ಕಲಬುರಗಿ: ತಾಲೂಕಿನ ಪಾಣೆಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲಾರ್ಸನ್ ಮತ್ತು ಟುರ್ಬೊ ಸಂಸ್ಥೆಯು ಒದಗಿಸಿದ ಮೂಲಸೌಕರ್ಯ ಮತ್ತು ಪೀಠೋಪಕರಣ ಹಾಗೂ ಕ್ರೀಡಾ ಸಾಮಾಗ್ರಿಗಳನ್ನು ಇಂದು ಒದಗಿಸಲಾಯಿತು.
ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡುತ್ತ, ಭಾರತ ದೇಶದಲ್ಲಿಯೇ ಮೂಲಸೌಕರ್ಯ ಮತ್ತು ನಿರ್ಮಾಣದ ಸಂಸ್ಥೆಯಾಗಿರುವ ಎಲ್&ಟಿ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಶಾಲೆಗಳನ್ನು ಆಯ್ಕೆ ಮಾಡಿ ಶಾಲೆಗಳಿಗೆ ಬೇಕಾಗುವ ಮೂಲಕ ಸೌಕರ್ಯ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಸನ ಮತ್ತು ವಿದ್ಯಾರ್ಥಿಗಳಿಗೆ ಆಟೋಪಕರಣ ವಿತರಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಎಲ್ & ಟಿಯ ದಕ್ಷಿಣ ವಿಭಾಗದ ಕಾರ್ಯಾಚರಣೆಯ ಮುಖ್ಯಸ್ಥರಾದ ಇ ಮೋಹನರಾಜ್, ಎನ್‍ಎಚ್‍ಎಐ, ಪಿಐಯು ಕಲಬುರಗಿಯ ಇಂಜಿನಿಯರಾದ ಕರುಣಾಕರ್, ಪಾಣೆಗಾಂವ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಚಾರ್ಯ ಶರಣಪ್ಪ, ಎಲ್& ಟಿಯ ಎಚ್.ಆರ್. ಸಹಾಯಕ ಮ್ಯಾನೇಜರ್ ಓಕೆ ನೂರ್ ಮೊಹಮ್ಮದ್, ಎಲ್&ಟಿಯ ಯೋಜನಾ ವ್ಯವಸ್ಥಾಪಕರಾದ ರಾಜೇಶ್ ಗೆಡೇಲಾ ಅವರು ಅತಿಥಿಗಳಾಗಿ ಆಗಮಿಸಿದ್ದರು.
ಸುಮಾರು ಶಾಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಎಲ್&ಟಿಯ ಸಿಬ್ಬಂದಿಗಗಳಾದ ಬಾಲಾಜಿ, ಸುಧಾಗರ್, ಉದಯ್, ಮನೋಜ್, ರವಿ, ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.