ಕಲಬುರಗಿ: ರಾಜು ಬಿ ಹಡಪದವರು ಸುಮಾರು 20 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು, ಸೇಡಂ ಸವಿತಾ ಸಮಾಜದ ತಾಲೂಕ ಅಧ್ಯಕ್ಷರಾಗಿ ಸಮಾಜದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ ಸ್ಥಳೀಯ ಶಾಸಕರ ಅನುದಾನ ಅಡಿಯಲ್ಲಿ ಸವಿತಾ ಭವನ ನಿರ್ಮಿಸಿದ್ದಾರೆ. ಮುಂದುವರೆದು ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಸಕ್ರಿಯ ಕಾರ್ಯಕರ್ತರಾಗಿ ಸೇಡಂ ಪುರಸಭೆಯ ನಾಮ ನಿರ್ದೇಶಕ ಸದಸ್ಯರಾಗಿ ಕಾಂಗ್ರೆಸ್ ಪಾರ್ಟಿಯ ಸೇಡಂ ಬ್ಲಾಕ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗು ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಸಂಘಟಿತ ಕಾರ್ಮಿಕರ ಸೇಡಂ ಬ್ಲಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ ಹಾಗೂ ನಾಯಕ ವೈದ್ಯಕೀಯ ಶಿಕ್ಷಣ ಹಾಗು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರ ಆಪ್ತರಾಗಿದ್ದು, ಅವರ ನೆರಳಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ ಹಾಗೂ ಸವಿತಾ ಸಮಾಜ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ್ದಾರೆ. ಆದಕಾರಣ ಇವರಿಗೆ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷನಾಗಿ ನೇಮಿಸಬೇಕೆಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶರಣಬಸ್ಸಪ್ಪ ಎಂ.ಸೂರ್ಯವಂಶಿ, ಗೌರವಾಧ್ಯಕ್ಷ ಅಂಬರೇಶ ಮಂಗಲಗಿ, ಉಪಾಧ್ಯಕ್ಷ ಮಲ್ಲಕಾರ್ಜುನ ಎಸ್.ಧಮ್ಮೂರ, ಹಾಗೂ ಎಲ್ಲಾ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಸರಕಾರಕ್ಕೆ ಮನವಿ ಮಾಡಿದ್ದಾರೆ.
ರಾಜು.ಬಿ ಹಡಪದ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಮಾಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ರಾಮಯ್ಯ ಅವರಿಗೆ ಜಿಲ್ಲಾ ಸವಿತಾ ಸಮಾಜದ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಜಿ.ಬೆಣ್ಣೂರ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.