಸವಕ್ಕೆಂದು ಬಾಡಿಗೆಗೆ ತಂದು ನೆಟ್ಟಿದ್ದ ಧ್ವಜಕಂಬವನ್ನು ಕೋತಿಗಳು ಬೀಳಿಸಿವೆ. ಕೇಬಲ್ ಮೇಲೆ ಬಿದ್ದಿದ್ದ ಧ್ವಜಕಂಬವನ್ನು ತೆರೆವುಗೊಳಿಸಲು ಹೋದ ವಿದ್ಯಾರ್ಥಿಗಳಿಗೆ ಒಬ್ಬರಿಂದ ಒಬ್ಬರಿಗೆ ವಿದ್ಯುತ್ ಹರಡಿ ವಿದ್ಯಾರ್ಥಿಗಳು ಧಾರುಣ ಸಾವಿಗಿಡಾಗಿದ್ದಾರೆ.
ಸಾವಿರಾರು ಕನಸು ಹೊತ್ತು ಓದಿಗೆಂದು ಮನೆಬಿಟ್ಟು ಕೊಪ್ಪಳದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ದಾಖಲಾದ ಈ ಐದು ವಿದ್ಯಾರ್ಥಿಗಳಲ್ಲಿ ಮಲ್ಲಿಕಾರ್ಜುನ ಮತ್ತು ಬಸವರಾಜ ಎಸ್.ಎಸ್.ಎಲ್.ಸಿ ಓದುತ್ತಿದ್ದರೆ ಇನ್ನು ದೇವರಾಜ ಮತ್ತು ಕುಮಾರ 9ನೇ ತರಗತಿ ಓದುತ್ತಿದ್ದಾರೆ. ಇನ್ನೊರ್ವ ಗಣೇಶ 8ನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳಿಂದ ಕೆಲಸ ಮಾಡಿಸೊದು ಬಾಲ ಕಾರ್ಮಿಕ ನಿರ್ಮೂಲನೆ ಕಾಯ್ದೆ ಅಡಿಯಲ್ಲಿ ಅಪರಾದವಾಗಿದೆ ಯಾವುದೇ ಹಾಸ್ಟೆಲ್ ಗಳಲ್ಲಿ ಇತರೆ ಕೆಲಸವನ್ನು ಮಾಡಲು ‘ಡಿ’ ದರ್ಜೆಯ ನೌಕರನ್ನು ನೇಮಕ ಮಾಡಲಾತ್ತದೆ ಹಾಗಿದ್ದಾಗ್ಯೂ ಕೂಡ ಕೊಪ್ಪಳದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕೆಲಸವಹಿಸಿದ ಮೇಲ್ವಾಚರನ ಕೃತ್ಯ ಹಾಗೂ ಜೆಸ್ಕಾಂ ಅಧಿಕಾರಿಗಳ ಹೊಣೆಗಾರಿಕೆಯ ವಿಮುಕ್ತತತೆಯಿಂದ ಮತ್ತು ಖಾಸಗಿ ಕಟ್ಟಡದ ಅಸುರಕ್ಷಿತೆಯಿಂದಾಗಿ ಈ ವಿದ್ಯಾರ್ಥಿಗಳು ದಾರಣ ಸಾವಿಗಿಡಾಗಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕುಟುಂಬದ ಪೋಷಕರ ಆಕ್ರಂದನ ಜಿಲ್ಲೆಯಲ್ಲಿ ಮುಗಿಲು ಮುಟ್ಟಿದೆ.
ವಸತಿ ನಿಲಯದ ಮೇಲೆ ನೆಟ್ವರ್ಕ್ ಕಂಬವಿದೆ..!ಕೊಪ್ಪಳದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಖಾಸಗಿ ಕಟ್ಟಡದ ಮೇಲೆ ನೆಟ್ವರ್ಕ್ ಕಂಬ ಇದೆ ಇಂತಹ ನೆಟ್ವರ್ಕ್ ಕಂಬಗಳನ್ನು ಜನಸಂದಣಿ,ಶಾಲಾಕಾಲೇಜುಗಳಿಂದ ನೂರು ಮೀಟರ್ ಗಳಷ್ಟು ದೂರದಲ್ಲಿ ನಿರ್ಮಿಸಬೇಕೆಂದು ನಿಯಮ ಇದೆ ಆದರೆ ಖಾಸಗಿ ಕಟ್ಟಡದಲ್ಲಿ ಕೊಪ್ಪಳದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕಾಗಿ ಕಟ್ಟಡ ಬಾಡಿಗೆ ತೆಗೆದುಕೊಳ್ಳುವಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು ಸ್ಪಷ್ಟವಾಗಿ ಕಾಣಬಹುದಾದಿದೆ.
ವಿವಿಧ ಸಂಘಟನೆಗಳಿಂದ ಹಕ್ಕೊತ್ತಾಯಕ್ಕೆ ಧರಣಿ
ರಾಜ್ಯದ ಎಲ್ಲಾ ಹಾಸ್ಟೆಲ್ ಗಳಿಗೂ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕು. ಪ್ರತಿ ಹಾಸ್ಟೆಲ್ ಗೂ ನಿಲಯ ಪಾಲಕರ ನೇಮಕವಾಗಬೇಕು. ಅವರು ಪ್ರತಿದಿನ ಹಾಸ್ಟೆಲ್ ಗೆ ಭೇಟಿ ನೀಡಬೇಕು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಬೇಕು. ಹಾಸ್ಟೆಲ್ ಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿ ಸ್ನೇಹಿಯಾಗಿಸಬೇಕು. ಈ ಹಕ್ಕೊತ್ತಾಯಗಳನ್ನಿಟ್ಟುಕೊಂಡು KVS, SFI ವಿದ್ಯಾರ್ಥಿಗಳು ಸಂಘಟನೆಗಳು ಸ್ಥಳದಲ್ಲಿಯೇ ಧರಣಿ ನಡೆಸಲು ಮುಂದಾಗಿವೆ.