ಕಲಬುರಗಿ: ಸ್ಥಳೀಯ ಕೆಬಿಎನ್ ವಿವಿಯ ವೈದ್ಯಕೀಯ ವಿಭಾಗದಲ್ಲಿ ವೈದ್ಯರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ ಭಾಗವಹಿಸಿ ಮಾತನಾಡಿದರು. ಜಗತ್ತಿನಲ್ಲಿ ವೈದ್ಯರ ಪಾತ್ರ ಬಹುಮುಖ್ಯ. ವೈದ್ಯರು ದೇವರ ಸ್ವರೂಪ ಎಂದರೆ ತಪ್ಪಾಗಲಾರದು. ಕೋವಿಡ್ ಸಮಯದಲ್ಲಿ ವೈದ್ಯರೇ ಭುವಿಯನ್ನು ಕಾಪಾಡಿದರು ಎಂದು ಅವಿರತ ಸೇವೆ ನೆನೆದರು.
ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ ಸಿದ್ದೇಶ ಇವರು ವೈದ್ಯರ ದಿನದ ಮಹತ್ವ ತಿಳಿ ಹೇಳಿದರು. ಅಲ್ಲದೇ ಪತ್ರಿಕಾ ದಿನಾಚರಣೆಯ ಶುಭಾಶಯಗಳನ್ನು ಹೇಳಿ ಪತ್ರಿಕೋದ್ಯಮ ಸಮಾಜವನ್ನು ತಿದ್ದುತ್ತದೆ ಎಂದರು. ಇದೆ ಸಂದರ್ಭದಲ್ಲಿದಲ್ಲಿ ಲೆಕ್ಕ ಪರಿಶೋಧಕ ದಿನದ ಶುಭಾಶಯಗಳನ್ನು ಕೂಡ ತಿಳಿಸಿದರು. ಲೆಕ್ಕ ಪರಿಶೋಧಕರು ಸಮಾಜದ ಶ್ರೀಮಂತಿಕೆಯನ್ನು ಕಾಪಾಡುತ್ತಾರೆ ಎಂದರು.
ಡಾ. ಬಿ. ಸಿ ರೊಯ್ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಡಾ ವಿಜಯ ಮೋಹನ್ ಅವರನ್ನು ಕೆಬಿಎನ್ ಸಂಸ್ಥೆಗೆ ನೀಡಿದ ಕೊಡುಗೆ ಮತ್ತು ಸೇವೆಗಾಗಿ ಸನ್ಮಾನಿಸಲಾಯಿತು.
ಡಾ. ಪಿ ಎಸ್ ಶಂಕರ ಸ್ವಾಗತಿಸಿದರು. ಡಾ.ಶ್ರೀರಾಜ್ ಮತ್ತು ಡಾ ಆಫನಾ ನಿರೂಪಿಸಿದರೆ, ಡಾ.ಸಂಗೀತಾ ರುದ್ರವಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ ಸಿದ್ರಾಮ್, ಸಂಶೋಧನಾ ಡೀನ್ ಡಾ. ಪಾಲಾದಿ, ಡಾ. ಗುರುಪ್ರಸಾದ್, ಡಾ. ಮೊಯಿನುದ್ದೀನ್, ಡಾ. ದೇವನಿ, ಡಾ. ರಾಧಿಕಾ ಮತ್ತು ಇತರ ವಿಭಾಗದ ಮುಖ್ಯಸ್ಥ ರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವೈದ್ಯರ ದಿನದ ಅಂಗವಾಗಿ ಏರ್ಪಡಿಸಿದ ರಕ್ತ ದಾನ ಶಿಬಿರದಲ್ಲಿ ಕೆಬಿಎನ್ ವಿವಿಯ ವೈದ್ಯರು ಮತ್ತು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.