ಕಲಬುರಗಿ: ಸಂಗೀತ ಮತ್ತು ಸಾಹಿತ್ಯದಿಂದ ಬದುಕಿನಲ್ಲಿ ಸುಧಾರಣೆ ಕಂಡು ಬದಲಾವಣೆ ಹೊಂದಲು ಸಾಧ್ಯವಿದೆ. ಈ ದಿಸೆಯಲ್ಲಿ ಉತ್ತಮ ಜೀವನಕ್ಕೆ ದಾರಿದೀಪವಾಗಲಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ಕನ್ನಡ ಭವನದ ಸಭಾಭವನದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆಯಿಂದ ಪಂಡಿತ ಪಂಚಾಕ್ಷರ ಗವಾಯಿಗಳವರ 79ನೇ ಹಾಗೂ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಮಾರಾಧನೆ, ರಾಜ್ಯಮಟ್ಟದ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿ, ಜಾಗತಿಕ ಮಟ್ಟದಲ್ಲಿ ಭಾರತದ ಹಿಂದೂಸ್ಥಾನಿ ಮತ್ತು ಶಾಸ್ತ್ರೀಯ ಸಂಗೀತ ತನ್ನದೆ ಘನತೆವಿದೆ. ಉಳಿದ ಪಾಶ್ಚಾತ್ಯ ಸಂಗೀತಗಳು ಅವಸನದ ಅಂಚಿಗೆ ತಲುಪಿದ್ದು, ಈ ನಿಟ್ಟಿನಲ್ಲಿ ದೇಶಿಯ ಸಂಸ್ಕøತಿ ಉಳಿಸಿ ಬೆಳೆಸೋಣ ಎಂದು ಸಲಹೆ ನೀಡಿದರು.
ಜುಲೈ 1 ರಿಂದ ಸಂಗೀತ ಕಲಾವಿದರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಸಾಹಿತ್ಯ, ಸಂಗೀತ ಒಂದುಕ್ಕೊಂದು ಆವಿನಾಭವ ಸಂಬಂಧವಿದೆ. ಕಲಾವಿದರು ಬಡವರಾದರೂ ಕಲೆ ಶ್ರೀಮಂತಿಕೆಯಿಂದ ಕೂಡಿರುತ್ತದೆ. – ವಿಜಯಕುಮಾರ ತೇಗಲತಿಪ್ಪಿ, ಜಿಲ್ಲಾಧ್ಯಕ್ಷರು, ಕಸಾಪ
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಲಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಶಿವಶರಣಪ್ಪ ಕೋಬಾಳ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು.
ವೇದಿಕೆ ಮೇಲೆ ಪ್ರವೀಣ ವಿದ್ಯಾ ಸಂಸ್ಥೆ ಅಧ್ಯಕ್ಷ ನಾಗರಾಜ ಕಾಂಬಳೆ, ಮಹಾಜನ ಫೌಂಡೇಷನ್ ಅಧ್ಯಕ್ಷ ಶಿವಕಾಂತ ಮಹಾಜನ, ಕಾಂಗ್ರೆಸ್ ಮುಖಂಡರಾದ ಶರಣಗೌಡ ಪಾಟೀಲ್, ಲಚ್ಚಪ್ಪ ಜಮಾದಾರ್ ಇದ್ದರು. ನಂತರ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ನಾಗಲಿಂಗಯ್ಯ ಸ್ಥಾವರಮಠ ನಿರೂಪಿಸಿದರು. ವಿಶ್ವನಾಥ ತೋಟ್ನಳ್ಳಿ ಸ್ವಾಗತಿಸಿದರು.
ಹಿರಿಯ ಪತ್ರಕರ್ತರಾದ ರಾಜು ದೇಶಮುಖ, ಶರಣಬಸಪ್ಪ ಜಿಡಗಾ, ಗುರುಬಸಪ್ಪ ಸಜ್ಜನಶೆಟ್ಟಿ, ಬೌದ್ಧಪ್ರಿಯ ನಾಗಸೇನ, ಮಹೇಶ ದಿವಾಕರ, ಚಂದ್ರಶೇಖರ ಕೌಲಗಾ (ಪತ್ರಿಕೋದ್ಯಮ), ಅಕ್ರಮ ಪಾಶಾ ಮೋಮಿನ್(ಟಿವಿ ಮಾಧ್ಯಮ), ಮಲ್ಲಯ್ಯ ಗುತ್ತೇದಾರ್, ಡಾ. ಶರಣಪ್ಪ ಎಸ್. ಮಾಳಗಿ, ದತ್ತಾತ್ರೇಯ ವಿಶ್ವಕರ್ಮ, ಬಸಯ್ಯಸ್ವಾಮಿ ಗದ್ದಗಿಮಠ, ರವಿ ಹೊಸಮನಿ, ರಾಜಶೇಖರ ತಲಾರಿ, ಸಿಸ್ಟರ್ ಲಿನೆಟ್ ಸಿಕ್ವೆರಾ, ಡಾ. ಕಾಶಮ್ಮ ಕೋಬಾಳ (ಶಿಕ್ಷಣ ಕ್ಷೇತ್ರ), ಮುರುಳಿಧರ ಕರಲಗಿಕರ್ (ಇಂಜಿನಿಯರಿಂಗ್, ಸಾಮಾಜಿಕ ಕ್ಷೇತ್ರ), ಮಲ್ಲಿಕಾರ್ಜುನ ಧೂಳಬಾ (ಕೃಷಿ ಕ್ಷೇತ್ರ), ಸಿದ್ದಣ್ಣಗೌಡ ಪಾಟೀಲ್, ಲಚ್ಚಪ್ಪ ಜಮಾದಾರ್, (ಸಮಾಜಸೇವೆ), ಬಿ.ಸತೀಶಕುಮಾರ, ದೇವಿಂದ್ರ ಯಡ್ರಾಮಿ, ಸೌಭಾಗ್ಯ ನೇಲೊಗಿ, (ಆಡಳಿತ ಸೇವೆ), ವಿಶ್ವನಾಥ ಶಾಸ್ರೀ, ಪ್ರೊ. ಮಹೇಶಕುಮಾರ ಬಡಿಗೇರ, ದತ್ತರಾಜ ಕಲ್ಲಶೆಟ್ಟಿ, ಸೂರ್ಯಕಾಂತ ಡುಮ್ಮಾ, ಜ್ಞಾನೇಶ್ವರ ಬೆಳಕೋಟಾ, ಮಹಾಂತಯ್ಯ ಮಂಠಾಳ, ಪರಶುರಾಮ ಗರೂರ, ತೇಜು ನಾಗೋಜಿ, ಶ್ರೀಶೈಲ ಕೊಂಡೆದ, ನಾಗಲಿಂಗಯ್ಯ ಸ್ಥಾವರಮಠ, ಶರಣಕುಮಾರ ದೇಸಾಯಿ ಕಲ್ಲೂರ, ಸಿದ್ದಾರ್ಥ ಚಿಮಾ ಇದ್ಲಾಯಿ, (ಸಂಗೀತ), ಅರುಣ ಕುಲಕರ್ಣಿ (ಛಾಯಾಗ್ರಾಹಕ), ಶಾಂತಲಿಂಗಯ್ಯ ಮಠಪತಿ (ರಂಗಭೂಮಿ) ಅವರಿಗೆ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.