ಶಹಾಪುರ: ಮಹಾರಾಷ್ಟ್ರದ ಮಹಾಮಳೆಗೆ ಉತ್ತರ ಕರ್ನಾಟಕ ಸಂಪೂರ್ಣ ಭೀಕರ ಪ್ರವಾಹ ಕ್ಕೊಳಗಾಗಿದ್ದು ಇಲ್ಲಿಯ ಜನರು ಮನೆಮಾರು ಕಳೆದುಕೊಂಡು ಕಂಗಾಲಾಗಿದ್ದಾರೆ ಆದ್ದರಿಂದ ನಮ್ಮ ಬೆಂಗಳೂರಿನ ಮಂಜುಶ್ರೀ ಸೇವಾ ಟ್ರಸ್ಟ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ಸಮಾಜದಲ್ಲಿ ಯಾರೇ ತೊಂದರೆಗೀಡಾದ ಅವರನ್ನು ಸಂತೈಸಿ ಆತ್ಮಸ್ಥೈರ್ಯ ತುಂಬಿ ಅವರಿಗೆ ಮೂಲಭೂತ ಸೌಲಭ್ಯಗಳು ಒದಗಿಸುವುದೇ ಮಾನವೀಯತೆ ಎಂದು ತಂಡದ ಮುಖ್ಯಸ್ಥೆ ಮಂಜುಶ್ರೀ ಹೇಳಿದರು. ನಿಮ್ಮ ನೋವಿಗೆ ನಮ್ಮ ತಂಡ ಸದಾ ನಿಮ್ಮೊಂದಿಗೆ ಇರುತ್ತದೆ ಯಾರೂ ಎದೆಗುಂದಬೇಡಿ ಕುಗ್ಗಬೇಡಿ ಸಂತೋಷದಿಂದ ಜೀವನ ಪ್ರಾರಂಭಿಸಿ ಎಂದು ಆತ್ಮ ಸ್ಥೈರ್ಯ ತುಂಬಿ ಮಾತನಾಡಿದರು.
ಮಂಜುಶ್ರೀ ಅವರ ನೇತೃತ್ವದಲ್ಲಿ ಬೆಂಗಳೂರಿನ ನಮ್ಮ ತಂಡ ಹಾಗೂ ಇತರ ಸ್ನೇಹಿತರೊಂದಿಗೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಯಕ್ಷಿಂತಿ ಗ್ರಾಮದ ಪ್ರವಾಹ ಪೀಡಿತರಿಗೆ ನೆರೆ ಸಂತ್ರಸ್ತರಿಗಾಗಿ ತಂದಿರುವ ದಿನಬಳಕೆ ವಸ್ತುಗಳಾದ ರಗ್ಗು, ಚಾಪೆ, ಬಟ್ಟೆ, ಸೀರೆ, ಟವೆಲ್, ಕನ್ನಡಿ, ಬಾಚಣಿಕೆ ಇನ್ನಿತರ ಗೃಹಬಳಕೆ ವಸ್ತುಗಳು ವಿತರಿಸಿ ನಿಜವಾಗಿ ನೋವಿನಲ್ಲಿ ರುವವರನ್ನು ಸ್ಪಂದಿಸುವುದೇ ನಿಜವಾದ ಬದುಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಮ೦ಜುಶ್ರೀ ಸೇವಾ ಟ್ರಸ್ಟಿನ ಸದಸ್ಯರಾದ ಸಾವಿತ್ರಮ್ಮ, ಈಶ್ವರ್ ,ಗೋಪಾಲ್ ಶಾಲಿನಿ ಪ್ರವೀಣ್, ಹಾಗೂ ಇತರರು ಹಾಜರಿದ್ದರು.